ನವದೆಹಲಿ: ದೇಶದ ಮೊದಲ `ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್) ರನ್ನಾಗಿ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಿದ ಬಳಿಕ ಈಗ ಕೇಂದ್ರ ಸರ್ಕಾರ, ಮಿಲಿಟರಿ ಅಫೇರ್ಸ್ ಡಿಪಾಟ್ರ್ಮೆಂಟ್ ಎಂಬ ಹೊಸ ಇಲಾಖೆಯನ್ನು ಸೃಷ್ಟಿಸಿದೆ.
ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.
Advertisement
Indian Army: Chief of the Defence Staff(CDS) on assumption of appointment will have his office in South Block. CDS shall have parent Service uniform. (pic 1: Car flag, Pic 2: peak cap, Pic 3: shoulder badges, pic 4: belt buckle) pic.twitter.com/efWkbSLKG8
— ANI (@ANI) December 31, 2019
Advertisement
ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವಯ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.
Advertisement
ಮಿಲಿಟರಿ ಅಫೇರ್ಸ್ ಡಿಪಾಟ್ರ್ಮೆಂಟ್‍ಗೆ ದೆಹಲಿಯ ಸೌಥ್ ಬ್ಲಾಕ್ ನಲ್ಲಿ ಕಚೇರಿ ಒದಗಿಸಲಾಗಿದ್ದು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ನೂತನ ಸಿಡಿಎಸ್ ಹುದ್ದೆಗೆ ಪ್ರತ್ಯೇಕ ಕಾರಿನ ಧ್ವಜ, ಟೋಪಿ, ಭುಜ ಪಟ್ಟಿ, ಮತ್ತು ಬೆಲ್ಟ್‍ನ್ನು ವಿನ್ಯಾಸ ಮಾಡಲಾಗಿದೆ.