ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ (Population) ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ (China) ಮೊದಲ ಹಾಗೂ ಭಾರತ (India) ಎರಡನೇ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಾರಿ ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆ (UN) ಬಿಡುಗಡೆ ಮಾಡಿದ ʼವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟ್ʼ ವರದಿಯಲ್ಲಿ ಅಚ್ಚರಿದಾಯಕ ಅಂಶವೊಂದು ಹೊರಬಿದ್ದಿದೆ. ಮುಂದಿನ ವರ್ಷಕ್ಕೆ ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಲಿದೆ ಎಂದು ಹೇಳಿದೆ. ಚೀನಾ ಮತ್ತು ಭಾರತ ದೇಶಗಳ ಜನಸಂಖ್ಯೆಯಲ್ಲಿ ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವೇನು? ಮುಂದೆ ಅದರ ಪರಿಣಾಮಗಳೇನು ಎಂಬುದನ್ನು ನಾವಿಲ್ಲಿ ತಿಳಿಯಬಹುದು.
2022 ರಲ್ಲಿ ಚೀನಾ ಮೊದಲ ಬಾರಿಗೆ ತನ್ನ ಜನಸಂಖ್ಯೆಯಲ್ಲಿ ಸಂಪೂರ್ಣ ಕುಸಿತವನ್ನು ದಾಖಲಿಸಿದೆ. 2023 ರಲ್ಲಿ 1,428.63 ಮಿಲಿಯನ್ ತಲುಪುವ ಭಾರತದ ಜನಸಂಖ್ಯೆಯು ಚೀನಾದ 1,425.67 ಮಿಲಿಯನ್ ಜನಸಂಖ್ಯೆಯನ್ನು ಮೀರಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಂಭಾವ್ಯ ಆರ್ಥಿಕ ಪರಿಣಾಮಗಳು ದೊಡ್ಡದಾಗಿದೆ. ಇದರ ಮಧ್ಯೆ, ಇಂತಹ ಬದಲಾವಣೆಗೆ ಪ್ರಮುಖ ಕಾರಣಗಳೇನು? ಇದನ್ನೂ ಓದಿ: ಆರ್ಥಿಕವಾಗಿ ಕಂಗೆಟ್ಟಿರುವ ವಿಶ್ವಕ್ಕೆ ಜಿ20 ಶೃಂಗಸಭೆಯಲ್ಲಿ ಸಿಗುತ್ತಾ ಬೂಸ್ಟರ್ ಡೋಸ್?
Advertisement
Advertisement
ಮರಣ ಮತ್ತು ಫಲವಂತಿಕೆ
ಹೆಚ್ಚಿದ ಶಿಕ್ಷಣ ಮಟ್ಟ, ಸಾರ್ವಜನಿಕ ಆರೋಗ್ಯ ಮತ್ತು ಲಸಿಕಾ ಕಾರ್ಯಕ್ರಮ, ಆಹಾರ ಮತ್ತು ವೈದ್ಯಕೀಯ ಆರೈಕೆ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಮರಣ ಪ್ರಮಾಣವು ಕಡಿಮೆಯಾಗುತ್ತದೆ. ಮರಣ ಪ್ರಮಾಣ (CDR)ವು 1,000 ಜನಸಂಖ್ಯೆಗೆ 1950ರ ಸಂದರ್ಭದಲ್ಲಿ ಪ್ರತಿ ವರ್ಷ ಚೀನಾದಲ್ಲಿ 23.2 ಮತ್ತು ಭಾರತದಲ್ಲಿ 22.2 ಇತ್ತು. ಇದು 1974 ರಲ್ಲಿ ಚೀನಾದಲ್ಲಿ 9.5 ಮತ್ತು 1994 ರಲ್ಲಿ ಭಾರತದಲ್ಲಿ 9.8 ಪ್ರರಣ ಪ್ರಮಾಣ ದಾಖಲಿಸಿ ಒಂದಂಕಿಗೆ ಇಳಿಯಿತು. 2020 ರಲ್ಲಿ ಎರಡೂ ದೇಶಗಳಲ್ಲಿ 7.3 (ಚೀನಾ) ಮತ್ತು 7.4 (ಭಾರತ) ಮರಣ ಪ್ರಮಾಣ ದಾಖಲಿಸಿತ್ತು. ಜೀವಿತಾವಧಿಯು 1950 ಮತ್ತು 2020 ರ ನಡುವೆ ಚೀನಾದಲ್ಲಿ 43.7 ರಿಂದ 78.1 ವರ್ಷಕ್ಕೆ ಏರಿತು. ಭಾರತದಲ್ಲಿ 41.7 ರಿಂದ 70.1 ವರ್ಷಕ್ಕೆ ಏರಿದೆ.
