ಕೊಲಂಬೋ: ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಜಯಗಳಿಸಿದೆ. ಈ ಮೂಲಕ ಟೆಸ್ಟ್, ಏಕದಿನ, ಟಿ20 ಪಂದ್ಯವನ್ನೂ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.
171 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 19.2 ಓವರ್ ಗಳಲ್ಲಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಪರವಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಷ್ ಪಾಂಡೆ ಆಕ್ರಮಣಕಾರಿಯಾಗಿ ಆಡಿದರು. ಕೇವಲ 30 ಎಸೆತಗಳಲ್ಲಿ ಕೊಹ್ಲಿ ಅರ್ಧ ಶತಕ ದಾಖಲಿಸಿದರು. 19ನೇ ಓವರ್‍ನಲ್ಲಿ 54 ಎಸೆತಗಳಲ್ಲಿ 82 ರನ್ ಗಳಿಸಿದ್ದ ಕೊಹ್ಲಿ ಔಟಾದರು. ರೋಹಿತ್ ಶರ್ಮಾ 9 (8 ಬಾಲ್), ಕೆ.ಎಲ್.ರಾಹುಲ್ 24 (18) ರನ್ ಗಳಿಸಿ ಔಟಾದರು. ಬೌಂಡರಿ ಮೂಲಕ ಗೆಲುವಿನ ರನ್ ಬಾರಿಸಿ ಮನೀಷ್ ಪಾಂಡೆ ಅರ್ಧ ಶತಕ ದಾಖಲಿಸಿದರು. ಶ್ರೀಲಂಕಾ ಪರವಾಗಿ ಉದನ, ಲಸಿತ್ ಮಾಲಿಂಗ, ಪ್ರಸನ್ನ ತಲಾ 1 ವಿಕೆಟ್ ಗಳಿಸಿದರು.
Advertisement
Advertisement
ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಶ್ರೀಲಂಕಾ ತಂಡ ಆಕ್ರಮಣಕಾರಿ ಆಟಕ್ಕಿಳಿದಿತ್ತು. ಆದರೆ 3ನೇ ಓವರ್ ನಲ್ಲೇ ಭುವನೇಶ್ವರ್ ಕುಮಾರ್ ಮೊದಲ ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಗೆ ಆಗಮಿಸಿದ ಮುನವೀರ ಆಕ್ರಮಣಕಾರಿ ಆಟಕ್ಕಿಳಿದರು. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಸ್ಪಿನ್ನರ್ ಕುಲದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ಆದ್ರು. ಶ್ರೀಲಂಕಾ ಪರವಾಗಿ ಡಿಕ್ವೆಲ್ಲಾ 17 (14 ಬಾಲ್), ಪ್ರಿಯಾಂಜನ್ 40 (40 ಬಾಲ್), ಪಿರೇರಾ 11 (7 ಬಾಲ್), ಪ್ರಸನ್ನ 11 (8 ಬಾಲ್), ಉದನ 19 (10), ಮ್ಯಾಥ್ಯೂಸ್ 7 (5) ರನ್ ಗಳಿಸಿದರು. ನಿಗದಿತ 20 ಓವರ್ ಗಳು ಮುಗಿದಾಗ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು.
Advertisement
ಟೀಂ ಇಂಡಿಯಾ ಪರವಾಗಿ ಚಹಲ್ 3, ಕುಲದೀಪ್ ಯಾದವ್ 2, ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 1 ವಿಕೆಟ್ ಗಳಿಸಿದರು.
Advertisement
Handshakes all around as #TeamIndia beat Sri Lanka by 7 wickets in the one-off T20I #SLvIND pic.twitter.com/gAp4xODQWs
— BCCI (@BCCI) September 6, 2017
Another chase, another quality knock! Kohli’s dazzling 82 sets up India’s 7 wicket victory. Also, India will return home undefeated. #SLvIND
— Royal Challengers (@RCBTweets) September 6, 2017
Chase master Virat Kohli hits 82 to guide India to a 7 wicket T20I victory over Sri Lanka in Colombo! #SLvIND https://t.co/zZP1L2grsE pic.twitter.com/rqC6aRK8sw
— ICC (@ICC) September 6, 2017