ವಾಷಿಂಗ್ಟನ್: ಯುಎಸ್‌ನ ವಿಶೇಷ ವಿಮಾನದಲ್ಲಿ (US Boston Flight) 14 ವರ್ಷದ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ 33 ವರ್ಷದ ಭಾರತೀಯ ಅಮೆರಿಕನ್ ವೈದ್ಯನನ್ನ (Indian-American Doctor) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಬಂಧಿಸಿರುವ ಘಟನೆ ಅಮೆರಿಕದ ಮಸಾಚುಸೆಟ್ಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೇ ತಿಂಗಳಲ್ಲಿ ಬೋಸ್ಟನ್‌ಗೆ (Boston) ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಸಾಚುಸೆಟ್ಸ್‌ನ ಡಾ. ಸುದೀಪ್ತ ಮೊಹಾಂತಿ ವೈದ್ಯನನ್ನ ಗುರುವಾರ ಬಂಧಿಸಲಾಗಿದೆ. ಇದನ್ನೂ ಓದಿ: ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ
Advertisement
Advertisement
ಆ ದಿನ ವಿಮಾನದಲ್ಲಿ ಏನಾಯ್ತು?
ಬೋಸ್ಟನ್‌ನ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ನಲ್ಲಿ ವೈದ್ಯನಾಗಿರುವ ಡಾ.ಮೊಹಾಂತಿ ಅಂದು ಯುಎಸ್‌ನ ವಿಶೇಷ ವಿಮಾನದಲ್ಲಿ ಮಹಿಳಾ ಸಹಚರರೊಂದಿಗೆ ಪ್ರಯಾಣ ಬೆಳೆಸಿದ್ದ. ವಿಮಾನದಲ್ಲಿ 14ರ ಬಾಲಕಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ವಿಮಾನ ಅರ್ಧದಷ್ಟು ದೂರಕ್ಕೆ ತಲುಪಿತ್ತು. ಆಗ ತನ್ನ ಕುತ್ತಿಗೆವರೆಗೆ ಕಂಬಳಿಯಿಂದ ಮುಚ್ಚಿಕೊಂಡಿದ್ದ ವೈದ್ಯ ಅವನ ಕಾಲು ಮೇಲಕ್ಕೆ ಕೆಳಕ್ಕೆ ಆಡುತ್ತಿರುವುದನ್ನ ಹುಡುಗಿ ಗಮನಿಸಿದಳು.
Advertisement
Advertisement
ಸ್ವಲ್ಪ ಸಮಯದ ಬಳಿಕ ಕಂಬಳಿ ಕೆಳಗೆ ಬಿದ್ದಿತು. ಆಗ ವೈದ್ಯ ಹಸ್ತಮೈಥುನ ಮಾಡಿಕೊಳ್ಳುವುದನ್ನ ಹುಡುಗಿ ಗಮನಿಸಿದಳು. ನಂತರ ಅವನು ಕಂಬಳಿಯನ್ನೂ ಮುಚ್ಚಿಕೊಳ್ಳದೇ ಹಾಗೇ ಕುಳಿತಿದ್ದ. ಬಳಿಕ ಬಾಲಕಿ ತನ್ನ ಸೀಟಿನಿಂದ ಬೇರೆ ಸೀಟಿಗೆ ತೆರಳಿದಳು. ಬೋಸ್ಟನ್‌ನಲ್ಲಿ ವಿಮಾನದಿಂದ ಇಳಿದ ನಂತರ ಬಾಲಕಿ ತನ್ನ ಕುಟುಂಬದವರಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ಆದ್ರೆ ಬಾಲಕಿಯ ಆರೋಪ ವೈದ್ಯ ತಿರಸ್ಕರಿಸಿದ್ದಾನೆ. ನನಗೆ ಯಾವುದೂ ನೆನಪಿಲ್ಲ ಎಂದು ಜಾರಿಕೊಳ್ಳಲು ಪ್ರಯತ್ನಿಸಿದ್ದಾನೆ.
ವೈದ್ಯ ಮೊಹಾಂತಿಯನ್ನು ಬಂಧಿಸಿದ ಎಫ್‌ಬಿಐ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ಬಳಿಕ ಆರೋಪ ಸಾಬೀತಾಗಿ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ಡಾಲರ್ (4,14,783 ರೂ.) ದಂಡ ವಿಧಿಸಲಾಯಿತು. ಇದನ್ನೂ ಓದಿ: ಭಾರತದ ಚಂದ್ರಯಾನ-3 V/S ರಷ್ಯಾದ ಲೂನಾ-25: ಚಂದ್ರನ ಮೇಲೆ ಮೊದಲು ಹೆಜ್ಜೆ ಇಡೋದು ಯಾರು?
Web Stories