ಕೋಲ್ಕತ್ತಾ: ಭಾರತ ಶ್ರೇಷ್ಠ ಫುಟ್ಬಾಲ್ ಆಟಗಾರ ಪಿ.ಕೆ.ಬ್ಯಾನರ್ಜಿ (83) ಕೋಲ್ಕತ್ತಾದ ಮೆಡಿಕಾ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.
ಪಿ.ಕೆ.ಬ್ಯಾನರ್ಜಿ ಅವರು ನ್ಯುಮೋನಿಯಾ ಕಾರಣದಿಂದಾಗಿ ಮಾರ್ಚ್ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ಅನೇಕ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮಧ್ಯಾಹ್ನ 12:30ರ ಸುಮಾರಿಗೆ ಕೊನೆಯುಸಿರೆಳೆದರು.
Advertisement
Advertisement
ಅಂತರರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಷನ್ ಪಿ.ಕೆ.ಬ್ಯಾನರ್ಜಿ ಅವರನ್ನು 20ನೇ ಶತಮಾನದಲ್ಲಿ ಭಾರತದ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಘೋಷಿಸಿತ್ತು. ಫಿಫಾ 2004ರಲ್ಲಿ ಬ್ಯಾನರ್ಜಿ ಅವರಿಗೆ ಆರ್ಡರ್ ಆಫ್ ಮೆರಿಟ್ ನೀಡಿ, ಗೌರವಿಸಿತ್ತು.
Advertisement
ಬ್ಯಾನರ್ಜಿ ಅವರು ಪಾರ್ಕಿನ್ಸನ್, ಹೃದ್ರೋಗ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. ಅವರ ಕಿರಿಯ ಸಹೋದರ ಪ್ರಸೂನ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಸಂಸದರಾಗಿದ್ದಾರೆ. ಪಿ.ಕೆ.ಬ್ಯಾನರ್ಜಿ ಅವರು 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್ಬಾಲ್ ತಂಡದ ನಾಯಕರಾಗಿದ್ದರು.
Advertisement
All of us at Mumbai City FC are deeply saddened to hear about the passing away of PK Banerjee, an absolute legend in the annals of Indian sport.
Truly, a huge loss for the nation's footballing fraternity. Rest in peace. pic.twitter.com/Vel2Eq2sE2
— Mumbai City FC (@MumbaiCityFC) March 20, 2020
ಬ್ಯಾನರ್ಜಿ ಅವರು 1962ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ, ಸ್ಟ್ರೈಕರ್ ಆಗಿದ್ದರು. 1936ರ ಜೂನ್ 23ರಂದು ಜಲ್‍ಪೈಗುರಿಯಲ್ಲಿ ಜನಿಸಿದ್ದ ಬ್ಯಾನರ್ಜಿ ವಿಭಜನೆಯ ನಂತರ ಜಮ್ಶೆಡ್‍ಪುರಕ್ಕೆ ಬಂದಿದ್ದರು. ಅವರು ಇಲ್ಲಿಂದ ಫುಟ್ಬಾಲ್ ಆಡಲು ಪ್ರಾರಂಭಿಸಿದ್ದರು. ಭಾರತ ಪರ 84 ಪಂದ್ಯಗಳನ್ನು ಆಡಿದ್ದ ಬ್ಯಾನರ್ಜಿ 65 ಗೋಲು ಗಳಿಸಿದ್ದರು. ಅವರು 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತದ ನಾಯಕತ್ವ ವಹಿಸಿದ್ದರು. ಫ್ರಾನ್ಸ್ ವಿರುದ್ಧ 1-1 ಗೋಲ್ ಗಳಿಂದ ಪಂದ್ಯವು ಡ್ರಾ ಆಗಿದ್ದರಿಂದ ಭಾರತವು ಸಮಬಲ ಸಾಧಿಸಿತ್ತು. ಅವರು 1956ರ ಮೆಲ್ಬರ್ನ್ ಒಲಿಂಪಿಕ್ ಆಡುವ ಭಾರತೀಯ ತಂಡದ ಸದಸ್ಯರಾಗಿದ್ದರು. ಆಗ ಭಾರತ ತಂಡವು ಆಸ್ಟ್ರೇಲಿಯಾವನ್ನು 4-1ರಿಂದ ಮಣಿಸಿ ನಾಲ್ಕನೇ ಸ್ಥಾನ ಗಳಿಸಿತ್ತು.
Heartfelt condolences on the passing of the great Indian footballer PK Banerjee!
Have fond memories of meeting him on a few occasions and the positivity he spread.
May his soul Rest In Peace!???????? pic.twitter.com/NqXO2A91wc
— Sachin Tendulkar (@sachin_rt) March 20, 2020