ನವದೆಹಲಿ: ಭಾರತದ ಮೂರು ಸೇನಾ ಪಡೆಗಳಲ್ಲಿ ಅಧಿಕಾರಿಗಳು ಹಾಗೂ ಸೈನಿಕರ ಕೊರತೆ ಕಾಡುತ್ತಿದ್ದು, ಪ್ರಸ್ತುತ 9,427 ಅಧಿಕಾರಿಗಳು ಹಾಗೂ 68,864 ಯೋಧರ ಕೊರತೆಯಿದೆ ಎಂದು ಮೂಲಗಳು ತಿಳಿಸಿವೆ.
2019ರ ಜನವರಿವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ಭೂಸೇನಾ ಪಡೆಯಲ್ಲಿ 50,312 ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಅವಕಾಶವಿದೆ. ಆದರೆ ಪ್ರಸ್ತುತ 42,913 ಅಧಿಕಾರಿಗಳು ಮಾತ್ರ ಇದ್ದು, ಸುಮಾರು 7,399 ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.
Advertisement
Advertisement
ಹಾಗೆಯೇ ನೌಕಾ ಪಡೆಯಲ್ಲಿ 11,557 ಅಧಿಕಾರಿಗಳನ್ನು ಹೊಂದುವ ಅವಕಾಶವಿದೆ. ಆದರೆ ಸದ್ಯ 10,012 ಮಂದಿ ಅಧಿಕಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ 1,545 ಅಧಿಕಾರಿಗಳ ಕೊರತೆಯಿದೆ ಎಂದು ಜೂನ್ 2019ರವೆರೆಗೆ ಲಭ್ಯವಿರುವ ಮಾಹಿತಿ ತಿಳಿಸಿದೆ.
Advertisement
ವಾಯುಪಡೆಯಲ್ಲಿ 12,625 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದು, ಆದರೆ ಪ್ರಸ್ತುತ 12,142 ಮಂದಿ ಅಧಿಕಾರಿಗಳಿದ್ದು, 483 ಅಧಿಕಾರಿಗಳು ಬೇಕಾಗಿದ್ದಾರೆ ಎಂದು ತಿಳಿದುಬಂದಿದೆ.
Advertisement
ಆಫೀಸರ್ ಅಥವಾ ಏರ್‍ಮೆನ್ ಅಥವಾ ನಾವಿಕ ಶ್ರೇಣಿಗಿಂತಲೂ ಕಡಿಮೆ ಶ್ರೇಣಿಯ ಹುದ್ದೆಗಳನ್ನು ಗಮನಿಸಿದಲ್ಲಿ ಭೂಸೇನಾಪಡೆಗೆ ಒಟ್ಟು 12.23 ಲಕ್ಷ ಯೋಧರನ್ನು ಹೊಂದಲು ಅವಕಾಶವಿದೆ. ಆದರೆ ಪ್ರಸ್ತುತ 11.85 ಲಕ್ಷ ಯೋಧರು ಮಾತ್ರ ಇದ್ದಾರೆ. ಹಾಗಾಗಿ 38,235 ಯೋಧರ ಕೊರತೆಯಿದೆ. ನೌಕಾಪಡೆಯಲ್ಲಿ 16,806 ಹಾಗೂ ವಾಯುಪಡೆಯಲ್ಲಿ 13,823 ಯೋಧರ ಹುದ್ದೆಗಳು ಖಾಲಿ ಉಳಿದಿವೆ.
ಪ್ರಾದೇಶಿಕ ಸೈನ್ಯ (ಟಿಎ) ಸ್ವಯಂಸೇವಕ ನಾಗರಿಕರಿಗೆ ಸೈನ್ಯದ ಸಮವಸ್ತ್ರವನ್ನು ಧರಿಸಲು ಹಾಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಲಾಭದಾಯಕ ಉದ್ಯೋಗವನ್ನು ಒದಗಿಸುತ್ತಿದೆ. ಸೈನ್ಯದಲ್ಲಿ ಸ್ಥಿರವಾದ ಕರ್ತವ್ಯಗಳು, ಸಮುದಾಯದ ಜೀವನಕ್ಕೆ ಧಕ್ಕೆ ಉಂಟಾಗುವ ಅಥವಾ ದೇಶದ ಭದ್ರತೆಗೆ ಧಕ್ಕೆ ಉಂಟಾಗುವ ಪರಿಸ್ಥಿತಿಯಲ್ಲಿ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವುದು, ಅಗತ್ಯ ಸೇವೆಗಳ ನಿರ್ವಹಣೆಯಲ್ಲಿ ನಾಗರಿಕ ಪ್ರಾಧಿಕಾರಕ್ಕೆ ಸಹಾಯ ಮಾಡುವುದು ಪ್ರಾದೇಶಿಕ ಸೈನ್ಯ ಪಾತ್ರವಾಗಿದೆ. ಅಲ್ಲದೆ ಅಗತ್ಯಬಿದ್ದಾಗ ಭಾರತೀಯ ಸೇನೆಯ ಸಹಾಕ್ಕಾಗಿ ಕೂಡ ಟಿಎ ಪಡೆ ಕಾರ್ಯ ನಿರ್ವಹಿಸುತ್ತದೆ.