ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ನೌಕಾಪಡೆಯ ಅಧಿಕಾರಿ ಶಾಂತಿ ಸೇಠಿ ಅವರನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ರಕ್ಷಣಾ ಸಲಹಾಗಾರ್ತಿಯನ್ನಾಗಿ ನೇಮಕ ಮಾಡಲಾಗಿದೆ.
ಶಾಂತಿ ಅವರು ಭಾರತ ಮೂಲದ ಮೊದಲ ಮಹಿಳಾ ಅಮೆರಿಕ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾಂತಿ 2010ರಿಂದ 2012ರವರೆಗೆ ಕ್ಷಿಪಣಿ ವಿದ್ವಂಸಕ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಮೂಲದ ಅಮೆರಿಕ ನೌಕೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದರು.
Advertisement
Advertisement
1993ರಲ್ಲಿ ನೌಕಾಪಡೆಗೆ ಸೇರಿದಾಗ, ಯುದ್ಧದ ಹೊರಗಿಡುವ ಕಾನೂನು ಇನ್ನೂ ಜಾರಿಯಲ್ಲಿತ್ತು. ನಂತರದಲ್ಲಿ ಆ ಕಾಯಿದೆಯನ್ನು ತೆಗೆದುಹಾಕಲಾಯಿತು. 1960ರಲ್ಲಿ ಶಾಂತಿ ಅವರ ತಂದೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲೇ ನೆಲೆಸಿದರು. ಇದನ್ನೂ ಓದಿ: ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ
Advertisement
ಕಮಲಾ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ಕಾರು ಪಲ್ಟಿ – ಪ್ರಾಣಾಪಾಯದಿಂದ ಟಿಬಿ ಜಯಚಂದ್ರ ಪಾರು