ಬೈರುತ್: ಲೆಬನಾನ್, ಸಿರಿಯಾದಲ್ಲಿ (Lebanon Pager Explosions) ಇತ್ತೀಚೆಗೆ ಯಾರ ಊಹೆಗೂ ನಿಲುಕದ ರೀತಿಯಲ್ಲಿ ದಾಳಿಗಳು ನಡೆದಿವೆ. ಎರಡು ದೇಶಗಳಲ್ಲಿ ಒಂದೇ ದಿನ, ಒಂದೇ ಕ್ಷಣದಲ್ಲಿ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡಿದ್ದವು, ಈ ಬೆನ್ನಲ್ಲೇ ವಾಕಿಟಾಕಿ, ಸೋಲಾರ್ ಪ್ಯಾನಲ್‌ಗಳು ಸಹ ಸ್ಫೋಟಗೊಂಡು ತೀವ್ರ ಆತಂಕ ಸೃಷ್ಟಿಸಿದ್ದವು. ಇದೀಗ ಈ ಸ್ಫೋಟದ ಹಿಂದೆ ಭಾರತೀಯ ಮೂಲದ ಉದ್ಯಮಿಯೊಬ್ಬರ ಕೈವಾಡ ಇದೆ ಎಂದು ಶಂಕಿಸಿರುವುದಾಗಿ ವರದಿಯಾಗಿದೆ.
Advertisement
ಹೌದು. ಲೆಬನಾನ್, ಸಿರಿಯಾದಲ್ಲಿ ನಡೆದ ಪೇಜರ್ ಬ್ಲಾಸ್ಟ್ ಘಟನೆ ಹಿಂದೆ 37 ವರ್ಷ ವಯಸ್ಸಿನ ಭಾರತೀಯ ಮೂಲದ ಉದ್ಯಮಿ ರಿನ್ಸನ್ ಜೋಸ್ (Rinson Jose) ಕೈವಾಡ ಇರುವುದಾಗಿ ವರದಿಗಳು ಉಲ್ಲೇಖಿಸಿವೆ. ಜೋಸ್ ಬಲ್ಗೇರಿಯಾ ಮೂಲದ ನಾರ್ಟಾ ಗ್ಲೋಬಲ್ ಲಿಮಿಟೆಡ್‌ನ (Norta Global Limited) ಏಕೈಕ ಮಾಲೀಕರಾಗಿದ್ದು, ಸ್ಫೋಟಗೊಂಡ ಪೇಜರ್‌ಗಳ ಪೂರೈಕೆಯಲ್ಲಿ ಇವರ ಪಾಲೂ ಇದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್ ಉಡೀಸ್ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್
Advertisement
Advertisement
ಸ್ಫೋಟಗೊಂಡ ಪೇಜರ್‌ಗಳನ್ನು ತೈವಾನ್ ಮೂಲದ ಕಂಪನಿ ಅಭಿವೃದ್ಧಿಪಡಿಸಿದೆ ಎಂಬ ಆರೋಪ ಕೇಳಿಬಂದಾಗ ಗೋಲ್ಡ್ ಅಪೊಲೊ ಕಂಪನಿ ಸ್ಪಷ್ಟನೆ ನೀಡಿತ್ತು. ಈ ಪೇಜರ್‌ಗಳನ್ನು ನಾವು ತಯಾರಿಸಿಲ್ಲ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಪಾಲುದಾರಿಕೆ ಹೊಂದಿರುವ BAC CONSULTING KFT ಕಂಪನಿ ತಯಾರಿಸಿದೆ ಎಂದು ಹೇಳಿತ್ತು. ಆದರೀಗ ಉದ್ದೇಶಪೂರ್ವಕವಾಗಿಯೇ ನಾರ್ಟಾ ಗ್ಲೋಬಲ್ ಕಂಪನಿ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಗೋಲ್ಡ್ ಅಪೊಲೊ ಜೊತೆಗಿನ ಒಪ್ಪಂದಕ್ಕೆ ಬಿಎಸಿ ಕನ್ಸಲ್ಟಿಂಗ್ ಕಂಪನಿ ಸಹಿ ಹಾಕಿರುವುದು ನಿಜವಾದರೂ ಆದ್ರೆ ಈ ಒಪ್ಪಂದದ ಹಿಂದೆ ನಾರ್ಟಾ ಗ್ಲೋಬಲ್ ಇತ್ತು ಪೇಜರ್ ಬ್ಲಾಸ್ಟ್ ಬಳಿಕ ಜೋಸ್ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್- ಹಿಜ್ಬುಲ್ಲಾ ಟಾಪ್ ಕಮಾಂಡರ್ ಹತ್ಯೆ
Advertisement
ಈ ನಡುವೆ ಬಲ್ಗೇರಿಯಾದ ರಾಷ್ಟ್ರೀಯ ಭದ್ರತಾ ಸಂಸ್ಥೆ ಎಸ್‌ಎಎನ್‌ಎಸ್‌ನ, ಸ್ಫೋಟದ ಹಿಂದೆ ಜೋನ್ಸ್‌ಅವರ ನಾರ್ಟಾ ಗ್ಲೋಬಲ್ ಪಾಲ್ಗೊಳ್ಳುವಿಕೆ ನೇರವಾಗಿ ಕಂಡುಬಂದಿಲ್ಲ. ಸ್ಫೋಟಕ ಸಂಬಂಧಿಸಿದ ಯಾವುದೇ ಉಪಕರಣಗಳೂ ಸಹ ಬಲ್ಗೇರಿಯಾ ಮೂಲಕ ಹಾದುಹೋಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಇನ್ಮುಂದೆ ಹಿಜ್ಬುಲ್ಲಾ ಹೋರಾಟಗಾರರು ಟಾಯ್ಲೆಟ್, ಆಹಾರ ಸೇವನೆಗೆ ಹೆದರಬೇಕು – ಮತ್ತೆ ಶಾಕ್ ಕೊಟ್ಟ ಇಸ್ರೇಲ್
ರಿನ್ಸನ್ ಜೋಸ್ ಯಾರು?
ಪಾಂಡಿಚೇರಿ ವಿಶ್ವವಿದ್ಯಾನಿಲಯದಿಂದ MBA ಪದವಿ, ಓಸ್ಲೋ ಮೆಟ್ರೋಪಾಲಿಟಿಯನ್ ವಿಶ್ವವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಸಮಾಜ ಕಲ್ಯಾಣ ಮತ್ತು ಆರೋಗ್ಯ ನೀತಿʼ (Social Welfare And Health Policy) ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಜೋಸ್ ಒಂದು ದಶಕದ ಹಿಂದೆ ನಾರ್ವೆಗೆ ತೆರಳಿದ್ದರು. ಕೊನೆಯದ್ದಾಗಿ ನವೆಂಬರ್‌ನಲ್ಲಿ ತಮ್ಮ ಮನೆಗೆ ಭೇಟಿ ನೀಡಿ, ಜನವರಿಯಲ್ಲಿ ವಾಪಸ್ ತೆರಳಿದ್ದರು.