Advertisement
ಮರಣದ ಕಡಿತವು ಸಾಮಾನ್ಯವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಕಾರಣವಾಗುತ್ತದೆ. ಫಲವಂತಿಕೆ ಕುಸಿತ ಮತ್ತೊಂದೆಡೆ ಜನಸಂಖ್ಯೆಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಅಂತಿಮವಾಗಿ ಸಂಪೂರ್ಣ ಕುಸಿತಕ್ಕೆ ಕಾರಣವಾಗುತ್ತದೆ. ಒಟ್ಟು ಫಲವಂತಿಕೆ ದರ (TFR) ಸರಾಸರಿ – ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೆರುವ ಶಿಶುಗಳ ಸಂಖ್ಯೆಯು 1950 ರಲ್ಲಿ ಚೀನಾದಲ್ಲಿ 5.8 ಮತ್ತು ಭಾರತದಲ್ಲಿ 5.7 ಆಗಿತ್ತು. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ
Advertisement
ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಫಲವಂತಿಕೆ ಪ್ರಮಾಣ ತೀವ್ರವಾಗಿ ಕುಸಿದಿದೆ. 1992-93 ಮತ್ತು 2019-21 ರ ನಡುವೆ ಫಲವಂತಿಕೆ ಪ್ರಮಾಣ ಸರಾಸರಿ 3.4 ರಿಂದ 2 ಕ್ಕೆ ಇಳಿದಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಗಮನಾರ್ಹ. ಶೈಕ್ಷಣಿಕ ಪ್ರಗತಿ, ಕೃಷಿ ಯಾಂತ್ರೀಕರಣ ಮೊದಲಾದ ಕಾರಣಗಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಫಲವಂತಿಕೆ ಕಡಿಮೆಯಾಗಿದೆ. 1992-93 ರಲ್ಲಿ ಸರಾಸರಿ ಗ್ರಾಮೀಣ ಭಾರತೀಯ ಮಹಿಳೆಯು ನಗರಕ್ಕೆ ಹೋಲಿಸಿದರೆ (3.7 ವರ್ಸಸ್ 2.7) ಒಂದು ಹೆಚ್ಚುವರಿ ಮಗುವನ್ನು ಪಡೆದಿದ್ದಾರೆ. 2019-21 ರ ಹೊತ್ತಿಗೆ ಈ ಅಂತರವು ಅರ್ಧದಷ್ಟು ಕಡಿಮೆಯಾಗಿದೆ (2.1 ವರ್ಸಸ್ 1.6).
2023ರಲ್ಲಿ ಭಾರತಕ್ಕೆ ಮೊದಲ ಸ್ಥಾನ
ಭಾರತದ ಜನಸಂಖ್ಯೆಯು ಈಗ 141 ಕೋಟಿಯನ್ನು ದಾಟಿ ಮುಂದಕ್ಕೆ ಸಾಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಭಾರತದ ಜನಸಂಖ್ಯೆಯ ಪ್ರಮಾಣವು ಶೇ 17.7ರಷ್ಟಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಎರಡನೇ ದೇಶ ಭಾರತ. ಆದರೆ, 2023ರ ಹೊತ್ತಿಗೆ ಈಗ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವನ್ನು ಹಿಂದಿಕ್ಕಿ ಭಾರತವು ಮೊದಲ ಸ್ಥಾನ ಪಡೆದುಕೊಳ್ಳಲಿದೆ.
