ಉಡುಪಿ: ಆಕೆ ಜರ್ಮನ್ ಮೂಲದ ಸುಂದರಾಂಗ ಚೆಲುವೆ. ಆತ ಪಕ್ಕಾ ಇಂಡಿಯನ್. ಬಣ್ಣದಲ್ಲಿ ವ್ಯತ್ಯಾಸವಿದ್ದರೂ ಇಬ್ಬರ ಮನಸ್ಸುಗಳು ಮಾತ್ರ ಹೊಂದಾಣಿಕೆಯಾಗಿದೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ. ಸಮುದ್ರದಲ್ಲಿ ಒಪ್ಪಿಗೆಯಾಗಿ, ಭೂಮಿ ಮೇಲೆ ನಡೆದಿದೆ.
ರೆಬೆಕಾ ಮರಿಯಾ ಜರ್ಮನಿ ಮೂಲದ ಸ್ಪುರದ್ರೂಪಿ ಚೆಲುವೆ. ಭರತ್ ಕುಮಾರ್ ಇಂಡಿಯನ್ ಜಂಟಲ್ ಮ್ಯಾನ್. ದೇಶ, ಭಾಷೆ, ಸಂಸ್ಕೃತಿಗೆ ಸಂಬಂಧವೇ ಇಲ್ಲದ ಇವರಿಬ್ಬರು ಉಡುಪಿಯಲ್ಲಿ ಮದುವೆಯಾಗಿದ್ದಾರೆ. ಜರ್ಮನಿಯ ಐಡಾ ಕಂಪನಿ ಬೆಲ್ಲಾ ಹಡಗಿನಲ್ಲಿ ಭರತ್ ಕುಮಾರ್ ಫುಡ್ ಆಂಡ್ ಬೇವರೇಜ್ ವಿಭಾದಲ್ಲಿ ಉದ್ಯೋಗಿ. ರೆಬೆಕಾ ಆರ್ಟ್ ಗ್ಯಾಲರಿಯಲ್ಲಿ ಕೆಲಸ ಮಾಡುವಾಕೆ. ಒಂದೇ ಹಡಗಿನಲ್ಲಿ ತೇಲಾಡುತ್ತಾ, ಓಡಾಡುತ್ತಾ ಇವರಿಬ್ಬರಿಗೂ ಲವ್ವಾಗಿದೆ.
Advertisement
Advertisement
ಇಬ್ಬರೂ ತಮ್ಮ ತಮ್ಮ ಮನೆಯವರಲ್ಲಿ ವಿಷಯ ತಿಳಿಸಿದ್ದಾರೆ. ನಿಮಗೊಪ್ಪಿಗೆಯಾದರೆ ನಮಗೇನೂ ಸಮಸ್ಯೆಯಿಲ್ಲ ಅಂತ ಹೇಳಿದ ಇಬ್ಬರ ಪೋಷಕರು ಅಕ್ಷತೆ ಕಾಳು ಹಾಕಲು ಒಪ್ಪಿದ್ದಾರೆ. ಇಬ್ಬರ ಮದುವೆ ಭಾರತೀಯ ಸಂಸ್ಕೃತಿಯಂತೆ ನಡೆಯಿತು.
Advertisement
ನಮ್ಮದು ಮೂರು ವರ್ಷದಿಂದ ಲವ್. ಶಿಪ್‍ನಲ್ಲಿ ಮೀಟಾಗಿದ್ದೆವು. ಡೇಟಿಂಗ್ ಹೋಗಿದ್ದೆವು. ಇಬ್ಬರಿಗೂ ನಾವಿಬ್ಬರು ಒಳ್ಳೆ ಜೋಡಿಯಾಗ್ತೇವೆ ಅಂತ ಅನ್ನಿಸ್ತು. ಇಬ್ಬರಿಗೂ ಎಂತ ಸಮಸ್ಯೆಯೂ ಇರಲಿಲ್ಲ. ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಆರ್ಟ್ ಗ್ಯಾಲರಿಸ್ಟ್ ಆಗಿ ರೆಬೆಕಾ ಕೆಲಸ ಮಾಡುತ್ತಿದ್ದರು. ಪ್ಯಾಕೇಜ್ ಟೂರ್ ತರ ಸಮುದ್ರಯಾನ ಮಾಡುತ್ತೇವೆ. ಇನ್ನೊಂದು ಮೂರ್ನಾಲ್ಕು ವರ್ಷ ಕೆಲಸ ಮಾಡಿ ಭಾರತದಲ್ಲೇ ನೆಲೆಸುವ ಆಲೋಚನೆಯಿದೆ ಎಂದು ಭರತ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.
