ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನ ಮೊದಲ ಪಂದ್ಯದಲ್ಲೇ ಬದ್ಧ ವೈರಿ ಪಾಕಿಸ್ತಾನದ ವಿರುದ್ಧದ ಭಾರತ 107 ರನ್ ಅಂತರದಿಂದ ಜಯಗಳಿಸಿದೆ.
ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಗ್ ಮಾಡಿದ ಮಾಡಿದ ಭಾರತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತ್ತು. 225 ರನ್‍ಗಳ ಬೃಹತ್ ಗುರಿಯನ್ನು ಪಡೆದ ಪಾಕಿಸ್ತಾನ ಕೇವಲ 137 ರನ್‍ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು.
Advertisement
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಶೆಫಾಲಿ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಸ್ಮೃತಿ ಮಂಧಾನ, ಸ್ನೇಹಾ ರಾಣಾ, ಪೂಜಾ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್
Advertisement
Advertisement
ಭಾರತದ ನೀಡಿದ 245 ರನ್‍ಗಳ ಬೆನ್ನೆತ್ತಿದ ಪಾಕ್‍ಗೆ ಸಿದ್ರ ಅಮಿನ್(30) ಉತ್ತಮ ಆರಂಭ ಒದಗಿಸಿದರು. ಆದರೆ ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ ಭಾರತದ ದಾಳಿಗೆ ಬೆಚ್ಚಿದ ಪಾಕ್ ತನ್ನೆಲ್ಲಾ ವಿಕೆಟ್‍ನ್ನು ಕಳೆದುಕೊಂಡು ಸೋಲನುಭವಿಸಿತು. ಇದನ್ನೂ ಓದಿ: ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