ಲಡಾಕ್: ಭಾರತೀಯ ಸೇನಾ ಅಧಿಕಾರಿಯೊಬ್ಬರು 34 ಗಂಟೆ 54 ನಿಮಿಷಗಳಲ್ಲಿ ಲೇಹ್‍ನಿಂದ ಮನಾಲಿವರೆಗೆ 472 ಕಿ.ಮೀ ದೂರ ಸೈಕಲ್ ಸವಾರಿ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯವಿದೆ ಎಂದು ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡ್ತಾರೆ: ಹಾಲಪ್ಪ ಆಚಾರ್
ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಅವರು ಶನಿವಾರ ಬೆಳಗ್ಗೆ 5 ಗಂಟೆಗೆ ಲಡಾಖ್‍ನ ಲೇಹ್‍ನಿಂದ ಸೈಕ್ಲಿಂಗ್ ಆರಂಭಿಸಿದ ಅವರು ಸೆಪ್ಟೆಂಬರ್ 26ರಂದು ಮಧ್ಯಾಹ್ನ ಮನಾಲಿಯನ್ನು ತಲುಪಿದ್ದಾರೆ. ಇದನ್ನೂ ಓದಿ: ನಾನು 35 ಮಾಕ್ಸ್ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ
Advertisement
“Fitness a way of life”
Lieutenant Colonel Sripada Sriram from #StrikeOne will attempt to break #guniessworldrecord for ‘Fastest Solo Cycling (Men)’ from #Leh to #Manali with a distance of 472 Km on 25 Sep 2021.@adgpi @PRODefSrinagar @PIB_India @UCI_cycling @DIPR_Leh pic.twitter.com/S7IR9vqIEt
— NorthernComd.IA (@NorthernComd_IA) September 20, 2021
Advertisement
ಭಾರತೀಯ ಸೇನೆಯು ನಾರ್ಥರ್ನ್ ಕಮಾಂಡ್‍ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಧಿಕಾರಿಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಯಶಸ್ವಿಯಾಗಿ ಲೇಹ್‍ನಿಂದ ಮನಾಲಿಯವರೆಗೂ 472 ಕಿ.ಮೀ ಫಾಸ್ಟೆಸ್ಟ್ ಸೋಲೊ ಸೈಕ್ಲಿಂಗ್ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
Marking the beginning of the Gunners Day celebrations Lieutenant Colonel Sripada Sriram of Artillery successfully broke #guniessworldrecord for ‘Fastest Solo Cycling (Men)’ from #Leh to #Manali covering a distance of 472 Km.@adgpi@PRODefSrinagar@PIB_India@UCI_Track pic.twitter.com/h0LWBEqoN0
— NorthernComd.IA (@NorthernComd_IA) September 26, 2021
Advertisement
ಈ ಕುರಿತಂತೆ ಶ್ರೀಪಾದ ಅವರು, ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಐದು ಮಾರ್ಗಗಳನ್ನು 34 ಗಂಟೆ 54 ನಿಮಿಷದಲ್ಲಿ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ.