– 15 ನಗರಗಳ ಮೇಲಿನ ದಾಳಿಗಳನ್ನೂ ಹತ್ತಿಕ್ಕಿದ ಸೇನೆ
ನವದೆಹಲಿ: ಪಾಕಿಸ್ತಾನ ಸಶಸ್ತ್ರಪಡೆಗಳು (Pakistan Armed Forces) ಮೇ 8 ಮತ್ತು 9ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ನಡೆಸಿದ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿರುವುದಾಗಿ ಭಾರತೀಯ ಸೇನೆ (Indian Army) ಅಧಿಕೃತ ಹೇಳಿಕೆ ನೀಡಿದೆ.
OPERATION SINDOOR
Pakistan Armed Forces launched multiple attacks using drones and other munitions along entire Western Border on the intervening night of 08 and 09 May 2025. Pak troops also resorted to numerous cease fire violations (CFVs) along the Line of Control in Jammu and… pic.twitter.com/WTdg1ahIZp
— ADG PI – INDIAN ARMY (@adgpi) May 9, 2025
ಈ ಕುರಿತು ಇಂಡಿಯನ್ ಆರ್ಮಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪಾಕಿಸ್ತಾನ ಸಶಸ್ತ್ರ ಪಡೆಗಳು ಇದೇ ಮೇ 08 ಮತ್ತು 09ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು (Drones) ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆ ಮಾಡಿವೆ. ಆದ್ರೆ ಪಾಕ್‌ನ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿ, ಸಿಎಫ್‌ವಿಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಸೇನೆ ಹೇಳಿದೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ
ಅಲ್ಲದೇ ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ವಿನ್ಯಾಸಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ
15 ನಗರಗಳ ಮೇಲಿನ ದಾಳಿ ಹತ್ತಿಕ್ಕಿದ ಸೈನ್ಯ:
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಒಂದು ದಿನದ ನಂತರ ನಿನ್ನೆ ರಾತ್ರಿ (ಮೇ 8) ಮತ್ತು ಇಂದು ಬೆಳಿಗ್ಗೆ (ಮೇ 9) ಪಾಕಿಸ್ತಾನವು ಭಾರತದ ಮೇಲೆ ಮತ್ತೆ ದಾಳಿ ಮಾಡಲು ಪ್ರಯತ್ನಿಸಿದೆ. ಇದನ್ನೂ ಓದಿ: ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್
ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 15 ನಗರಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಉದ್ವಿಗ್ನತೆ ಹೆಚ್ಚಿಸಲು ಪಾಕ್ ಪ್ರಯತ್ನಿಸಿತು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್