ಚೀನಾ ಬಿಕ್ಕಟ್ಟನ್ನು ಎದುರಿಸುತ್ತಿದೆ
ಚೀನಾದ 2020 ರ ಜನಗಣತಿಯ ಪ್ರಕಾರ ಫಲವಂತಿಕೆಯು 2000ರಲ್ಲಿ 1.2 ಇದ್ದದ್ದು, 2010ರಲ್ಲಿ 1.3 ಕ್ಕೆ ಹೆಚ್ಚಾಗಿದೆ. 2016 ರಿಂದ 1980 ರಲ್ಲಿ ಚೀನಾ ಪರಿಚಯಿಸಿದ್ದ ಒಂದು ಮಗುವಿನ ನೀತಿಯನ್ನು ನಂತರ ಅಧಿಕೃತವಾಗಿ ಕೊನೆಗೊಳಿಸಿತು. ಅದೇನೆ ಇದ್ದರೂ ವಿಶ್ವಸಂಸ್ಥೆಯು ವಿಶ್ವದ ಒಟ್ಟು ಜನಸಂಖ್ಯೆಯು 2050 ರಲ್ಲಿ 1.31 ಶತಕೋಟಿ ಆಗಲಿದೆ ಎಂದು ಅಂದಾಜಿಸಿದೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್ ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ
ಆದಾಗ್ಯೂ, ಚೀನಾಕ್ಕೆ ನಿಜವಾದ ಬಿಕ್ಕಟ್ಟು ಎದುರಾಗಿರುವುದು ವಯಸ್ಕರ ಜನಸಂಖ್ಯೆ ಕುಸಿತದಿಂದ. 20-59 ನಡುವಿನ ವಯಸ್ಸಿನವರ ಜನಸಂಖ್ಯೆಯ ಪ್ರಮಾಣವು 1987 ರಲ್ಲಿ 50% ಇದ್ದದ್ದು, 2011 ರಲ್ಲಿ 61.5% ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ಚೀನಾದಲ್ಲಿ ಆರ್ಥಿಕತೆಯು ಪ್ರಗತಿ ಕಂಡಿತ್ತು. ಚೀನಾವು ಯುವ ಕಾರ್ಮಿಕ ಬಲದಿಂದ ಬರುವ “ಜನಸಂಖ್ಯಾ ಲಾಭಾಂಶ” ವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತದೆ. ಕೆಲಸ ಮಾಡಲು ಮತ್ತು ಗಳಿಸಲು ಸಾಧ್ಯವಾಗುವ ದೊಡ್ಡ ಜನಸಂಖ್ಯೆಯಿದ್ದರೆ, ಆರ್ಥಿಕ ಬೆಳವಣಿಗೆ ಸಕಾರಾತ್ಮಕವಾಗಿರುತ್ತದ. ತುಂಬಾ ವಯಸ್ಸಾದವರು ಅಥವಾ ತುಂಬಾ ಚಿಕ್ಕವರಾದರೆ ಆರ್ಥಿಕತೆ ಕುಂಠಿತವಾಗಿ ಸಾಗುತ್ತದೆ.
ಚೀನಾದ ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು 2045 ರ ವೇಳೆಗೆ 50% ಕ್ಕಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ. 2014 ರಲ್ಲಿ 839 ಮಿಲಿಯನ್‌ನಿಂದ 2050 ರ ವೇಳೆಗೆ 604 ಮಿಲಿಯನ್‌ಗೆ ಇಳಿಕೆಯಾಗಲಿದೆ. ಚೀನಾದಲ್ಲಿ ಕಾರ್ಮಿಕ ಬಲವು ಕ್ಷೀಣಿಸುತ್ತಿದ್ದು, ವಯಸ್ಸಾದವರ ಸಂಖ್ಯೆ ಏರುತ್ತಿದೆ.
