ಸಿಡ್ನಿ: ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ(Australia) ಮಹಿಳೆಯರ ವಿರುದ್ಧ ಭಾರತ (Team India) ಡಕ್‌ವರ್ಥ್ ನಿಯಮದ ಅನ್ವಯ 21 ರನ್‌ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಆಸ್ಟ್ರೇಲಿಯಾ 133 ರನ್‌ಗಳಿಗೆ ಆಲೌಟ್ ಆಯ್ತು. ಭಾರತದ ಬ್ಯಾಟಿಂಗ್ ಮಾಡುವಾಗ ಮಳೆ ಸುರಿಯಲು ಆರಂಭವಾಯಿತು. ಪಂದ್ಯ ಸ್ಥಗಿತಗೊಂಡಾಗ ಭಾರತ 5.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತ್ತು. ಇದನ್ನೂ ಓದಿ: ಪಾಕ್‌ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ
22 ರನ್ ನೀಡಿ 4 ವಿಕೆಟ್ ಪಡೆದ ಅರುಂಧತಿ ರೆಡ್ಡಿ (Arundhati Reddy) ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಎರಡನೇ ಟಿ20 ಪಂದ್ಯ ಗುರುವಾರ ಕ್ಯಾನ್ಬೆರಾದಲ್ಲಿ ನಡೆಯಲಿದೆ.

