ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಂಡಿಸ್ ವಿರುದ್ಧ 10 ವಿಕೆಟ್‍ಗಳ ಜಯವನ್ನು ಸಾಧಿಸುವುದರೊಂದಿಗೆ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ.
3ನೇ ದಿನದ ಆಟದಲ್ಲಿ 56 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ದಾಳಿಗೆ ಸಿಲುಕಿ ಕೇವಲ 46.1 ಓವರ್ ಗಳಲ್ಲಿ 127 ರನ್ ಗಳಿಗೆ ಅಲೌಟ್ ಆಯಿತು. ಈ ಮೂಲಕ ಭಾರತಕ್ಕೆ 72 ರನ್ ಗೆಲುವಿನ ಗುರಿ ನೀಡಿತು.
Advertisement
ಇದಕ್ಕೂ ಮುನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ 6 ರನ್ ಗಳಿಸುವ ವೇಳೆಗೆ ಯಾದವ್ ಹಾಗೂ ಅಶ್ವಿನ್ ಆರಂಭಿಕ ಆಟಗಾರರ ವಿಕೆಟ್ ಪಡೆದು ಅಘಾತ ನೀಡಿದರು. ಆರಂಭಿಕರಾದ ಕ್ರೇಗ್ ಬ್ರೇಥ್‍ವೈಟ್, ಕೀರನ್ ಪೊವೆಲ್ ಶೂನ್ಯ ಸುತ್ತಿ ಔಟಾದರು. ಬಳಿಕ ತಂಡಕ್ಕೆ ಆಸರೆಯಾಗುವ ನಿರೀಕ್ಷೆ ಮೂಡಿಸಿದ್ದ ಶಾಯ್ ಹೋಪ್ 28 ರನ್ ಹಾಗೂ ಶಿಮೊನ್ ಹೇಟ್ಮೆಯರ್ 17 ರನ್ ಗಳಿಸಿದ್ದ ವೇಳೆ ಪೆವಿಲಿಯನ್ ಸೇರಿದರು.
Advertisement
Innings Break!
Windies all out for 127 in the second innings. @y_umesh registers his first 10-wkt haul in Tests.#TeamIndia require 72 runs to win the 2nd Test.
Chase coming up shortly #INDvWI pic.twitter.com/7YOu03pPoa
— BCCI (@BCCI) October 14, 2018
Advertisement
ಇದಕ್ಕೂ ಮುನ್ನ 2ನೇ ಇನ್ನಿಂಗ್ಸ್ ನಲ್ಲಿ ಸರಳ ಗುರಿ ಬೆನ್ನತ್ತಿದ್ದ ಭಾರತ ಆರಂಭಿಕರಾದ ಕೆಎಲ್ ರಾಹುಲ್ 33 ರನ್ ಹಾಗೂ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ಪೃಥ್ವಿ ಶಾ 33 ರನ್ ಗಳಿಸಿ ಭಾರತಕ್ಕೆ ಗೆಲುವು ತಂದರು.
Advertisement
ವಿಂಡೀಸ್ ಪರ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಮಿಂಚಿದ್ದ ರಾಸ್ಟರ್ ಚೇಸ್ (6 ರನ್)ರನ್ನು ಯಾದವ್ ಬಲಿ ಪಡೆದರು. ಈ ವೇಳೆಗೆ 12 ರನ್ ಮಾತ್ರ ಮುನ್ನಡೆ ಪಡೆದಿದ್ದ ವಿಂಡೀಸ್ 68 ರನ್ ಗಳಿಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಬಂದ ಶೇನ್ ಡೊರಿಚ್ (0 ರನ್), ನಾಯಕ ಜೇಸನ್ ಹೋಲ್ಡರ್ (19 ರನ್), ಜಾರ್ನೆಲ್ ವಾರಿಕಾನ್ (7 ರನ್), ಗ್ಯಾಬ್ರಿಯಲ್ (1 ರನ್) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ದೇವೇಂದ್ರ ಬಿಷೊ 10 ರನ್ ಗಳಿಸಿ ಔಟಾಗದೆ ಉಳಿದರು. 46.1 ಓವರ್‍ಗಳಲ್ಲಿ 127 ರನ್‍ಗಳಿಗೆ ಸರ್ವಪತನವನ್ನು ಕಂಡಿತು.
Make some noise, Hyderabad ????????????????@Paytm #INDvWI pic.twitter.com/LJ3z7v9G36
— BCCI (@BCCI) October 14, 2018
ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಮಿಂಚಿದ್ದ ಉಮೇಶ್ ಯಾದವ್ 2ನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಪಡೆದು ವಿಂಡೀಸ್ ಗೆ ಪತನಕ್ಕೆ ಕಾರಣರಾದರು. ಉಳಿದಂತೆ ರವೀಂದ್ರ ಜಡೇಜಾ 3, ಆರ್ ಅಶ್ವಿನ್ 2, ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
????????????????
A clinical performance by #TeamIndia as they beat the Windies by 10 wickets to clinch the series 2-0. This is their 10 consecutive victory at home ????????@Paytm #INDvWI pic.twitter.com/Mr0Qv7hEWF
— BCCI (@BCCI) October 14, 2018