ನನ್ನ 3ನೇ ಅವಧಿಯಲ್ಲಿ ಭಾರತ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಭರವಸೆ

Public TV
2 Min Read
Narendra Modi 5

ನವದೆಹಲಿ: ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ಭಾರತ (India) ವಿಶ್ವದ ಆರ್ಥಿಕತೆಯಲ್ಲಿ (Economy) ವಿಶ್ವದ ಮೊದಲ ಮೂರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ತಲುಪುವಂತೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆ ನೀಡಿದ್ದಾರೆ.

ಬುಧವಾರ ದೆಹಲಿಯ (Delhi) ಪರಿಷ್ಕೃತ ಪ್ರಗತಿ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ಎತ್ತರಕ್ಕೆ ಏರಿದರೆ ನೀವು ಆಕಾಶವನ್ನು ತಲುಪುತ್ತೀರಿ. ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಭಾರತದಲ್ಲಿ ಮೂಲಸೌಕರ್ಯಗಳು ಬದಲಾಗುತ್ತಿವೆ. ವಿಶ್ವದ ಅತಿ ಎತ್ತರದ ರೈಲು ಸೇತುವೆ, ಅತಿ ಉದ್ದದ ಸುರಂಗ, ಅತ್ಯಂತ ದೊಡ್ಡ ಸ್ಟೇಡಿಯಮ್, ಅತಿ ಉದ್ದದ ಮೋಟಾರು ರಸ್ತೆ ಹಾಗೂ ಅತಿ ಎತ್ತರದ ಪ್ರತಿಮೆ ಭಾರತದಲ್ಲಿದೆ. ಅದರೊಂದಿಗೆ ಆರ್ಥಿಕವಾಗಿ ಬಹಳ ವೇಗವಾಗಿ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಇವತ್ತೇಕೆ ತೀರ್ಮಾನ ಆಗಲಿಲ್ಲ?

ನಮ್ಮ ಮೊದಲ ಅವಧಿಯಲ್ಲಿ ಆರ್ಥಿಕತೆಯ ವಿಷಯದಲ್ಲಿ ಭಾರತವು 10ನೇ ಸ್ಥಾನದಲ್ಲಿತ್ತು. ಎರಡನೇ ಅವಧಿಯಲ್ಲಿ ಇದು ವಿಶ್ವದ ಐದನೇ ಆರ್ಥಿಕತೆಯ ದೇಶವಾಗಿದೆ. ಟ್ರ್ಯಾಕ್‌  ರೆಕಾರ್ಡ್ ಆಧಾರದ ಮೇಲೆ ದೇಶವೇ ನಂಬುವಂತೆ ನನ್ನ ಮೂರನೇ ಅವಧಿಯಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಮೂರು ಅಗ್ರಸ್ಥಾನಗಳಲ್ಲಿ ಒಂದಾಗಿರುತ್ತದೆ. ಇದು ಮೋದಿ ನಿಮಗೆ ನೀಡುತ್ತಿರುವ ಭರವಸೆ ಎಂದು ಹೇಳಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?

ಸ್ವಾತಂತ್ರ್ಯದ ಬಳಿಕ ಆರು ದಶಕಗಳ ಸಂಚಿತ ಬೆಳವಣಿಗೆಯನ್ನು ಕಳೆದ 10 ವರ್ಷದೊಂದಿಗೆ ಹೋಲಿಸಿದಾಗ, ಭಾರತ್ ಮಂಟಪ ಎಂದು ಮರುನಾಮಕರಣಗೊಂಡಿರುವ ಅಂತರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರ ಕೂಡಾ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಿಚ್‌ನ ತಾಣವಾಗಿದೆ ಎಂದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಕಳೆದ 60 ವರ್ಷಗಳಲ್ಲಿ ಸರ್ಕಾರ ಕೇವಲ 20,000 ಕಿಲೋ ಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಿದೆ. ಆದರೆ ಕಳೆದ 9 ವರ್ಷಗಳಲ್ಲಿ ಭಾರತ ಸರ್ಕಾರವು ಒಟ್ಟು 40,000 ಕಿಲೋ ಮೀಟರ್ ರೈಲು ಮಾರ್ಗವನ್ನು ವಿದ್ಯುದ್ದೀಕರಿಸಿದ್ದು, ಪ್ರತಿ ತಿಂಗಳು 6 ಕಿಲೋ ಮೀಟರ್ ಮೆಟ್ರೊ ಮಾರ್ಗವನ್ನು ಪೂರ್ಣಗೊಳಿಸುತ್ತಿದ್ದೇವೆ. ಅಲ್ಲದೇ ಸುಮಾರು 4 ಲಕ್ಷ ಹಳ್ಳಿಗಳಿಗೆ ರಸ್ತೆಗಳನ್ನು ನಿರ್ಮಿಸುತ್ತಿದ್ದು, ವಿಮಾನ ನಿಲ್ದಾಣದ ಸಂಖ್ಯೆ 150ಕ್ಕೆ ತಲುಪಿದೆ ಎಂದರು. ಇದನ್ನೂ ಓದಿ: ನಿಮಗೆ ಬೇಕಾದಂತೆ ಕರೆಯಿರಿ ಮಿಸ್ಟರ್‌ ಮೋದಿ – ಪ್ರಧಾನಿಗೆ ರಾಹುಲ್‌ ಗಾಂಧಿ ತಿರುಗೇಟು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article