ವಾಷಿಂಗ್ಟನ್: ಭಾರತೀಯ-ಅಮೆರಿಕನ್ (India-American Congress Women) ರಾಜಕಾರಣಿ, ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ (Pramila Jayapal) ಅವರನ್ನು ಹಿಂಬಾಲಿಸಿ, ಚುಡಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ 364 ದಿನಗಳ ಜೈಲು ಶಿಕ್ಷೆ ವಿಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಬ್ರೆಟ್ ಫೋರ್ಸೆಲ್ (49) ಎಂಬಾತ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ಹ್ಯಾಂಡ್‌ಗನ್ ಹಿಡಿದು ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ. ಕೆಲವೊಮ್ಮೆ ಪ್ರಾಣ ಬೆದರಿಕೆ ಕೂಡ ಹಾಕಿದ್ದ ಎಂದು ದೂರು ದಾಖಲಾಗಿತ್ತು. ಇದನ್ನೂ ಓದಿ: ಶ್ವೇತಭವನದಲ್ಲಿ ಕೊಕೇನ್ ಪತ್ತೆ – ತೀವ್ರ ತನಿಖೆ
Advertisement
Advertisement
ಸಿಯಾಟಲ್ ಪೊಲೀಸರು, ಜಯಪಾಲ್ ಅವರ ಮನೆಯ ಹೊರಗೆ ಬಂದೂಕು ಹಿಡಿದು ನಿಂತಿದ್ದ ಬ್ರೆಟ್ ಫೋರ್ಸೆಲ್‌ನನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಪ್ರಕರಣವು ಸಿಯಾಟಲ್‌ನ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ವೇಳೆ ಬ್ರೆಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
Advertisement
Advertisement
57 ವರ್ಷದ ಜಯಪಾಲ್ ಅವರು ವಾಷಿಂಗ್ಟನ್‌ನ 7 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟನ್ನು ಪ್ರತಿನಿಧಿಸುತ್ತಾರೆ. 2016 ರಲ್ಲಿ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದ ಮೊದಲ ಭಾರತೀಯ-ಅಮೆರಿಕನ್ ಮಹಿಳೆಯಾಗಿದ್ದಾರೆ. ಇದನ್ನೂ ಓದಿ: ಪಾಕ್ ಪಿಎಂ ಶೆಹಬಾಜ್ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ
Web Stories