Advertisement
ಎರಡು ವರ್ಷದ ಹಿಂದೆ ರೆಬೆಕಾ ಉಡುಪಿಯ ಪಡುಬಿದ್ರೆಯ ಭರತ್ ಮನೆಗೆ ಬಂದಿದ್ದರು. ಆಗ ವಿಷಯ ಪ್ರಸ್ತಾಪವಾಗಿದೆ. ವರ್ಷದ ಹಿಂದೆ ಇಬ್ಬರಿಗೂ ಎಂಗೇಜ್‍ಮೆಂಟ್ ಆಗಿದೆ. ಈಗ ಮದುವೆಯೂ ಮುಗಿದಿದೆ. ಎರಡೂ ಕುಟುಂಬದವರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಜರ್ಮನಿಯಿಂದ ರೆಬೆಕಾ ಪೋಷಕರು, ಸಂಬಂಧಿಕರು, ಗೆಳೆಯರು ಬಂದಿದ್ದರು. ಭಾರತೀಯ ಸಂಸ್ಕೃತಿಯ ಮದುವೆಯಲ್ಲಿ ಪಾಲ್ಗೊಂಡ ಜರ್ಮನ್ ನೆಂಟರು ಭಾರತೀಯ ಸಂಪ್ರದಾಯದ ಧಿರಿಸು ತೊಟ್ಟಿದ್ದರು. ಇಲ್ಲಿನ ಊಟ, ಹವಾಮಾನದ ಬಗ್ಗೆ ಮೆಚ್ಚಿಕೊಂಡರು.
ಈ ಸಂದರ್ಭ ವಧುವಿನ ಸಂಬಂಧಿ ಇಯಾಗ ಮಾತನಾಡಿ, 10 ದಿನದ ಹಿಂದೆ ಇಲ್ಲಿಗೆ ಬಂದಾಗ ಜೋರು ಬಿಸಿಲಿತ್ತು. ಈಗ ಜೋರು ಮಳೆ ಬರ್ತಾಯಿದೆ. ಇಲ್ಲಿನ ವೆದರ್ ಗೆ ಅಡ್ಜಸ್ಟ್ ಆಗೋದಕ್ಕೆ ಕಷ್ಟ ಆಗ್ತಾಯಿದೆ. ಊಟ ಕೂಡಾ ಸಿಕ್ಕಾಪಟ್ಟೆ ಸ್ಪೈಸಿ. ಆದ್ರೂ ಇಷ್ಟ ಆಗ್ತಾಯಿದೆ ಎಂದು ಹೇಳಿದರು. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಬಹಳ ಖುಷಿಯಾಗಿದೆ. ಇಲ್ಲಿನ ಡೆಕೋರೇಷನ್, ಉಡುಗೆ ತೊಡುಗೆಯೆಲ್ಲಾ ಜರ್ಮನಿ ಮದುವೆಗಿಂತ ಡಿಫರೆಂಟ್ ಇದೆ ಅಂತ ಹೇಳಿದರು.
ಭಾರತದ ಸಂಸ್ಕೃತಿಯನ್ನು ನೋಡಿ ಇಷ್ಟಪಟ್ಟು ಭಾರತದ ಹುಡುಗನನ್ನು ರೆಬೆಕಾ ಆಯ್ಕೆ ಮಾಡಿದರಂತೆ. ಭರತ್ ಕುಮಾರ್ ರೆಬೆಕಾಗೆ ತುಳು ಭಾಷೆ ಕಲಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷ ಜರ್ಮನಿಯಲ್ಲೇ ಕೆಲಸ ಮಾಡಿ ಮತ್ತೆ ಭಾರತದಲ್ಲಿ ಸೆಟೆಲ್ ಆಗೋ ಆಲೋಚನೆ ಇಟ್ಟುಕೊಂಡಿದ್ದಾರೆ.