ಬೆಂಗಳೂರು: ದೇಶದಲ್ಲಿ ಹಣೆಬರಹದಿಂದ ಭಿಕ್ಷಾಟನೆ ಮಾಡುವ ಗುಂಪು ಒಂದಾದರೆ, ಅಂಗವೈಕಲ್ಯದಿಂದ ಭಿಕ್ಷಾಟನೆ ಮಾಡುವವರು ಮತ್ತೊಂದು ಗುಂಪಿನವರಾಗಿದ್ದಾರೆ.
ಇಂತಹ ಅಸಹಾಯಕ ಜನರಿಗೆ ನಾವು ಭಿಕ್ಷೆಯನ್ನು ನೀಡುವುದನ್ನು ನಿಲ್ಲಿಸಿ, ನಮ್ಮ ಸರ್ಕಾರದಿಂದ ರೂಪಿಸಿರುವಂತಹ ಕಾನೂನಾದ “ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ಅವರಿಗೆ, ಜೀವನ ನಡೆಸಲು ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಲು, ಸರ್ಕಾರದಿಂದ ಕೌಶಲ್ಯ ಅಭಿವೃದ್ಧಿ ಹಾಗೂ ಸಣ್ಣ ಪುಟ್ಟ ಕೆಲಸಗಳ ತರಬೇತಿಯನ್ನು ನೀಡಲಾಗುತ್ತಿದೆ.ಆದ್ದರಿಂದ ಸಾರ್ವಜನಿಕರಾದ ನಾವು, ಇಂತಹವರಿಗೆ ಭಿಕ್ಷೆಯಾಗಿ ಹಣವನ್ನು ನೀಡುವ ಬದಲು, ಅವರಿಗೆ ಕಾಯ್ದೆಯ ಬಗ್ಗೆ ತಿಳಿಸಿ, ಅವರನ್ನೂ ಸಹ ನಮ್ಮಂತೆಯೆ ಸ್ವತಂತ್ರವಾಗಿ ಜೀವನ ನಡೆಸಲು ಸಹಾಯ ಮಾಡೋಣ ಎಂದು ಬೆಂಗಳೂರಿನ ಯುವಕರು ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ:ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು
1975ನೆಯ ಕಾಯ್ದೆಯ ಅಡಿಯಲ್ಲಿ, ಭಿಕ್ಷಾಟನೆ ನಿರ್ಮೂಲ ಮಾಡುವ ಮೂಲಕ, ನಿಜವಾದ ಸ್ವಾತಂತ್ರ್ಯಕ್ಕೆ ಮುನ್ನುಡಿಯನ್ನು ಬರೆಯಲು, ನಾವು ಭಿಕ್ಷಾಟನೆ ಮುಕ್ತಭಾರತ ಅಭಿಯಾನವನ್ನು ಶುರುಮಾಡಿದ್ದೇವೆ. ಇದಕ್ಕೆ ಯಶಸ್ಸನ್ನು ತಂದು ಕೊಟ್ಟು ನಮ್ಮ ದೇಶದಲ್ಲಿ ಭಿಕ್ಷಾಟನೆ ಇಲ್ಲದಂತೆ ಮಾಡೋಣ. ಬನ್ನಿ ನಮ್ಮೋಟ್ಟಿಗೆ ಕೈ ಜೋಡಿಸಿ ಎಂದು ಯುವಕರು ಜಾಗೃತಿ ಕರೆ ನೀಡಿದ್ದಾರೆ. ಇದನ್ನೂ ಓದಿ:ಪಂಚರ್ ಆಗಿ ಹಿಮ್ಮುಖವಾಗಿ ಚಲಿಸಿ ಟ್ರ್ಯಾಕ್ಟರ್ ಪಲ್ಟಿ