ಹಿಂದೂ ಮಹಾಸಾಗರದಲ್ಲಿ ಬಾಂಗ್ಲಾದೇಶದ (Bangladesh) ಮೊಂಗ್ಲಾ ಬಂದರಿನ (Mongla Port) ಟರ್ಮಿನಲ್ ನಿರ್ವಹಣೆಯ ಹಕ್ಕುನ್ನು (Terminal rights) ಪಡೆಯುವ ಮೂಲಕ ಭಾರತ ಚೀನಾದ ವಿರುದ್ಧ ಮತ್ತೊಂದು ವಿಜಯವನ್ನು ಸಾಧಿಸಿದೆ. ಈ ವಿಚಾರವಾಗಿ ಚೀನಾ (China) ಸಹ ಪೈಪೋಟಿ ನಡೆಸಿತ್ತು. ಆದರೆ ಅಂತಿಮವಾಗಿ ಬಾಂಗ್ಲಾದೇಶ ತನ್ನ ಬಂದರಿನ ನಿರ್ವಹಣೆಯ ಹೊಣೆಯನ್ನು ಭಾರತಕ್ಕೆ ನೀಡಿದೆ. ಇನ್ನೂ ಇಂಡಿಯನ್ ಪೋರ್ಟ್ ಗ್ಲೋಬಲ್ ಲಿಮಿಟೆಡ್ (IPGL) ಮೊಂಗ್ಲಾ ಬಂದರಿನ ನಿರ್ವಹಣೆ ಮಾಡಲಿದೆ ಎಂದು ವರದಿಯಾಗಿದೆ.
ಇರಾನ್‌ನ ಚಬಹಾರ್ ಮತ್ತು ಮ್ಯಾನ್ಮಾರ್‌ನ ಸಿಟ್ವೆ ನಂತರ, ಬಾಂಗ್ಲಾದೇಶದ ಮೊಂಗ್ಲಾ ಬಂದರಿನ ನಿರ್ವಹಣೆಯ ಹಕ್ಕುಗಳನ್ನು ಪಡೆದಿದ್ದು, ಇದು ಭಾರತದ ಮೂರನೇ ವಿದೇಶದ ಬಂದರಿನ ನಿರ್ವಹಣೆಯಾಗಲಿದೆ. ಹಕ್ಕುಗಳನ್ನು ಪಡೆಯುವ ವರದಿಗಳು ಹೊರಬಂದಿದ್ದರೂ, ಒಪ್ಪಂದದ ವಿವರಗಳು ಇನ್ನೂ ಹೊರಬಂದಿಲ್ಲ. ಒಪ್ಪಂದದ ಬಗ್ಗೆ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ.
Advertisement
Advertisement
ಮೊಂಗ್ಲಾ ಬಂದರು ನಿರ್ವಹಣೆಯಲ್ಲಿ IPGL ಪಾತ್ರ
Advertisement
ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (IPGL) ಭಾರತದ ಅಂತರಾಷ್ಟ್ರೀಯ ಬಂದರು ಕಾರ್ಯಾಚರಣೆಗಳಿಗೆ ಆದ್ಯತೆ ನೀಡುವ ಘಟಕವಾಗಿ ಹೊರಹೊಮ್ಮಿದೆ. ಇದು ಮೊಂಗ್ಲಾ ಬಂದರನ್ನು ನಿರ್ವಹಿಸಲು ಮುಂದಾಗಿದೆ. IPGL ಈಗಾಗಲೇ ಬಂದರಿನಲ್ಲಿ ಮೌಲ್ಯಮಾಪನಗಳನ್ನು ನಡೆಸಿದೆ. ಯೋಜನೆಯಿಂದ ಲಾಭದಾಯಕತೆ ಮತ್ತು ಎರಡೂ ದೇಶಗಳಿಗೆ ಸಂಭಾವ್ಯ ಪ್ರಯೋಜನಗಳ ಲೆಕ್ಕಾಚಾರವನ್ನು ಇದು ಮಾಡಲಿದೆ.
Advertisement
ಬಂದರು ಎಲ್ಲಿದೆ?
* ಬಾಂಗ್ಲಾದೇಶದ ಬಾಗರ್‌ಹಾಟ್ ಜಿಲ್ಲೆಯಲ್ಲಿದೆ. ಬಂಗಾಳ ಕೊಲ್ಲಿಯ ಕರಾವಳಿಯ ಉತ್ತರಕ್ಕೆ 62 ಕಿ.ಮೀ ದೂರದಲ್ಲಿ ಪರ್ಸು ಮತ್ತು ಮೊಂಗ್ಲಾ ನದಿಗಳ ಸಂಗಮ ಪ್ರದೇಶದಲ್ಲಿದೆ.
* ಸುಂದರಬನ್ಸ್ ಮ್ಯಾಂಗ್ರೂವ್ ಅರಣ್ಯದಿಂದ ಸುತ್ತುವರಿದಿದ್ದು, ಚಿತ್ತಗಾಂಗ್ ನಂತರ ಬಾಂಗ್ಲಾದೇಶದ ಎರಡನೇ ಅತಿ ದೊಡ್ಡ ಬಂದರಾಗಿದೆ.
