ವಾಷಿಂಗ್ಟನ್: ಬಕ್ರ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರಖ್ಯಾತ ಪ್ರೊಫೆಸರ್ ಆದ ಭಾರತೀಯ-ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವ್ ಅವರು ಸಿಪ್ರಿಯನ್ ಫೊಯಾಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿ(ಎಎಂಎಸ್) ನಿಂದ ಆಪರೇಟರ್ ಥಿಯರಿಯಲ್ಲಿನ ಉದ್ಘಾಟನಾ ಸಿಪ್ರಿಯನ್ ಫೊಯಾಸ್ ಪ್ರಶಸ್ತಿಯನ್ನು ನೀಡಿತ್ತಿದ್ದು, ಈ ಪುರಸ್ಕಾರಕ್ಕೆ ನಿಖಿಲ್ ಅವರನ್ನು ಸೇರಿ ಅವರ ಸಹೋದ್ಯೋಗಿಗಳಾದ ಆಡಮ್ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮನ್ ಎನ್ನುವ ಇತರ ಇಬ್ಬರು ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ.
Advertisement
Advertisement
ಆಡಮ್ ಮಾರ್ಕಸ್ ಸ್ವಿಟ್ಜರ್ಲೆಂಡ್‍ನ ಎಕೋಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲೌಸಾನ್ನೆ(ಇಪಿಎಫ್‍ಎಲ್) ನಲ್ಲಿ ಸಂಯೋಜಿತ ವಿಶ್ಲೇಷಣೆಯ ಅಧ್ಯಕ್ಷರಾಗಿದ್ದಾರೆ. ಡೇನಿಯಲ್ ಸ್ಪೀಲ್‍ಮ್ಯಾನ್ ಕಂಪ್ಯೂಟರ್ ಸೈನ್ಸ್‍ನ ಸ್ಟರ್ಲಿಂಗ್ ಪ್ರೊಫೆಸರ್, ಅಂಕಿಅಂಶ ಮತ್ತು ಡೇಟಾ ವಿಜ್ಞಾನದ ಪ್ರಾಧ್ಯಾಪಕ ಮತ್ತು ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು
Advertisement
ಮ್ಯಾಟ್ರಿಕ್ಸ್‍ಗಳ ವಿಶಿಷ್ಟವಾದ ಬಹುಪದವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬ ವಿಧಾನಗಳನ್ನು ಪರಿಚಯಿಸಿದ ಮತ್ತು ಅಭಿವೃದ್ಧಿಪಡಿಸಿದ ಹಿನ್ನೆಲೆ ಈ ಮೂವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
Advertisement
ಬ್ಯಾಟ್ಸನ್‍ನ ಸಹಯೋಗದೊಂದಿಗೆ ಇವರು ಪುನರಾವರ್ತಿತ ಸ್ಪಾರ್ಸಿಫಿಕೇಶನ್ ವಿಧಾನ ಮತ್ತು ಬಹುಪದೋಕ್ತಿಗಳನ್ನು ಇಂಟರ್ಲೇಸಿಂಗ್ ಮಾಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದು, ಈ ಇನೋವೇಷನ್ ನಿಂದ ಮ್ಯಾಕ್ಸ್ ನಲ್ಲಿ ಎದುರಾಗುವ ಕಠಿಣ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಲು ಸಹಾಯ ಮಾಡುತ್ತದೆ.
ಈ ಕುರಿತು ಮಾತನಾಡಿದ ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿ, ಈ ಆಲೋಚನೆಗಳು ಅನೇಕ ಅಪ್ಲಿಕೇಶನ್‍ಗಳೊಂದಿಗೆ ಪ್ರಬಲ ಟೂಲ್‍ಕಿಟ್ ಅನ್ನು ಒದಗಿಸಿವೆ. ಮುಖ್ಯವಾಗಿ ಈ ಮೂವರು ಕಂಡು ಹಿಡಿದ ಇನೋವೇಷನ್ ನಲ್ಲಿ ಇಂಟರ್‍ಲೇಸಿಂಗ್ ಫ್ಯಾಮಿಲಿ II : ಮಿಶ್ರ ವಿಶಿಷ್ಟವಾದ ಬಹುಪದಗಳು ಮತ್ತು ಕ್ಯಾಡಿಸನ್-ಸಿಂಗರ್ ಸಮಸ್ಯೆ(ಆನಲ್ಸ್ ಆಫ್ ಮ್ಯಾಥಮ್ಯಾಟಿಕ್ಸ್, 2015)ಗಳಿಗೆ ಸುಲಭದಲ್ಲಿ ಪರಿಹಾರ ಸಿಗುತ್ತೆ. ಅದು ಅಲ್ಲದೇ ‘ಪೇವಿಂಗ್ ಸಮಸ್ಯೆಯನ್ನು’ ಪರಿಹರಿಸುತ್ತದೆ ಎಂದು ಹೇಳಿದೆ.
ಈ ಕುರಿತು ಮಾತನಾಡಿದ ಮೂವರು, ಕ್ಯಾಡಿಸನ್-ಸಿಂಗರ್ ಸಮಸ್ಯೆಯ ಪರಿಹಾರಕ್ಕೆ ಕೊಡುಗೆ ನೀಡಿದ ಅನೇಕ ಜನರ ಪರವಾಗಿ ಪುರಸ್ಕಾರವನ್ನು ಸ್ವೀಕರಿಸಲು ಬಯಸುತ್ತೇವೆ. ನಾವು ಕಂಡುಹಿಡಿದ ಈ ಇನೋವೇಷನ್ ಅಮೇಜಾನ್ ಸ್ಟೂರಿಯ ಕೊನೆಯ ಅಧ್ಯಾಯವಾಗಿದೆ. ಈ ಇನೋವೇಷನ್ ಕಠಿಣ ಸಮಸ್ಯೆಯನ್ನು ಪರಿಹಾರಿಸಲು ಸಹಾಯ ಮಾಡುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ
ಈ ಪ್ರಶಸ್ತಿಯನ್ನು ನಿಖಿಲ್ ಶ್ರೀವಾಸ್ತವ್ ಮತ್ತು ಅವರ ಇತರ ಸಹೋದ್ಯೋಗಿಗಳಿಗೆ ಮುಂದಿನ ವರ್ಷ ಜನವರಿ 5 ರಂದು ನೀಡಲಾಗುತ್ತದೆ. ಅದು ಅಲ್ಲದೇ ಸಿಪ್ರಿಯನ್ ಫೊಯಾಸ್ ಪ್ರಶಸ್ತಿಯು ನಿಖಿಲ್ ಶ್ರೀವಾಸ್ತವ್ ಅವರು ಗೆದ್ದ ಮೂರನೇ ಪ್ರಮುಖ ಬಹುಮಾನದಲ್ಲಿ ಒಂದಾಗಿದೆ. ಈ ಹಿಂದೆ ಅವರು ಜಂಟಿಯಾಗಿ 2014 ರಲ್ಲಿ ಜಾರ್ಜ್ ಪಾಲಿಯಾ ಪ್ರಶಸ್ತಿಯನ್ನು, 2021 ರಲ್ಲಿಯೂ ಬಹುಮಾನವನ್ನು ಗೆದ್ದಿದ್ದರು.