ನವದೆಹಲಿ: ಭಯೋತ್ಪಾದನೆಯನ್ನು (Terrorism) ಬೇರು ಸಮೇತ ಕಿತ್ತೊಗೆಯುವವರೆಗೂ ಭಾರತ ವಿಶ್ರಮಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ʼನೋ ಮನಿ ಫಾರ್ ಟೆರರಿಸಂʼ ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತು ಸಚಿವರ ಸಮಾವೇಶ ಮೋದಿ ಅವರು ಇಂದು ಮಾತನಾಡಿದರು. ಇದನ್ನೂ ಓದಿ: ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು
Advertisement
Advertisement
ನಮ್ಮ ನಾಗರಿಕರು ಸುರಕ್ಷಿತವಾಗಿರಲು ನಾವು ಬಯಸಿದರೆ, ನಮ್ಮ ಮನೆಗಳಿಗೆ ಭಯೋತ್ಪಾದನೆ ಬರುವವರೆಗೆ ಕಾಯಲು ಸಾಧ್ಯವಿಲ್ಲ. ನಾವು ಭಯೋತ್ಪಾದಕರನ್ನು ಹಿಂಬಾಲಿಸಬೇಕು. ಅವರ ಬೆಂಬಲ ಜಾಲಗಳನ್ನು ಮುರಿಯಬೇಕು. ಅವರ ಹಣಕಾಸು ಮೂಲಗಳನ್ನು ನಾಶ ಮಾಡಬೇಕು ಎಂದು ತಿಳಿಸಿದ್ದಾರೆ.
Advertisement
ಜಗತ್ತು ಗಂಭೀರವಾಗಿ ಪರಿಗಣಿಸುವ ಮುಂಚೆಯೇ ನಮ್ಮ ದೇಶವು ಭಯೋತ್ಪಾದನೆಯ ಭೀಕರತೆಯನ್ನು ಎದುರಿಸಿದೆ. ದಶಕಗಳಿಂದ ವಿವಿಧ ರೂಪಗಳಲ್ಲಿ ಭಯೋತ್ಪಾದನೆಯು ದೇಶವನ್ನು ನೋಯಿಸಲು ಪ್ರಯತ್ನಿಸಿದೆ. ಆದರೆ ಭಾರತವು ಧೈರ್ಯದಿಂದ ಹೋರಾಡಿದೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಗರ್ಲ್‍ಫ್ರೆಂಡ್‍ಗೆ ನ್ಯಾಯ ಕೊಡಿಸಿ – 6ನೇ ಮಹಡಿಯಿಂದ ಜಿಗಿದ ವ್ಯಕ್ತಿ
Advertisement
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿರ್ಣಯ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಬೆಂಬಲ ಅಗತ್ಯತೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಾವೇಶದಲ್ಲಿ ಮಾತನಾಡಿದ್ದಾರೆ.