ಗಾಂಧಿನಗರ: ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ ಎಂದು ಹೇಳುವ ಮೂಲಕ ಟೀಂ ಇಂಡಿಯದ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜಾ(Ravinder Jadeja ) ಆರ್‌ಎಸ್‍ಎಸ್ ಮತ್ತು ಅದರ ಸಿದ್ಧಾಂತವನ್ನು ಹೊಗಳಿದ್ದಾರೆ.
ಗುಜರಾತ್‍ನಲ್ಲಿ ಬಿಜೆಪಿಯಿಂದ(BJP) ಗೆದ್ದಿರುವ ಪತ್ನಿ ರಿವಾಬಾ(Rivaba) ವಿಡಿಯೋವನ್ನು ಟ್ವೀಟ್ ಮಾಡಿ ಜಡೇಜಾ ಆರ್‌ಎಸ್‌ಎಸ್(RSS) ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಆರ್‌ಎಸ್‌ಎಸ್ ಬಗ್ಗೆ ನಿಮ್ಮ ಜ್ಞಾನವನ್ನು ನೋಡಿ ತುಂಬಾ ಸಂತೋಷವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ ಆದರ್ಶಗಳನ್ನು ಉತ್ತೇಜಿಸುವ ಸಂಸ್ಥೆ. ನಿಮ್ಮ ಜ್ಞಾನ ಮತ್ತು ಕಠಿಣ ಪರಿಶ್ರಮವೇ ನಿಮ್ಮನ್ನು ಪ್ರತ್ಯೇಕಿಸುತ್ತದೆ. ಇದನ್ನು ಮುಂದುವರಿಸಿ ಎಂದು ಜಡೇಜಾ ಪತ್ನಿಯ ಮಾತಿಗೆ ಚಪ್ಪಾಳೆ ತಟ್ಟಿದ್ದಾರೆ.
Advertisement
It's so good to see your knowledge about the RSS. An organisation which promotes the ideals of upholding Indian culture and the values of our society. Your knowledge and hardwork is what sets you apart. Keep it up. ???? @Rivaba4BJP pic.twitter.com/Ss5WKTDrWK
— Ravindrasinh jadeja (@imjadeja) December 26, 2022
Advertisement
ವೀಡಿಯೋದಲ್ಲಿ ಏನಿದೆ?
ಕಾರ್ಯಕ್ರಮ ಒಂದರಲ್ಲಿ ಪತ್ರಕರ್ತರೊಬ್ಬರು ಆರ್‌ಎಸ್‍ಎಸ್ ಬಗ್ಗೆ ರಿವಾಬಾ ಜಡೇಜಾಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ರಿವಾಬಾ, ಆರ್‌ಎಸ್‍ಎಸ್ ಬಿಜೆಪಿಯ ತೊಟ್ಟಿಲು. ವಿಶ್ವದ ಅತಿದೊಡ್ಡ ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯತೆ, ದೇಶಭಕ್ತಿ, ದೇಶಪ್ರೇಮ, ಸಂಘಟನೆ, ಏಕತೆ, ತ್ಯಾಗವನ್ನು ಒಟ್ಟುಗೂಡಿಸುವ ಸಂಸ್ಥೆ ಆರ್‍ಎಸ್‍ಎಸ್ ಎಂದಿದ್ದರು. ಈ ಉತ್ತರ ಕೇಳಿ ಇಡೀ ಸಭಾಂಗಣವೇ ಚಪ್ಪಾಳೆ ತಟ್ಟುವ ಮೂಲಕ ಪ್ರತಿಧ್ವನಿಸಿತು. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ
ಕಾಂಗ್ರೆಸ್ ಟೀಕೆ:
ಕಾಂಗ್ರೆಸ್ ನಾಯಕ ಪ್ರತಿಕ್ರಿಯಿಸಿ, ಕ್ರೀಡೆ ಮಾತ್ರವಲ್ಲ ಇಡೀ ಚಿತ್ರೋದ್ಯಮ ಮತ್ತು ಎಲ್ಲೆಡೆ ಭಾರತೀಯ ಜನತಾ ಪಕ್ಷವು ಅಂತಹ ವಾತಾವರಣವನ್ನು ಸೃಷ್ಟಿಸಿದೆ. ಎಲ್ಲರೂ ಈ ಬಿಜೆಪಿ ನಾಯಕರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ಈ ಸರ್ಕಾರದ ಆದಾಯ ತೆರಿಗೆ ಇಲಾಖೆ ಮತ್ತು ಇತರ ಏಜೆನ್ಸಿಗಳ ಬಗ್ಗೆ ಹೆದರುತ್ತಾರೆ. ಎಲ್ಲಾ ತನಿಖಾ ಸಂಸ್ಥೆಗಳು ಆಟಿಕೆಗಳಾಗಿ ಬದಲಾಗಿವೆ ಮತ್ತು ಅವುಗಳೊಂದಿಗೆ ಆಟವಾಡುತ್ತಿವೆ. ಈ ಕಾರಣಕ್ಕೆ ಜನರು ಭಯಗೊಂಡಿದ್ದು ಅವರು ಬಿಜೆಪಿಯನ್ನು ಸಂತೋಷವಾಗಿರಿಸಲು ಬಯಸುತ್ತಾರೆ ಎಂದು ಟೀಕಿಸಿದ್ದಾರೆ.