ಕಲಬುರಗಿ: ಭಾರತ-ಪಾಕ್ ನಡುವಿನ (India-Pakistan) ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆ (Indian Army) ರಜೆಯಲ್ಲಿರುವ ಯೋಧರನ್ನು ಮರಳಿ ಕರೆಸಿಕೊಳ್ಳುತ್ತಿದೆ. ಹೀಗಾಗಿ ಕುಟುಂಬಸ್ಥರನ್ನು ಬಿಟ್ಟು ಕರ್ತವ್ಯಕ್ಕೆ ವಾಪಸ್ಸಾಗುತ್ತಿದ್ದಾರೆ.
ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಹಣಮಂತರಾಯ್ ಔಸೆ ಅವರು ಕಳೆದ 20 ವರ್ಷಗಳಿಂದ ಸಿಆರ್‌ಪಿಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ಜಮ್ಮುವಿನ (Jammu) ಶ್ರೀನಗರದಲ್ಲಿ (Srinagar) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಂಡತಿಯ ಹೆರಿಗೆಗಾಗಿ 1 ತಿಂಗಳ ರಜೆ ಪಡೆದು ಏ.25 ರಂದು ಊರಿಗೆ ಬಂದಿದ್ದರು.ಇದನ್ನೂ ಓದಿ: ಇನ್ನು ಮುಂದೆ ನಾನು ಪಾಕ್‌ಗೆ ಹೋಗಲ್ಲ: ಡೇರಿಲ್ ಮಿಚೆಲ್
ಒಂದು ವಾರದ ಹಿಂದೆಯಷ್ಟೇ ಗಂಡು ಮಗು ಜನಿಸಿದ್ದು, ನವಜಾತ ಶಿಶು ಹಾಗೂ ಪತ್ನಿಯೊಂದಿಗೆ ಕಾಲ ಕಳೆಯಬೇಕಿದ್ದ ಹಣಮಂತರಾಯ್ ಔಸೆ ಅವರಿಗೆ ಇದೀಗ ಭಾರತೀಯ ಸೇನೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದೆ. ಗಡಿಯಲ್ಲಿ ಯುದ್ಧ ಕಾರ್ಮೋಡ ಮುಂದುವರಿದ ಹಿನ್ನೆಲೆ ರಜೆಯಲ್ಲಿರುವ ಯೋಧರನ್ನು ಮರಳಿ ಕರೆಸಿಕೊಳ್ಳುತ್ತಿದ್ದು, ಕುಟುಂಬಕ್ಕಿಂತ ದೇಶ ಸೇವೆಯೇ ಮೊದಲು ಎಂದು ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಕಲಬುರಗಿಯಿಂದ ರೈಲು ಮೂಲಕ ಹೈದ್ರಾಬಾದ್‌ಗೆ ತೆರಳಿ ಅಲ್ಲಿಂದ ಜಮ್ಮುವಿಗೆ ಪ್ರಯಾಣ ಬೆಳಸಲಿದ್ದು, ಕಲಬುರಗಿ ರೈಲು ನಿಲ್ದಾಣದಲ್ಲಿ ಸನ್ಮಾನ ಮಾಡಿ ಕುಟುಂಬಸ್ಥರು ಕಳುಹಿಸಿಕೊಟ್ಟಿದ್ದಾರೆ.
ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಿಎಸ್‌ಎಫ್ ಯೋಧ ಸಿದ್ದಪ್ಪ ಅವರು ರಜೆಗೆಂದು ಊರಿಗೆ ಬಂದಿದ್ದರು. ಸದ್ಯ ಸೇನೆಯ ತುರ್ತು ಕರೆಯ ಮೇರೆಗೆ ಕಲಬುರಗಿ ರೈಲು ನಿಲ್ದಾಣದಿಂದ ಹೈದ್ರಾಬಾದ್‌ಗೆ ಹೋಗಿ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.ಇದನ್ನೂ ಓದಿ: ಬ್ರಹ್ಮೋಸ್ ದಾಳಿಗೆ ಬೆಚ್ಚಿ ಗೋಗರೆದು ಕದನ ವಿರಾಮ ಮಾಡಿಸಿದ್ದ ಪಾಕ್!