ಭಾರತಕ್ಕೆ ಆಗುವ ಪ್ರಯೋಜನಗಳು
* ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರಾ ಮತ್ತು ಮೇಘಾಲಯಗಳಂತಹಾ ಆಯಕಟ್ಟಿನ ಪ್ರದೇಶಗಳಿಗೆ ಸುಗಮ ಪ್ರವೇಶವನ್ನು ಒದಗಿಸುತ್ತದೆ.
* ಈ ಪ್ರದೇಶಗಳಿಗೆ ಸಾಗಲು ಮತ್ತು ಸರಕುಗಳ ಸಾಗಾಣಿಕೆಗೆ ದೂರ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
* ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (IPGL) ಮೊಂಗ್ಲಾ ಬಂದರನ್ನು ನಿರ್ವಹಿಸಲು ಆಸಕ್ತಿಯನ್ನು ತೋರಿಸಿದ್ದು, ಇದು ಇರಾನ್‌ನ ಚಬಹಾರ್ ಮತ್ತು ಮ್ಯಾನ್ಮಾರ್‌ನ ಸಿಟ್ಟೆ ನಂತರ IPGL ನ ಮೂರನೇ ಅಂತರರಾಷ್ಟ್ರೀಯ ಬಂದರು ಕಾರ್ಯಾಚರಣೆಯಾಗಿದೆ.
* ವಿಸ್ತರಣಾ ಯೋಜನೆ: 2015ರಲ್ಲಿ, ಭಾರತ ಮತ್ತು ಬಾಂಗ್ಲಾದೇಶವು ಚಟ್ಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಬಳಕೆಯ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು.
* ಮೊಂಗ್ಲಾ ಬಂದರಿನಿಂದ ಭಾರತದ ಈಶಾನ್ಯ ರಾಜ್ಯಗಳಿಗೆ ಜಲಮಾರ್ಗಗಳು, ರಸ್ತೆಗಳು ಮತ್ತು ರೈಲುಮಾರ್ಗಗಳ ಮೂಲಕ ಸರಕುಗಳ ಸಾಗಣೆಯ ಮಹತ್ವದ ಅಂಶಗಳನ್ನು ಈ ಒಪ್ಪಂದವು ಒಳಗೊಂಡಿದೆ.
ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವುದು
ಮೊಂಗ್ಲಾ ಬಂದರಿನ ಕಾರ್ಯತಂತ್ರದ ಪ್ರಾಮುಖ್ಯತೆಯು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಇನ್ನೂ ಭಾರತದ ಈಶಾನ್ಯ ರಾಜ್ಯಗಳಿಗೆ ಸರಕು ಸಾಗಣೆಯನ್ನು ಇದು ಸುಲಭಗೊಳಿಸುತ್ತದೆ.
ಚೀನಾ ಮೇಲೆ ಪರಿಣಾಮ ಏನು?
ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಮೊಂಗ್ಲಾ ಬಂದರಿನ ನಿರ್ವಹಣೆಯನ್ನು ಪಡೆದುಕೊಂಡಿದೆ. ಈಗಾಗಲೇ ಪಾಕಿಸ್ತಾನದ ಗ್ವಾದರ್‌ನಿಂದ ಪೂರ್ವ ಆಫ್ರಿಕಾದ ಜಿಬೌಟಿಯವರೆಗಿನ ಬಂದರುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಚೀನಾ ಯಶಸ್ವಿಯಾಗಿದ್ದು, ಸಮೀಪದ ಬಾಂಗ್ಲಾ ಬಂದರನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಆದರೂ ಚೀನಾ ಬಂದರು ನಿರ್ವಹಣೆಯಲ್ಲಿ ಭಾರತಕ್ಕಿಂತಲೂ ಮುಂದಿದ್ದು, ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಸುಮಾರು 17 ಬಂದರುಗಳೊಂದಿಗೆ ಪ್ರಾಬಲ್ಯ ಹೊಂದಿದೆ. ಅದರಲ್ಲಿ 13 ಬಂದರುಗಳ ನಿರ್ಮಾಣದಲ್ಲಿ ನೇರವಾಗಿ ಚೀನಾ ತೊಡಗಿಸಿಕೊಂಡಿದೆ.
ಚೀನಾಕ್ಕೆ ಮೊಂಗ್ಲಾ ಬಂದರು ಕೈತಪ್ಪಲು ಕಾರಣವೇನು?
