ನವದಹಲಿ: ಪ್ರತಿಭಟನೆಗೆ ಜಗ್ಗದ ಕೇಂದ್ರ ಸರ್ಕಾರ ಅಗ್ನಿವೀರ್ ನೇಮಕಾತಿಗೆ ನೋಟಿಫಿಕೇಶನ್ ಪ್ರಕಟಿಸಿದೆ.
ಸೋಮವಾರ joinindianarmy.nic.in ವೆಬ್‌ಸೈಟ್‌ನಲ್ಲಿನೋಟಿಫಿಕೇಶನ್ ಅಪ್ಲೋಡ್ ಮಾಡಿದೆ. ಮುಂದಿನ ತಿಂಗಳಿನಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಸೇನಾ ನೇಮಕಾತಿ ರ‍್ಯಾಲಿ ಆಗಸ್ಟ್ ಮಧ್ಯದಲ್ಲಿ ನಡೆಯಲಿದೆ.
Advertisement
Advertisement
ಜನರಲ್ ಡ್ಯೂಟಿ, ಟೆಕ್, ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವನಿಸಲಾಗಿದೆ. ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗೆ 8ನೇ ತರಗತಿ ಕನಿಷ್ಠ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಾಪಸ್ ಇಲ್ಲ – ಗಲಭೆಕೋರರಿಗೆ ಸೇವೆ ಸೇರಲು ಅವಕಾಶವಿಲ್ಲ: ಲೆ.ಜ ಅನಿಲ್‌ಪುರಿ ವಾರ್ನಿಂಗ್
Advertisement
ಕನಿಷ್ಠ 17 ವರ್ಷ 6 ತಿಂಗಳು ಗರಿಷ್ಠ 23 ವರ್ಷದ ಒಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆಯ ವೇಳೆ ಎನ್‌ಸಿಸಿ ಸಿ ಸರ್ಟಿಫಿಕೇಟ್ ಇದ್ದವರಿಗೆ 15 ಬೋನಸ್ ಅಂಕ ನೀಡಲಾಗುತ್ತದೆ.
Advertisement
ಸಂಬಳ ಎಷ್ಟು?
ಮೊದಲ ವರ್ಷ 30 ಸಾವಿರ ರೂ., ಎರಡನೇ ವರ್ಷ 33 ಸಾವಿರ ರೂ., ಮೂರನೇ ವರ್ಷ 36,500 ರೂ., ನಾಲ್ಕನೇಯ ವರ್ಷ 40 ಸಾವಿರ ರೂ. ಸಿಗಲಿದೆ. ಅಷ್ಟೇ ಅಲ್ಲದೇ ಪ್ರತಿ ವರ್ಷ ನಿಗದಿ ಪಡಿಸಿದ ಭತ್ಯೆ ಸಿಗಲಿದೆ.
ಅಗ್ನಿ ವೀರರಿಗೆ 48 ಲಕ್ಷ ರೂ. ಮೌಲ್ಯದ ವಿಮೆ ಸಿಗಲಿದೆ. ಆದರೆ ಇವರು ಆರ್ಮಿ ಗ್ರೂಪ್ ಇನ್ಶೂರೆನ್ಸ್ ಫಂಡ್(ಎಜಿಐಎಫ್) ಯೋಜನೆಯ ಭಾಗವಾಗಿರುವುದಿಲ್ಲ. ಅಗ್ನಿವೀರರಾಗಿ ಸೇನೆಗೆ ಸೇರಲು ಬಯಸುವವರು ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕಾಗುತ್ತದೆ.
ನೋಟಿಫಿಕೇಶನ್ ಪಿಡಿಎಫ್ ಫೈಲ್ ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ: joinindianarmy.nic.in