ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್ ದಂಪತಿ ಮನೆಗೆ ಎರಡನೇ ಅತಿಥಿಯ ಆಗಮನವಾಗಿದೆ.
ದಂಪತಿಗೆ ಈಗಾಗಲೇ ಸಮೈರಾ ಹೆಸರಿನ 6 ವರ್ಷದ ಮಗಳಿದ್ದಾಳೆ. ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಲಭ್ಯತೆ ಸಂದೇಹವಿತ್ತು. ಆದರೆ, ಈಗ ಪತ್ನಿಗೆ ಗಂಡು ಮಗು ಜನಿಸಿದ್ದು, ಟೀಂ ಇಂಡಿಯಾ ನಾಯಕ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ ದಾಖಲೆಯ ಜಯದೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ರೋಹಿತ್ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದಿದ್ದರೆ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ವದೇಶದಲ್ಲೇ ಟೀಂ ಇಂಡಿಯಾ ವೈಟ್‌ವಾಶ್ ಅನುಭವಿಸಿತು. WTC ಫೈನಲ್‌ಗೆ ಅರ್ಹತೆ ಪಡೆಯಲು ಮೆನ್ ಇನ್ ಬ್ಲೂ ಆಸ್ಟ್ರೇಲಿಯಾದಲ್ಲಿ ನಾಲ್ಕು ಅಥವಾ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಇದನ್ನೂ ಓದಿ: ರನ್ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ
ಕ್ರಿಕೆಟಿಗ ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ‘ಜೂನಿಯರ್ ಹಿಟ್‌ಮ್ಯಾನ್‌ನ ಜನ್ಮಕ್ಕಾಗಿ ಕ್ಯಾಪ್ಟನ್ ಹಿಟ್‌ಮ್ಯಾನ್‌ಗೆ ಅಭಿನಂದನೆಗಳು. ದೇವರು ಅವರನ್ನು ಮತ್ತು ಕುಟುಂಬವನ್ನು ಆಶೀರ್ವದಿಸಲಿ’ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.