ಚೀನಾ ಕುತಂತ್ರದಿಂದ ಈಗಾಗಲೇ ಹಲವಾರು ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಯಾಕೆಂದರೆ ಚೀನಾ ಯಾವುದೇ ನಿರ್ವಹಣೆ ಹಾಗೂ ಸಾಲ ನೀಡಲು ವಿಪರೀತ ನೀತಿ ನಿಯಮಗಳನ್ನು ಹಾಕಿ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿರತ್ತದೆಯೋ ಅಲ್ಲಿನ ಆರ್ಥಿಕ ನೀತಿಗೆ ತೀವ್ರ ಹೊಡೆತ ಕೊಡುತ್ತದೆ. ಇದೇ ಕಾರಣಕ್ಕೆ ಎಚ್ಚೆತ್ತ ಬಾಂಗ್ಲಾ ಮೊಂಗ್ಲಾ ಬಂದರಿನ ನಿರ್ವಹಣೆಯನ್ನು ಭಾರತಕ್ಕೆ ವಹಿಸಿದೆ.
ಚೀನಾ ಯಾವ ದೇಶದಲ್ಲಿ ತನ್ನ ಕಾಮಗಾರಿ ಕೈಗೊಳ್ಳುತ್ತದೆಯೋ ಅದಕ್ಕಾಗಿ ಸಾಲ, ಕೆಲಸಗಾರರು ಹಾಗೂ ಅದಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ತಾನೇ ಒದಗಿಸುತ್ತದೆ. ಬಳಿಕ ಸಾಲ ತೀರುವ ತನಕ ಕಾಮಗಾರಿ ಕೈಗೊಂಡ ಬಂದರು ಹಾಗೂ ಸೇತುವೆಯನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡು ಟೋಲ್ ಮೂಲಕ ಹಣ ಪಡೆದುಕೊಳ್ಳುತ್ತದೆ. ಇದು ಆ ದೇಶದ ಆರ್ಥಿಕತೆಗೆ ಮಾರಕವಾಗಲಿದೆ.
ಭಾರತ-ಬಾಂಗ್ಲಾದೇಶದ ನಡುವಿನ ಬಾಂಧವ್ಯ ಹೇಗಿದೆ?
ಐತಿಹಾಸಿಕ ಸಂಬಂಧಗಳು:
ಬಾಂಗ್ಲಾದೇಶದೊಂದಿಗೆ ಭಾರತದ ಸಂಬಂಧದ ಅಡಿಪಾಯವನ್ನು 1971ರ ಬಾಂಗ್ಲಾದೇಶ ವಿಮೋಚನಾ ಕಾಲದಲ್ಲೇ ಹಾಕಲಾಯಿತು. ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಬಾಂಗ್ಲಾದೇಶದ ಹೋರಾಟದಲ್ಲಿ ಸಹಾಯ ಮಾಡಲು ಭಾರತವು ನಿರ್ಣಾಯಕ ಮಿಲಿಟರಿ ಬೆಂಬಲವನ್ನು ನೀಡಿತು.
ಇನ್ನೂ ಮಿಲಿಟರಿ ಆಡಳಿತ, ಭಾರತ-ವಿರೋಧಿ ಭಾವನೆಗಳಿಂದಾಗಿ ಸಂಬಂಧ ಕೆಲವು ಸಮಯ ಹದಗೆಟ್ಟಿತ್ತು. 1996 ರಲ್ಲಿ ಗಂಗಾ ನದಿ ನೀರಿನ ಹಂಚಿಕೆಯ ಒಪ್ಪಂದದೊಂದಿಗೆ ಆಡಳಿತದಲ್ಲಿ ಬದಲಾವಣೆಯೊಂದಿಗೆ ಸ್ಥಿರತೆ ಮರಳಿತು. ಭಾರತ ಮತ್ತು ಬಾಂಗ್ಲಾದೇಶವು 2015 ರಲ್ಲಿ ಭೂ ಗಡಿ ಒಪ್ಪಂದ (LBA) ಮತ್ತು ಪ್ರಾದೇಶಿಕ ನೀರಿನ ಮೇಲಿನ ಕಡಲ ವಿವಾದದಂತಹ ದೀರ್ಘಾವಧಿಯ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದೆ .
ಆರ್ಥಿಕ ಸಹಕಾರ: ಬಾಂಗ್ಲಾದೇಶ ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಭಾರತವು ಏಷ್ಯಾದಲ್ಲಿ ಬಾಂಗ್ಲಾದೇಶದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ. ಭಾರತವು ಏಷ್ಯಾದಲ್ಲಿ ಬಾಂಗ್ಲಾದೇಶದ ಅತಿದೊಡ್ಡ ರಫ್ತು ತಾಣವಾಗಿದೆ. 2022-23 ಹಣಕಾಸು ವರ್ಷದಲ್ಲಿ ಭಾರತ ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಿದೆ. 2010 ರಿಂದ ಭಾರತವು ಬಾಂಗ್ಲಾದೇಶಕ್ಕೆ 7 ಶತಕೋಟಿ ಡಾಲರ್ ಸಾಲವನ್ನು ನೀಡಿದೆ.
ಬಾಂಗ್ಲಾದೇಶವು ಭಾರತದಿಂದ ಸುಮಾರು 2,000 ಮೆಗಾವ್ಯಾಟ್ (MW) ವಿದ್ಯುತ್ ಆಮದು ಮಾಡಿಕೊಳ್ಳುತ್ತದೆ.