Connect with us

Latest

ಭಾರತದ ಶ್ರೇಷ್ಠ ಫುಟ್ಬಾಲ್ ಆಟಗಾರ ಪಿ.ಕೆ.ಬ್ಯಾನರ್ಜಿ ನಿಧನ

Published

on

ಕೋಲ್ಕತ್ತಾ: ಭಾರತ ಶ್ರೇಷ್ಠ ಫುಟ್ಬಾಲ್ ಆಟಗಾರ ಪಿ.ಕೆ.ಬ್ಯಾನರ್ಜಿ (83) ಕೋಲ್ಕತ್ತಾದ ಮೆಡಿಕಾ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.

ಪಿ.ಕೆ.ಬ್ಯಾನರ್ಜಿ ಅವರು ನ್ಯುಮೋನಿಯಾ ಕಾರಣದಿಂದಾಗಿ ಮಾರ್ಚ್ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ಅನೇಕ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮಧ್ಯಾಹ್ನ 12:30ರ ಸುಮಾರಿಗೆ ಕೊನೆಯುಸಿರೆಳೆದರು.

ಅಂತರರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಷನ್ ಪಿ.ಕೆ.ಬ್ಯಾನರ್ಜಿ ಅವರನ್ನು 20ನೇ ಶತಮಾನದಲ್ಲಿ ಭಾರತದ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಘೋಷಿಸಿತ್ತು. ಫಿಫಾ 2004ರಲ್ಲಿ ಬ್ಯಾನರ್ಜಿ ಅವರಿಗೆ ಆರ್ಡರ್ ಆಫ್ ಮೆರಿಟ್ ನೀಡಿ, ಗೌರವಿಸಿತ್ತು.

ಬ್ಯಾನರ್ಜಿ ಅವರು ಪಾರ್ಕಿನ್ಸನ್, ಹೃದ್ರೋಗ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. ಅವರ ಕಿರಿಯ ಸಹೋದರ ಪ್ರಸೂನ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಸಂಸದರಾಗಿದ್ದಾರೆ. ಪಿ.ಕೆ.ಬ್ಯಾನರ್ಜಿ ಅವರು 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್ಬಾಲ್ ತಂಡದ ನಾಯಕರಾಗಿದ್ದರು.

ಬ್ಯಾನರ್ಜಿ ಅವರು 1962ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ, ಸ್ಟ್ರೈಕರ್ ಆಗಿದ್ದರು. 1936ರ ಜೂನ್ 23ರಂದು ಜಲ್‍ಪೈಗುರಿಯಲ್ಲಿ ಜನಿಸಿದ್ದ ಬ್ಯಾನರ್ಜಿ ವಿಭಜನೆಯ ನಂತರ ಜಮ್ಶೆಡ್‍ಪುರಕ್ಕೆ ಬಂದಿದ್ದರು. ಅವರು ಇಲ್ಲಿಂದ ಫುಟ್ಬಾಲ್ ಆಡಲು ಪ್ರಾರಂಭಿಸಿದ್ದರು. ಭಾರತ ಪರ 84 ಪಂದ್ಯಗಳನ್ನು ಆಡಿದ್ದ ಬ್ಯಾನರ್ಜಿ 65 ಗೋಲು ಗಳಿಸಿದ್ದರು. ಅವರು 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತದ ನಾಯಕತ್ವ ವಹಿಸಿದ್ದರು. ಫ್ರಾನ್ಸ್ ವಿರುದ್ಧ 1-1 ಗೋಲ್ ಗಳಿಂದ ಪಂದ್ಯವು ಡ್ರಾ ಆಗಿದ್ದರಿಂದ ಭಾರತವು ಸಮಬಲ ಸಾಧಿಸಿತ್ತು. ಅವರು 1956ರ ಮೆಲ್ಬರ್ನ್ ಒಲಿಂಪಿಕ್ ಆಡುವ ಭಾರತೀಯ ತಂಡದ ಸದಸ್ಯರಾಗಿದ್ದರು. ಆಗ ಭಾರತ ತಂಡವು ಆಸ್ಟ್ರೇಲಿಯಾವನ್ನು 4-1ರಿಂದ ಮಣಿಸಿ ನಾಲ್ಕನೇ ಸ್ಥಾನ ಗಳಿಸಿತ್ತು.

Click to comment

Leave a Reply

Your email address will not be published. Required fields are marked *