ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ಸರ್ಜಿಕಲ್ ಸ್ಟ್ರೈಕ್ 2.0 ಮಾಡಿ ಯಶಸ್ವಿಯಾದ ವಾಯುಪಡೆಗೆ ಭಾರತೀಯ ಸೇನೆ ಒಂದು ಕವಿತೆ ಸಮರ್ಪಿಸಿ ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.
ಇಂದು ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ವಾಯುಪಡೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದೆ. ಪುಲ್ವಾಮದಲ್ಲಿ 44 ಮಂದಿ ಸಿಆರ್‌ಪಿಎಫ್ ಯೋಧರ ಬಲಿಪಡೆದ ಪಾಕ್ ಉಗ್ರರಿಗೆ ಭಾರತೀಯ ಸೇನೆ ಈ ಮೂಲಕ ಪ್ರತ್ಯುತ್ತರ ನೀಡಿದೆ. ಮಿರಾಜ್-2000 ಯುದ್ಧ ವಿಮಾನವನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ವಾಯುಪಡೆ ಭೇಟೆಯಾಡಿದೆ. ಇದನ್ನೂ ಓದಿ:ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ
Advertisement
Advertisement
ಈ ಬಗ್ಗೆ ಇಡೀ ದೇಶವೇ ಹೆಮ್ಮೆಯಿಂದ ಸಂಭ್ರಮಿಸುತ್ತಿದೆ. ಅಲ್ಲದೆ ವಾಯುಪಡೆಯ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಭಾರತೀಯ ಸೇನೆ ಒಂದು ಕವಿತೆಯನ್ನು ವಾಯುಪಡೆಗೆ ಸಮರ್ಪಿಸುವ ಮೂಲಕ ಟ್ವೀಟ್ ಮಾಡಿ ಗೌರವ ಸಲ್ಲಿಸಿದೆ. ಎಡಿಜಿಪಿಐ ಇಂಡಿಯನ್ ಆರ್ಮಿ ಈ ಅದ್ಭುತ ಸರ್ಜಿಕಲ್ ಸ್ಟ್ರೈಕ್ 2.0ವನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದೆ. ಕವಿತೆಯಲ್ಲಿ ಭಾರತ ಹೇಡಿ ಅಲ್ಲ, ಸುಮ್ಮನೆ ಕೂರುವ ದೇಶವೂ ಅಲ್ಲ. ದುಷ್ಟ ಕೌರವರನ್ನು ಹೇಗೆ ಮಣ್ಣಾದರೋ ಅದೇ ರೀತಿ ಉಗ್ರರು ಮಣ್ಣಾಗುತ್ತಾರೆ ಎಂಬಂತೆ ಕವಿತೆ ರಚಿಸಿ ವಾಯುಪಡೆಯನ್ನು ಶ್ಲಾಘಿಸಿದೆ. #IndianArmy, #AlwaysReady ಎಂದು ಹ್ಯಾಷ್‍ಟ್ಯಾಗ್ ಹಾಕಿ ಈ ಕವಿತೆಯನ್ನು ಟ್ವೀಟ್ ಮಾಡಿದೆ. ಇದನ್ನೂ ಓದಿ:ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?
Advertisement
'क्षमाशील हो रिपु-समक्ष
तुम हुए विनीत जितना ही,
दुष्ट कौरवों ने तुमको
कायर समझा उतना ही।
सच पूछो, तो शर में ही
बसती है दीप्ति विनय की,
सन्धि-वचन संपूज्य उसी का जिसमें शक्ति विजय की।'#IndianArmy#AlwaysReady pic.twitter.com/bUV1DmeNkL
— ADG PI – INDIAN ARMY (@adgpi) February 26, 2019
Advertisement
ಪಾಕಿಸ್ತಾನದ ವಾಯುದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಭದ್ರತಾ ಸಮಿತಿ(ಸಿಸಿಎಸ್) ಸಭೆ ನಡೆದಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv