ವಿಕ್ರಮ್ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುಗುತ್ತಿರುವ ಕಮಲ್ ಹಾಸನ್ ಅಭಿಮಾನಿಗಳಿಗೆ ಇವತ್ತು ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಎರಡು ವರ್ಷಗಳ ಹಿಂದೆ ನಿಂತಿದ್ದ ಇಂಡಿಯನ್ 2 ಸಿನಿಮಾ ಮತ್ತೆ ಚಾಲನೆ ಸಿಕ್ಕಿದ್ದು, ಈ ಕುರಿತು ಚಿತ್ರತಂಡವು ಹೊಸ ಲುಕ್ ರಿಲೀಸ್ ಮಾಡುವ ಮೂಲಕ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ರಿಲೀಸ್ ಆಗಿರುವ ನಯಾ ಲುಕ್ ನೋಡಿ ಕಮಲ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
Advertisement
ಅಂದುಕೊಂಡಂತೆ ಆಗಿದ್ದರೆ ಇಂಡಿಯನ್ 2 ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಬೇಕಿತ್ತು. 2020ರಲ್ಲಿ ನಿರ್ದೇಶಕ ಶಂಕರ್ ಈ ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದರು. ಆದರೆ, ಕ್ರೇನ್ ದುರಂತಕ್ಕೆ ಕಾರ್ಮಿಕರು ಬಲಿಯಾಗಿ, ಅಲ್ಲಿಗೆ ಶೂಟಿಂಗ್ ನಿಲ್ಲಿಸಿದ್ದರು. ನಂತರದ ದಿನಗಳಲ್ಲಿ ಕೋವಿಡ್ ಎಂಬ ಮಹಾಮಾರಿ ಕಾಲಿಟ್ಟಿತ್ತು. ಹಾಗಾಗಿ ಎರಡು ವರ್ಷಗಳ ಕಾಲ ಅವರು ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?
Advertisement
Advertisement
ಇಂದು ಇಂಡಿಯನ್ 2 ಸಿನಿಮಾದ ಅಪ್ ಡೇಟ್ ವಿವರನ್ನು ನಿರ್ದೇಶಕ ಶಂಕರ್ ನೀಡಿದ್ದು, ಅತೀ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. 1996ರಲ್ಲಿ ಇಂಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸನಲ್ಲಿ ಭಾರೀ ಗಳಿಕೆ ಮಾಡಿತ್ತು. ಆನಂತರ ಇಂಡಿಯನ್ 2 ಸಿನಿಮಾ ಮಾಡುವ ವಿಚಾರ ಬಂತು. 24 ವರ್ಷಗಳ ಬಳಿಕೆ ಇಂಡಿಯನ್ ಸಿಕ್ವೆಲ್ ಸಿನಿಮಾ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ.