– ಏಕದಿನ ವಿಶ್ವಕಪ್‍ಗೆ ಭರ್ಜರಿ ಸಿದ್ಧತೆ
ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು 2021 ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆದಿದೆ. ಆದರೆ ಕೊರೊನಾ ವೈರಸ್‍ನಿಂದಾಗಿ ಆಟಗಾರರು ಮನೆಯಲ್ಲೇ ಉಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಮನೆಯಲ್ಲೇ ತಯಾರಿ ಪ್ರಾರಂಭಿಸಿದ್ದಾರೆ. ಲಾಕ್‍ಡೌನ್ ಮಧ್ಯೆ ತಂಡದ ವೇಗದ ಬೌಲರ್ ಪೂಜಾ ವಸ್ತ್ರಕರ್ ಅವರು ತಮ್ಮ ಮನೆಯ ಮೇಲ್ಛಾವಣಿಯನ್ನು ಕ್ರಿಕೆಟ್ ಪಿಚ್ ಆಗಿ ಮಾಡಿದ್ದಾರೆ.
ಮಧ್ಯಪ್ರದೇಶದ ಪೂಜಾ ಅವರು ಗ್ಯಾಸ್ ಸಿಲಿಂಡರ್ ಹಿಡಿದು ವರ್ಕೌಟ್ ನಡೆಸಿದ್ದಾರೆ. ಜೊತೆಗೆ ರಾಜಸ್ಥಾನ್ ರಾಯಲ್ಸ್ ವೇಗದ ಬೌಲರ್ ಕೋಚ್ ಸ್ಟೀಫನ್ ಜೋನ್ಸ್ ಅವರಿಂದ ಆನ್‍ಲೈನ್ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಬೆಳಗ್ಗೆ ಫಿಟ್ನೆಸ್ ತರಬೇತಿ ಮತ್ತು ಸಂಜೆ ಬೌಲಿಂಗ್ ಕೌಶಲ್ಯ ನಡೆಸಿದ್ದಾರೆ.
Advertisement
https://www.instagram.com/p/B-2DjcapoZ7/
Advertisement
”ಫಿಟ್ನೆಸ್ ಸುಧಾರಿಸಿಕೊಳ್ಳಲು ಲಾಕ್‍ಡೌನ್ ಉತ್ತಮ ಅವಕಾಶ ನೀಡಿದೆ” ಎಂದು ಪೂಜಾ ಹೇಳಿದ್ದಾರೆ. ನಾನು ಬೆಳಗ್ಗೆ ಫಿಟ್ನೆಸ್ ಮತ್ತು ಸಂಜೆ ಬೌಲಿಂಗ್ ಕೌಶಲ್ಯದ ಅಭ್ಯಾಸ ನಡೆಸಿರುವೆ. ಫಿಟ್ನೆನಲ್ಲಿ ಸಾಮರ್ಥ್ಯ, ಸ್ಥಿರತೆ ತರಬೇತಿ ಪಡೆಯುತ್ತಿರುವೆ. ನಮ್ಮ ಕುಟುಂಬದಲ್ಲಿ 8ರಿಂದ 10 ಜನರಿದ್ದಾರೆ. ಹೀಗಾಗಿ ಫ್ರೀ ಟೈಮ್‍ನಲ್ಲಿ ಲುಡೋ ಮತ್ತು ಕ್ಯಾರಮ್ ಆಡುತ್ತೇನೆ. ಅಷ್ಟೇ ಅಲ್ಲದೆ ಕುಟುಂಬದೊಂದಿಗೆ ರಾಮಾಯಣ ಮತ್ತು ಮಹಾಭಾರತ ಸೀರಿಯಲ್ ನೋಡುತ್ತೇನೆ ಎಂದು ಪೂಜಾ ತಿಳಿಸಿದ್ದಾರೆ.
Advertisement
ರಾಜಸ್ಥಾನ್ ರಾಯಲ್ಸ್ ವೇಗದ ಬೌಲಿಂಗ್ ಕೋಚ್ ಸ್ಟೀಫನ್ ಜಾನ್ಸ್ ಅವರ ಸಹಾಯವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ವಾಟ್ಸಪ್‍ನಲ್ಲಿ ಸ್ಟೀಫನ್ ನನಗೆ ವರ್ಕೌಟ್ ಮತ್ತು ತರಬೇತಿ ವೇಳಾಪಟ್ಟಿಯನ್ನು ಕಳುಹಿಸಿದ್ದಾರೆ. ಅದನ್ನು ಅನುಸರಿಸುತ್ತಿರುವೆ. ಅವರು ವಿಡಿಯೋ ಕಾಲ್ ಮೂಲಕ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ನನ್ನ ಅಭ್ಯಾಸದ ವಿಡಿಯೋಗಳನ್ನು ಅವರಿಗೆ ಕಳುಹಿಸುತ್ತಿದ್ದೇನೆ ಎಂದು ಪೂಜಾ ಹೇಳಿದ್ದಾರೆ.
Advertisement
https://www.instagram.com/p/B-TPlrBJ0DA/