ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕನಾಚಕ್ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿ ಬಳಿ ಸುತ್ತುತ್ತಿದ್ದ ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದೆ.
ಕನಾಚಕ್ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್‍ನನ್ನು ಗಮನಿಸಿದ ಸೈನಿಕರು ತಕ್ಷಣ ಕಾರ್ಯಪ್ರವೃತ್ತರಾದರು. ಬಿಎಸ್‍ಎಫ್ ಪಡೆಗಳು ಗುಂಡು ಹಾರಿಸುತ್ತಿದ್ದಂತೆ ಡ್ರೋನ್ ಹಿಂತಿರುಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಕನಾಚಕ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಾಕಿಸ್ತಾನವು ಡ್ರೋನ್‍ಗಳ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ.
ಈ ಹಿಂದೆ, ಪೊಲೀಸರು 3 ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮಾಡ್ಯೂಲ್‍ಗಳನ್ನು ಭೇದಿಸಿ, ಅದರ 7 ಸದಸ್ಯರನ್ನು ಬಂಧಿಸಿದ್ದರು. ಈವರೆಗೆ ಪಾಕಿಸ್ತಾನದಿಂದ 20 ಡ್ರೋನ್‍ಗಳನ್ನು ನಾಶ ಮಾಡಿ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡರು. ಇದನ್ನೂ ಓದಿ: ಬಿಎಸ್‍ವೈ ಕಂಡು ಕಣ್ಣೀರು ಹಾಕಿದ ರೇಣುಕಾಚಾರ್ಯ
ಜಮ್ಮು, ಸಾಂಬಾ, ಕಥುವಾ ಮತ್ತು ರಜೌರಿ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ಡ್ರೋನ್‍ನಿಂದ ಎಲ್‍ಇಟಿ ಭಯೋತ್ಪಾದಕರಿಗೆ ಕಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್‍ಇಟಿ ಜಮ್ಮು ಮತ್ತು ರಜೌರಿ ಜಿಲ್ಲೆಯಲ್ಲಿ 3 ಭಯೋತ್ಪಾದನಾ ಘಟಕಗಳನ್ನು ಸ್ಥಾಪಿಸಿದೆ. ಇದನ್ನೂ ಓದಿ: ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಸ್ಫೋಟ – ಗ್ರಾಮಸ್ಥರಲ್ಲಿ ಅತಂಕ