ವಾಷಿಂಗ್ಟನ್: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಭಾರತೀಯ ರಾಯಭಾರ ಕಚೇರಿಗೆ (Indian Consulate) ಖಲಿಸ್ತಾನಿ ಬೆಂಬಲಿಗರು (Khalistani Supporters) ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ಬೆಳಗ್ಗಿನ ಜಾವ 1:30-2:30 ರ ನಡುವೆ ಬೆಂಕಿ ಹಚ್ಚಲಾಗಿದೆ. ಕೇವಲ 5 ತಿಂಗಳ ಅವಧಿಯಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿ ಬೆಂಬಲಿಗರು ನಡೆಸಿರುವ 2ನೇ ದಾಳಿಯಾಗಿದೆ.
ARSON ATTEMPT AT SF INDIAN CONSULATE: #DiyaTV has verified with @CGISFO @NagenTV that a fire was set early Sunday morning between 1:30-2:30 am in the San Francisco Indian Consulate. The fire was suppressed quickly by the San Francisco Department, damage was limited and no… pic.twitter.com/bHXNPmqSVm
— Diya TV – 24/7 * Free * Local (@DiyaTV) July 3, 2023
ಸ್ಥಳೀಯ ಮಾಧ್ಯಮಗಳು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಯಭಾರ ಕಚೇರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಈ ವೀಡಿಯೋವನ್ನು ಖಲಿಸ್ತಾನಿ ಬೆಂಬಲಿಗರು ಬಿಡುಗಡೆ ಮಾಡಿರುವುದಾಗಿ ತಿಳಿಸಲಾಗಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದೆ. ಇದನ್ನೂ ಓದಿ: ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ – ತಾಲಿಬಾನ್ ಸರ್ಕಾರ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್, ವಿಧ್ವಂಸಕತೆ ಹಾಗೂ ಬೆಂಕಿ ಹಚ್ಚುವ ಕೃತ್ಯವನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿ ರಾಜತಾಂತ್ರಿಕ ಸೌಲಭ್ಯ ಹಾಗೂ ವಿದೇಶೀ ರಾಜತಾಂತ್ರಿಕರ ವಿರುದ್ಧ ಇಂತಹ ವಿಧ್ವಂಸಕತೆ ಹಾಗೂ ಹಿಂಸಾಚಾರ ಎಸಗುವುದು ಕ್ರಿಮಿನಲ್ ಅಪರಾಧ ಎಂದು ಹೇಳಿದ್ದಾರೆ.
ಈ ಹಿಂದೆ ಮಾರ್ಚ್‌ನಲ್ಲಿ ಪಂಜಾಬ್ ಪೊಲೀಸರು ಭಾರತದಲ್ಲಿ ಅಮೃತ್‌ಪಾಲ್ ಸಿಂಗ್‌ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಇದನ್ನೂ ಓದಿ: ಭಾರೀ ಮಳೆಗೆ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೆಳಭಾಗ ಜಲಾವೃತ!
Web Stories