ಮಂಗಳೂರು: ಹಡಗೊಂದು ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದು, ಇಂಡಿಯನ್ ಕೋಸ್ಟ್ ಗಾರ್ಡ್ ಪಡೆ 15 ಮಂದಿ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ.
ಮಂಗಳೂರಿನಿಂದ 5.6 ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಹಡಗು ಅಪಾಯಕ್ಕೆ ಸಿಲುಕಿದೆ. ಹಡಗಿನ ಒಳ ಭಾಗಕ್ಕೆ ನೀರು ನುಗ್ಗಿದೆ ಎನ್ನಲಾಗಿದೆ. ಇದು ಸಿರಿಯಾ ದೇಶಕ್ಕೆ ಸೇರಿದ ಎಂವಿ ಪ್ರಿನ್ಸಸ್ ಮಿರಲ್ (MV Princess miral) ಹಡಗು ಇದಾಗಿದೆ. ಇದನ್ನೂ ಓದಿ: ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ
ಚೀನಾದಿಂದ ಸಿರಿಯಾಕ್ಕೆ 8,000 ಟನ್ ಖನಿಜ ಹೊತ್ತು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದೆ. ಅಪಾಯದಲ್ಲಿರುವ ಬಗ್ಗೆ ಹಡಗಿನಿಂದ ರೇಡಿಯೋ ಸಂದೇಶ ಬಂದಿದ್ದು, ಕೋಸ್ಟ್‍ಗಾರ್ಡ್ ಪಡೆ ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.