ನವದೆಹಲಿ: 45 ಪಿಸ್ತೂಲ್‌ಗಳನ್ನು ಒಯ್ಯುತ್ತಿದ್ದ ದಂಪತಿಯನ್ನು ನವದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಪಿಸ್ತೂಲ್‌ಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗಿತ್ತು. ಆದರೆ ಇವು ಅಸಲಿ ಬಂದೂಕುಗಳು ಎಂದು ಭಯೋತ್ಪಾದನಾ ನಿಗ್ರಹ ಘಟಕದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ವರದಿ ಮಾಡಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಉಚಿತ: ಕೇಂದ್ರ
Advertisement
Advertisement
ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಜುಲೈ 10 ರಂದು ವಿಯೆಟ್ನಾಂನಿಂದ ಭಾರತಕ್ಕೆ ಮರಳಿದ್ದರು. ಜಗಜಿತ್ ಸಿಂಗ್ ಎರಡು ಬ್ಯಾಗ್‌ಗಳಲ್ಲಿ ಪಿಸ್ತೂಲ್‌ಗಳನ್ನು ಇಟ್ಟುಕೊಂಡಿದ್ದ.
Advertisement
ಫ್ರಾನ್ಸ್‌ನ ಪ್ಯಾರಿಸ್‌ನಿಂದ ಭಾರತಕ್ಕೆ ಬಂದಿಳಿದ ನಂತರ ಮಂಜಿತ್ ಸಿಂಗ್ ಎಂಬಾತ ವಿಯೆಟ್ನಾಂನಲ್ಲಿರುವ ತನ್ನ ಸಹೋದರ ಜಗಜಿತ್ ಸಿಂಗ್‌ಗೆ ಈ ಬ್ಯಾಗ್‌ಗಳನ್ನು ನೀಡಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮದುವೆಯಾದ 3 ದಿನದವರೆಗೆ ಈ ದೇಶದಲ್ಲಿ ವಧು, ವರ ಟಾಯ್ಲೆಟ್‍ಗೆ ಹೋಗುವಂತಿಲ್ಲ!
Advertisement
ಪಿಸ್ತೂಲ್‌ಗಳ ಒಟ್ಟು ಮೌಲ್ಯ 22.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಹಿಂದೆಯೂ 25 ಪಿಸ್ತೂಲ್‌ಗಳನ್ನು ಭಾರತಕ್ಕೆ ತಂದಿರುವುದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ.