ಗಾಂಧಿನಗರ: ಪಾಕಿಸ್ತಾನದ ನೌಕಾಪಡೆಯ ಯುದ್ಧನೌಕೆಯು ಸಮುದ್ರದ ಗಡಿ ರೇಖೆಯನ್ನು ದಾಟಿ ಭಾರತೀಯ ಜಲಪ್ರದೇಶವಾದ ಗುಜರಾತ್ ಕರಾವಳಿಯನ್ನು ಪ್ರವೇಶಿಸಿತ್ತು. ಭಾರತೀಯ ಕರಾವಳಿ ಕಾವಲು ಪಡೆಯ ಡಾರ್ನಿಯರ್ ವಿಮಾನ ಪತ್ತೆ ಹಚ್ಚಿ ವಾಪಸ್ ತೆರಳುವಂತೆ ಸೂಚಿಸಿದೆ.
ಮೂಲಗಳ ಪ್ರಕಾರ, ಜುಲೈ ತಿಂಗಳಲ್ಲೇ ಪಾಕಿಸ್ತಾನದ ನೌಕಾಪಡೆಯ ಹಡಗು ಭಾರತದ ಜಲಭಾಗವನ್ನು ಪ್ರವೇಶಿಸಿತ್ತು. ಭಾರತೀಯ ಜಲಪ್ರದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದಲ್ಲಿ ನೌಕೆಯನ್ನು ಡಾರ್ನಿಯರ್ ವಿಮಾನದ ಕಣ್ಗಾವಲು ಪತ್ತೆ ಮಾಡಿತ್ತು.
Advertisement
Advertisement
ಭಾರತದ ಜಲಪ್ರದೇಶದಲ್ಲಿ ಪಾಕಿಸ್ತಾನದ ಯುದ್ಧನೌಕೆಗಳ ಉಪಸ್ಥಿತಿಯ ಬಗ್ಗೆ ವಿಮಾನವು ಕಮಾಂಡ್ ಕೇಂದ್ರಕ್ಕೆ ಮಾಹಿತಿ ರವಾನಿಸಿತ್ತು. ಪಾಕಿಸ್ತಾನದ ಯುದ್ಧನೌಕೆಗೆ ಗಡಿ ದಾಟಿರುವ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯುದ್ಧ ನೌಕೆಗೆ ವಾಪಸ್ ಹೋಗುವಂತೆ ತಿಳಿಸಿದ್ದರೂ ಕ್ಯಾಪ್ಟನ್‍ನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೂ ಭಾರತದ ಭದ್ರತಾ ಪಡೆ ಪಾಕ್‍ನ ನೌಕಾಪಡೆಯನ್ನು ಹಿಮ್ಮೆಟ್ಟಿಸಿದೆ.
Advertisement
ಈ ಹಿನ್ನೆಲೆಯಲ್ಲಿ ಭಾರತೀಯ ಕರಾವಳಿ ಕಾವಲುಪಡೆ ಮತ್ತು ಭಾರತೀಯ ವಾಯುಪಡೆಯು ಗುಜರಾತ್ ಕರಾವಳಿಯುದ್ದಕ್ಕೂ ಯಾವುದೇ ತೊಂದರೆ ಬರದಂತೆ ತಡೆಯಲು ನಿಗಾ ಇರಿಸಿದೆ. ಇತ್ತೀಚಿಗೆ ಪಾಕಿಸ್ತಾನದಿಂದ ಭಾರತಕ್ಕೆ ಮಾದಕ ವಸ್ತು ಬರುವುದು ಹಾಗೂ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಕಣ್ಗಾವಲಿಗೆ ಹೊಸ ಧ್ರುವ ಹೆಲಿಕಾಪ್ಟರ್ ಅನ್ನು ಸೇರ್ಪಡೆ ಮಾಡಿದ್ದರು. ಇದನ್ನೂ ಓದಿ: ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?
Advertisement
ಭಾರತೀಯ ನೌಕಾಪಡೆಯು ಸಮುದ್ರ ಗಡಿ ಕಾನೂನುಗಳ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದೆ. ಗಡಿಯಿಂದ 5 ನಾಟಿಕಲ್ ಮೈಲುಗಳ ಒಳಗೆ ಮೀನುಗಾರಿಕೆ ನಡೆಸಲು ತಮ್ಮದೇ ದೇಶದ ಮೀನುಗಾರರಿಗೂ ಸಹ ಅನುಮತಿಸುವುದಿಲ್ಲ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಮಹಿಳೆ ಅರೆಸ್ಟ್