ಢಾಕಾ: ಮಹಿಳಾ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಭಾರತದ ಮಹಿಳಾ ತಂಡ ವಿಜಯ ಪತಾಕೆ ಹಾರಿಸಿ 7ನೇ ಬಾರಿ ಪ್ರಶಸ್ತಿ ಜಯಿಸಿಕೊಂಡಿದೆ. ಈ ಜಯದಲ್ಲಿ ಜೊತೆಯಾಗಿ ಕಾಣಿಸಿಕೊಂಡ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಮತ್ತು ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಜೋಡಿ ಟೀಂ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ವಿರಾಟ್ ಕೊಹ್ಲಿಯನ್ನು (Virat Kohli) ನೆನಪಿಸಿದೆ.
Advertisement
ಈ ಹಿಂದೆ 2016ರಲ್ಲಿ ಭಾರತದ ಪುರುಷರ ತಂಡ ಏಷ್ಯಾಕಪ್ ಗೆದ್ದಾಗ ನಾಯಕರಾಗಿದ್ದ ಧೋನಿ ಮತ್ತು ಉಪನಾಯಕರಾಗಿದ್ದ ವಿರಾಟ್ ಕೊಹ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮಹಿಳಾ ವಿಶ್ವಕಪ್ ವಿಜೇತ ತಂಡದ ನಾಯಕಿ ಕೌರ್ ಮತ್ತು ಉಪನಾಯಕಿ ಮಂಧಾನ ಜೊತೆಯಾಗಿ ಇನ್ನಿಂಗ್ಸ್ ಆಡಿ ತಂಡವನ್ನು ಗೆಲ್ಲಿಸಿಕೊಟ್ಟ ಕ್ಷಣ ಮತ್ತೊಮ್ಮೆ ಧೋನಿ, ಕೊಹ್ಲಿ ಜೋಡಿಯಂತೆ ಕಂಡಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ
Advertisement
Advertisement
ಇನ್ನೊಂದೆಡೆ ಕೌರ್ ಮತ್ತು ಮಂಧಾನ ಜೋಡಿಯನ್ನು ಕೊಹ್ಲಿ, ಧೋನಿ ಜೊತೆ ಹೋಲಿಕೆ ಮಾಡಲು ಕಾರಣವೊಂದಿದೆ. ನಾಯಕರಾಗಿದ್ದ ಧೋನಿ ಜೆರ್ಸಿ ನಂಬರ್ (Jersey no 7) ಆಗ ಉಪನಾಯಕರಾಗಿದ್ದ ಕೊಹ್ಲಿ ಜೆರ್ಸಿ ನಂಬರ್ 18. ಇತ್ತ ಮಹಿಳಾ ತಂಡದ ನಾಯಕಿ ಕೌರ್ ಜೆರ್ಸಿ ನಂಬರ್ 7, ಉಪನಾಯಕಿ ಮಂಧಾನ ಜೆರ್ಸಿ ನಂಬರ್ 18 ಈ ನಂಬರ್ ಲೆಕ್ಕವನ್ನು ಕೂಡ ಅಭಿಮಾನಿಗಳು ಫೋಟೋ ಮೂಲಕ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: #ArrestKohli: ಫ್ಯಾನ್ಸ್‌ವಾರ್‌ನಲ್ಲಿ ನಡೆದೇ ಹೋಯ್ತು ಕೊಲೆ – ಕಿಂಗ್ ಕೊಹ್ಲಿ ಬಂಧನಕ್ಕೆ ಆಗ್ರಹ
Advertisement
https://twitter.com/71stTon/status/1581221566901522432
ಫೈನಲ್ ಪಂದ್ಯದಲ್ಲಿ ಶ್ರೀಲಂಕಾ (SriLanka) ನೀಡಿದ 66 ರನ್‍ಗಳ ಅಲ್ಪ ಮೊತ್ತದ ಗುರಿಪಡೆದ ಭಾರತ ಈ ಮೊತ್ತವನ್ನು 8.3 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಚಚ್ಚಿ ಗೆದ್ದು ಬೀಗಿದೆ. ಈ ಮೂಲಕ 7ನೇ ಬಾರಿ ಭಾರತ ಪ್ರಶಸ್ತಿ ಗೆದ್ದು ಸಂಭ್ರಮಿಸಿದರೆ, ಶ್ರೀಲಂಕಾ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡಿತು.