ನೇಪಾಳದಲ್ಲಿ ಭೂಕಂಪಕ್ಕೆ ಮನೆ ಕಳೆದುಕೊಂಡವರಿಗೆ 50 ಸಾವಿರ ಮನೆ ಕಟ್ಟಿಕೊಟ್ಟ ಭಾರತ

Public TV
1 Min Read
HOUSE BILLDING

ಕಠ್ಮಂಡು: ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಭೂಕಂಪದಿಂದ ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಇದೀಗ ಭಾರತ ಸರ್ಕಾರ ಮನೆಕಳೆದುಕೊಂಡವರಿಗೆ 50 ಸಾವಿರ ನೂತನ ಮನೆಗಳನ್ನು ಸಿದ್ಧಪಡಿಸಿದೆ.

HIUSEBILLDING

ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಸಾವಿರಾರು ಮನೆ, ಆಸ್ತಿ, ಪಾಸ್ತಿ ಜೀವ ಹಾನಿ ಸಂಭವಿಸಿತ್ತು. ಬಳಿಕ ಬದುಕುಳಿದವರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು ಅಂತವರಿಗೆ ನೆರವಾದ ಭಾರತ ಸರ್ಕಾರ ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ 50 ಸಾವಿರ ಮನೆಗಳ ನಿರ್ಮಾಣ ಮಾಡಿದೆ. ಇದನ್ನೂ ಓದಿ: ಹಾಡಹಗಲೇ ಕೇರಳದಲ್ಲಿ RSS ಕಾರ್ಯಕರ್ತನ ಬರ್ಬರ ಹತ್ಯೆ

ಭಾರತ ಸರ್ಕಾರ, ರಾಷ್ಟ್ರೀಯ ಪುನರ್ ನಿರ್ಮಾಣ ಪ್ರಾಧಿಕಾರ (NRA), ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (UNDP) ಮತ್ತು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ (UNOPS) ಸಹಯೋಗದಲ್ಲಿ ಮನೆಗಳ ನಿರ್ಮಾಣ ಕಾರ್ಯವಾಗುತ್ತಿದ್ದು, ಇಂದು ಭಾರತೀಯ ರಾಯಭಾರ ಕಚೇರಿ ಕಾರ್ಯಕ್ರಮ ಆಯೋಜನೆ ಮಾಡಿ ಮನೆ ನಿರ್ಮಾಣ ಪೂರ್ಣಗೊಂಡಿರುವ ಬಗ್ಗೆ ಘೋಷಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ

ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ, ಭಾರತದ ರಾಯಭಾರ ಕಚೇರಿಯ ಉಪ ಮುಖ್ಯಸ್ಥರು ನಮ್‍ಗ್ಯಾಸಿ ಖಂಪಾ, ಭಾರತ ಸರ್ಕಾರವು ನೇಪಾಳದಲ್ಲಿ 50 ಸಾವಿರ ಖಾಸಗಿ ಮನೆಗಳ ಮರುನಿರ್ಮಾಣವನ್ನು ಪೂರ್ಣಗೊಳಿಸಿರುವ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಇಡೀ ದೇಶದಲ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ – ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

ವಸತಿ ಕಳೆದುಕೊಂಡ ನಿರಾಶ್ರಿತರಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಮುಂದಾಗಿರುವ ಭಾರತ ಸರ್ಕಾರ ವಸತಿ ಕಲ್ಪಿಸಿಕೊಡಲು ಈಗಾಗಲೇ 150 ಮಿಲಿಯನ್ 1,116 ಕೋಟಿ ರೂ.ಗಳನ್ನು ವಿನಿಯೋಗಿಸಿದ್ದು, ನೇಪಾಳದ 71 ಶಿಕ್ಷಣ ಕ್ಷೇತ್ರದ ಯೋಜನೆಗಳು, 132 ಆರೋಗ್ಯ ಕಟ್ಟಡಗಳು ಮತ್ತು 28 ಪರಂಪರಿಕ ತಾಣಗಳ ಮರು ನಿರ್ಮಾಣ ಕಾರ್ಯಕ್ಕೆ ಭಾರತ ಸರ್ಕಾರ ಎನ್‍ಆರ್‍ಎ ಜೊತೆ ಕೈಜೋಡಿಸಿ ಈಗಾಗಲೇ 50 ಸಾವಿರ ಮನೆಗಳನ್ನು ನಿರ್ಮಾಣಮಾಡಿ ಹಸ್ತಾಂತರ ಮಾಡಲು ಸಿದ್ಧಗೊಂಡಿದೆ. 2015ರಲ್ಲಿ ನಡೆದ ಭೂಕಂಪಕ್ಕೆ ನೇಪಾಳದ 11 ಜಿಲ್ಲೆಗಳು ತತ್ತರಿಸಿ ಹೋಗಿತ್ತು. ಇದೀಗ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ.

Share This Article