ನವದೆಹಲಿ: 6ಜಿಯನ್ನು ಬೇರೆಯವರು ಅಭಿವೃದ್ಧಿ ಪಡಿಸುವ ಮೊದಲು ಭಾರತ (India) ಅಭಿವೃದ್ಧಿ ಪಡಿಸಿ ಬಿಡುಗಡೆಗೊಳಿಸಲು ಆಶಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3ಜಿ ಮತ್ತು 4ಜಿ ಸೇವೆ ಪ್ರಾರಂಭಿಸುವಾಗ ಇತರ ರಾಷ್ಟ್ರಗಳಿಗಿಂತ ಭಾರತ ಹಿಂದೆ ಇತ್ತು. ಆದರೆ ಈಗ ನಾವು ಪ್ರಪಂಚದ ಇತರ ಭಾಗಗಳನ್ನು ಅನುಸರಿಸುತ್ತಿದ್ದ ದಿನಗಳು ಬದಲಾಗುತ್ತಿವೆ. ನಾವು 6G ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಗತ್ತನ್ನು ಮುನ್ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ
Advertisement
Advertisement
ಮುಂದಿನ ಮೂರು ವರ್ಷಗಳಲ್ಲಿ ದೇಶವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಇಡೀ ಜಗತ್ತು ವ್ಯಾಪಾರ ಮಾಡಲು ಮತ್ತು ಭಾರತದೊಂದಿಗೆ ಆರ್ಥಿಕ (Economy) ಸಂಬಂಧಗಳನ್ನು ವಿಸ್ತರಿಸಲು ಬಯಸುತ್ತದೆ. ಅವರು ತಮ್ಮ ಆರ್ಥಿಕತೆಯನ್ನು ಬಲಪಡಿಸಲು ಭಾರತೀಯ ಕೌಶಲ್ಯಗಳನ್ನು ನೋಡುತ್ತಿದ್ದಾರೆ ಎಂದು ಗೋಯಲ್ ಹೇಳಿದರು.
Advertisement
ಐಎಂಎಫ್ (IMF) ಮತ್ತು ವಿಶ್ವ ಬ್ಯಾಂಕ್ (World Bank) ಪ್ರಕಾರ ಹಣಕಾಸು ವರ್ಷ 25ರಲ್ಲಿ ಭಾರತೀಯ ಆರ್ಥಿಕತೆಯು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುವ ಸಾಧ್ಯತೆಯಿದೆ. ದೇಶವು 7 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ.
Advertisement