ಭಾರತಕ್ಕಿದೆ ಒಂದು ಅವಕಾಶ
ಮೇಲೆ ಗಮನಿಸಿದಂತೆ ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡಂತೆ ಭಾರತವು ಫಲವಂತಿಕೆ ಪ್ರಮಾಣದಲ್ಲಿ ಕುಸಿತವನ್ನು ಕಂಡಿದೆ. ಭಾರತದ ಜನಸಂಖ್ಯೆಯು 1.7 ಶತಕೋಟಿಯನ್ನು ಮುಟ್ಟಿದ ನಂತರ ಮತ್ತೆ ಕುಸಿತ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ. ಒಟ್ಟಾರೆ ಜನಸಂಖ್ಯೆಯಲ್ಲಿ ಅದರ ಪಾಲು 2007 ರಲ್ಲಿ 50% ಇತ್ತು. ಇದು 2030 ರ ಮಧ್ಯದಲ್ಲಿ 57% ಕ್ಕೆ ತಲುಪುತ್ತದೆ. 20-59 ವರ್ಷ ವಯಸ್ಸಿನ ಜನಸಂಖ್ಯೆಯು 2020 ರಲ್ಲಿ 760 ಮಿಲಿಯನ್‌ನಿಂದ 2045 ರಲ್ಲಿ ಸುಮಾರು 920 ಮಿಲಿಯನ್‌ಗೆ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ, 1980 ರ ದಶಕದ ಅಂತ್ಯದಿಂದ 2015 ರವರೆಗೆ ಚೀನಾ ಮಾಡಿದಂತೆ, ಭಾರತವು ತನ್ನ “ಜನಸಂಖ್ಯಾ ಲಾಭಾಂಶ” ವನ್ನು ಪಡೆದುಕೊಳ್ಳಲು 2040 ರ ದಶಕದವರೆಗೆ ಉತ್ತಮ ಅವಕಾಶವನ್ನು ಹೊಂದಿದೆ. ಇದನ್ನೂ ಓದಿ: ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿದವರು ಸ್ವಾತಂತ್ರ್ಯ ಹೋರಾಟಗಾರರೆಂದ ಏಕನಾಥ್ ಶಿಂಧೆ ವಿರುದ್ಧ ಕನ್ನಡಿಗರ ಆಕ್ರೋಶ
ಲಾಭ ಪಡೆಯದಿದ್ರೆ ತಲೆನೋವು ಗ್ಯಾರಂಟಿ
1993-94ರಲ್ಲಿ ದೇಶದ ಕೃಷಿ ಕಾರ್ಮಿಕರ ಸಂಖ್ಯೆ 65% ರಷ್ಟಿತ್ತು. ಆ ಪಾಲು 2011-12 ರ ವೇಳೆಗೆ 49% ಕ್ಕೆ ಗಮನಾರ್ಹವಾಗಿ ಕುಸಿಯಿತು. ಮುಂದೆ ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಆಗಲಿದೆ. ಇಂತಹ ಸನ್ನಿವೇಶದಲ್ಲಿ ಸಮರ್ಪಕ ಉದ್ಯೋಗ ಸೃಷ್ಟಿ ಆಗದಿದ್ದರೆ, ಜನಸಂಖ್ಯೆಯು ತಲೆನೋವಾಗಿ ಪರಿಣಮಿಸಲಿದೆ. ಕೃಷಿ ಕ್ಷೇತ್ರದ ಹೊರಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬೆಳವಣಿಗೆಗಳಿಗೆ ಉತ್ತೇಜನ ನೀಡುವುದು ಭಾರತದ ನೀತಿ ನಿರೂಪಕರ ಮುಂದಿರುವ ಸವಾಲು. ಇವು ಕೇವಲ ನಿರ್ಮಾಣ ಮತ್ತು ಕಡಿಮೆ ಪಾವತಿಯ ಅನೌಪಚಾರಿಕ ಸೇವೆಗಳಲ್ಲಿರಬಾರದು. ಫಾರ್ಮ್‌ಗಳಿಂದ ಹೆಚ್ಚುವರಿ ಕಾರ್ಮಿಕರು ಉತ್ಪಾದನೆ, ಮೌಲ್ಯವರ್ಧನೆ ಮತ್ತು ಸರಾಸರಿ ಆದಾಯ ಹೆಚ್ಚಿರುವ ವಲಯಗಳಲ್ಲಿ ಉತ್ಪಾದನೆ ಮತ್ತು ಆಧುನಿಕ ಸೇವೆಗಳಲ್ಲಿ ಉದ್ಯೋಗ ಸೃಷ್ಟಿಸಬೇಕು. ದುಡಿಯುವ ವರ್ಗಕ್ಕೆ ಉದ್ಯೋಗಾವಕಾಶ ಸೃಷ್ಟಿಸಿ ಸಮರ್ಪಕವಾಗಿ ಬಳಸಿಕೊಂಡರೆ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇಲ್ಲವೆಂದರೆ ಜನಸಂಖ್ಯೆ ತಲೆನೋವಾಗಿ ಪರಿಣಮಿಸುತ್ತದೆ.