ವಾಷಿಂಗ್ಟನ್: ವಿಶ್ವದಲ್ಲೇ ಅತಿ ದೊಡ್ಡ ಆನ್‌ಲೈನ್ ವೀಡಿಯೋ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ಯೂಟ್ಯೂಬ್‌ಗೆ (YouTube) ಹೊಸ ಸಿಇಒ (CEO) ಆಗಿ ಭಾರತ ಮೂಲದ ನೀಲ್ ಮೋಹನ್ (Neal Mohan) ನೇಮಕಗೊಂಡಿದ್ದಾರೆ.
ಕಳೆದ 9 ವರ್ಷಗಳಿಂದ ಯೂಟ್ಯೂಬ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಸುಸಾನ್ ವೊಜ್ಸಿಕಿ (Susan Wojcicki) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಅವರ ಸ್ಥಾನವನ್ನು ಈಗ ನೀಲ್ ಮೋಹನ್ ವಹಿಸಿಕೊಳ್ಳಲಿದ್ದಾರೆ. 54 ವರ್ಷದ ಸುಸಾನ್ ತಮ್ಮ ಕುಟುಂಬ ಹಾಗೂ ವೈಯಕ್ತಿಕ ಜೀವನಕ್ಕೆ ಇದೀಗ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ನೀಲ್ ಮೋಹನ್ ಯಾರು?: ಭಾರತ ಮೂಲದ ನೀಲ್ ಮೋಹನ್ ಅವರು ಈ ಹಿಂದೆ ಯೂಟ್ಯೂಬ್‌ನ ಮುಖ್ಯ ಉತ್ಪನ್ನಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2008ರಲ್ಲಿ ಯೂಟ್ಯೂಬ್‌ನ ಮಾತೃ ಕಂಪನಿಯಾಗಿರುವ ಗೂಗಲ್‌ಗೆ (Google) ಸೇರಿದ ಅವರು 15 ವರ್ಷಗಳ ಕಾಲ ವೊಜ್ಸಿಕಿ ಅವರ ಯೋಜನೆಗಳಿಗೆ ಸಹಕರಿಸಿದ್ದಾರೆ. ಡಿಸ್‌ಪ್ಲೇ ಹಾಗೂ ವೀಡಿಯೋ ಜಾಹೀರಾತುಗಳ ಹಿರಿಯ ಉಪಾಧ್ಯಕ್ಷರಾಗಿದ್ದ ಅವರು 2015ರಲ್ಲಿ ಯೂಟ್ಯೂಬ್‌ನ ಮುಖ್ಯ ಉತ್ಪನ್ನಾಧಿಕಾರಿಯಾಗಿ ನೇಮಕಗೊಂಡರು. ಇದನ್ನೂ ಓದಿ: Aero India 2023: ಇಂದು ಕೊನೆಯ ದಿನದ ಏರ್‌ಶೋ ಕಣ್ತುಂಬಿಕೊಳ್ಳಿ
Advertisement
Advertisement
ನೀಲ್ ಮೋಹನ್ 1996 ರಲ್ಲಿ ಅಮೆರಿಕದ ಸ್ಟ್ಯಾಂಡ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟಿçಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ 2005 ರಲ್ಲಿ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ ಎಂಬಿಎ ಮುಗಿಸಿದರು. ಯೂಟ್ಯೂಬ್ ಮಾತ್ರವಲ್ಲದೇ ಅವರು ಬಟ್ಟೆ ಮತ್ತು ಫ್ಯಾಶನ್ ಕಂಪನಿ ಸ್ಟಿಚ್ ಫಿಕ್ಸ್‌ಗೆ ಮಂಡಳಿಯ ನಿರ್ದೇಶಕರಾಗಿ ಸೇವೆಯನ್ನೂ ಸಲ್ಲಿಸಿದ್ದಾರೆ. 23 ಆಂಡ್‌ಮಿ ಜೈವಿಕ ತಂತ್ರಜ್ಞಾನ ಸಂಶೋಧನಾ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ಮಡಿದ ಮಗನ ಹೆಸರಲ್ಲಿ ಮನೆ ನಿರ್ಮಿಸಿದ ತಂದೆ-ತಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k