ತಿರುವನಂತಪುರಂ: ಕೇರಳದ (Kerala) ಯುವ ಜೋಡಿಯೊಂದು (Couple) ತಮ್ಮ ಮದುವೆ ಆಮಂತ್ರಣ ಪತ್ರವನ್ನು ಭಾರತೀಯ ಸೈನ್ಯಕ್ಕೆ ಕಳುಹಿಸಿ ಮದುವೆಗೆ ಬರುವಂತೆ ಆಮಂತ್ರಣ ನೀಡಿದ ಆಮಂತ್ರಣ ಪತ್ರಿಕೆಯೊಂದು (Invitation) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೇರಳ ಮೂಲದ ರಾಹುಲ್ ಮತ್ತು ಕಾರ್ತಿಕಾ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಶೇಷ ಬರಹಗಳೊಂದಿಗೆ ಭಾರತೀಯ ಸೈನ್ಯಕ್ಕೆ (Indian Army) ಕಳುಹಿಸಿತ್ತು. ಆತ್ಮೀಯ ವೀರ ಸೈನಿಕರೇ ನಾವು ನ.10 ರಂದು ಮದುವೆಯಾಗುತ್ತಿದ್ದೇವೆ. ನಮ್ಮ ದೇಶದ ಮೇಲಿನ ಪ್ರೀತಿ, ದೇಶಭಕ್ತಿಗೆ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ನಮ್ಮನ್ನು ಪ್ರತಿ ನಿಮಿಷ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವುದಕ್ಕಾಗಿ ನಾವು ನಿಮಗೆ ಋಣಿಯಾಗಿದ್ದೇವೆ. ನಿಮ್ಮಿಂದಾಗಿ ನಾವು ನೆಮ್ಮದಿಯಿಂದ ಮಲಗಿದ್ದೇವೆ. ನಮ್ಮ ಆತ್ಮೀಯರೊಡನೆ ನಮಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ಈ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ತುಂಬಾ ಸಂತೋಷವಾಗುತ್ತಿದೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ಬೇಕೆಂದು ಈ ಆಮಂತ್ರಣ ಪತ್ರಿಕೆ ಕಳುಹಿಸುತ್ತಿದ್ದೇವೆ ಎಂದು ಪೋಸ್ಟ್ ಮಾಡಿ ಮದುವೆಗೆ ಬರುವಂತೆ ಕರೆದಿದ್ದರು. ಇದನ್ನೂ ಓದಿ: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಹೊತ್ತಿ ಉರಿದ ಆಟೋ – ಚಾಲಕ, ಸವಾರನಿಗೆ ಗಾಯ
View this post on Instagram
ಈ ಪತ್ರವನ್ನು ಓದಿದ ಬಳಿಕ ಇಂಡಿಯನ್ ಆರ್ಮಿ ರಾಹುಲ್ ಮತ್ತು ಕಾರ್ತಿಕಾಗೆ ಶುಭ ಹಾರೈಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿ ನಮ್ಮನ್ನು ಮದುವೆಗೆ ಆಮಂತ್ರಿಸಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ನೂತನ ಜೀವನ ಸುಖಕರವಾಗಿರಲಿ ಜೊತೆಯಾಗಿರಿ ಎಂದು ಶುಭ ಹಾರೈಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಂತ್ಯಸಂಸ್ಕಾರದ ವೇಳೆ ಮೃತದೇಹಕ್ಕೆ ತಾಳಿ ಕಟ್ಟಿ ಗೆಳತಿಯ ಕೊನೆ ಆಸೆ ಈಡೇರಿಸಿದ ಪ್ರೇಮಿ