ನವದೆಹಲಿ: ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಭೂಮಿಯಂತಹ ಗುಣಲಕ್ಷಣಗಳುಳ್ಳ ಕೆಲವು ಗ್ರಹಗಳನ್ನು ಪತ್ತೆಹಚ್ಚಿದ್ದಾರೆ.
ಮಲ್ಟಿ-ಸ್ಟೇಜ್ ಮೆಮೆಟಿಕ್ ಬೈನರಿ ಟ್ರೀ ಅನಾಮಲಿ ಐಡೆಂಟಿಫೈಯರ್ ಎಂದು ಕರೆಯಲಾಗುವ ಎಐ ತಂತ್ರಜ್ಞಾನ ಆಧಾರಿತ ವಿಧಾನದಿಂದ ಕೆಲವು ಭೂಮಿಯಂತಹ ಅಂಶಗಳುಳ್ಳ ಗ್ರಹಗಳನ್ನು ಗುರುತಿಸಲಾಗಿದೆ. ಈ ವಿಧಾನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಅನುಕರಣೆ ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತದೆ.
ಭಾರತೀಯ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‍ನ ಖಗೋಳಶಾಸ್ತ್ರಜ್ಞರು ಮತ್ತು ಬಿಟ್ಸ್ ಪಿಲಾನಿ ಹಾಗೂ ಗೋವಾ ಕ್ಯಾಂಪಸ್‍ನ ಖಗೋಳಶಾಸ್ತ್ರಜ್ಞರು ಭೂಮಿಯ ಅಸಂಗತತೆ(ಎನೋಮಲಿ) ಎಂಬ ಸಿದ್ಧಾಂತದ ಆಧಾರದ ಮೇಲೆ ವಾಸಿಸಲು ಯೋಗ್ಯವಿರುವ ಗ್ರಹಗಳನ್ನು ಗುರುತಿಸಿದ್ದಾರೆ. ಇದನ್ನೂ ಓದಿ: ಡಿಜಿಟಲ್ ರೂ.ಗೂ ಸಾಮಾನ್ಯ ರೂ.ಗೂ ವ್ಯತ್ಯಾಸವಿಲ್ಲ: ಶಕ್ತಿಕಾಂತ ದಾಸ್
ಸಾವಿರಾರು ಗ್ರಹಗಳಲ್ಲಿ ಭೂಮಿ ಮಾತ್ರ ವಾಸಯೋಗ್ಯ ಗ್ರಹವಾಗಿರುವುದರಿಂದ ಅದನ್ನು ಅಸಂಗತತೆ ಎಂದು ವ್ಯಾಖ್ಯಾನಿಸಲಾಗಿದೆ. ಹೊಸ ಅಸಂಗತತೆ ಪತ್ತೆ ವಿಧಾನಗಳನ್ನು ಬಳಸಿಕೊಂಡು ಇದೇ ರೀತಿಯ ಇತರ ಗ್ರಹಗಳನ್ನು ಕಂಡುಹಿಡಿಯಬಹುದೇ ಎಂದು ನಾವು ಅನ್ವೇಷಿಸಿದ್ದೇವೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ
ಇಲ್ಲಿಯವರೆಗೆ ಪರಿಶೀಲಿಸಲಾದ ಸುಮಾರು 5000 ಗ್ರಹಗಳಲ್ಲಿ 60 ಸಂಭಾವ್ಯ ವಾಸಯೋಗ್ಯ ಗ್ರಹಗಳಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.