40 ವರ್ಷಗಳ ಬಳಿಕ ಕಾನ್ಸ್ ಚಿತ್ರೋತ್ಸವಕ್ಕೆ ಭಾರತದ ಸಿನಿಮಾ ಆಯ್ಕೆ

Public TV
1 Min Read
All We Imagine As Light 1

ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವಕ್ಕೆ (Cannes Film Festival)  ಭಾರತದಿಂದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine As Light) ಹೆಸರಿನ ಸಿನಿಮಾ ಆಯ್ಕೆಯಾಗಿದೆ. ಪಾಯಲ್ ಕಾಪಾಡಿಯಾ (Payal Kapadia) ನಿರ್ದೇಶನದ ಈ ಸಿನಿಮಾ ಮೂಡಿ ಬಂದಿದ್ದು, ಮುಂಬೈಗೆ ಬಂದ ಕೇರಳದ ಇಬ್ಬರು ವಲಸೆ ದಾದಿಯರ ಕಥೆಯನ್ನು ಇದು ಒಳಗೊಂಡಿದೆ.

All We Imagine As Light 2

ನಲವತ್ತು ವರ್ಷಗಳಿಂದ ಭಾರತದ ಯಾವುದೇ ಸಿನಿಮಾ ಕಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿರಲಿಲ್ಲ. ನಾಲ್ಕು ದಶಕಗಳ ನಂತರ ಭಾರತದ ಚಿತ್ರವೊಂದು ಕಾನ್ಸ್ ಗೆ ಆಯ್ಕೆ ಆಗುವ ಮೂಲಕ ಸಹಜವಾಗಿ ಸಂಭ್ರಮಕ್ಕೆ ಕಾರಣವಾಗಿದೆ.

1983ರಲ್ಲಿ ತೆರೆಕಂಡ ಮೃಣಾಲ್ ಸೇನ್ ಅವರ ಖಾರಿಜ್ ಸಿನಿಮಾ ಕಾನ್ಸ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಆನಂತರ ಯಾವುದೇ ಸಿನಿಮಾಗೆ ಅಂತಹ ಅವಕಾಶ ಸಿಕ್ಕಿರಲಿಲ್ಲ. ಮೇ 14 ರಿಂದ 25ವರೆಗೂ ಈ ಚಿತ್ರೋತ್ಸವ ಕ್ಯಾನೆಸ್ ಫಿಲ್ಮ್ ಗಾಲಾದಲ್ಲಿ ನಿಗದಿಯಾಗಿದೆ.

Share This Article