ಪ್ರಧಾನಿ ಮೋದಿ ಹೇಳಿದ 5 ಸಂಕಲ್ಪ ಪಾಲಿಸಿದರೆ ಭಾರತ ಸೂಪರ್‌ ಪವರ್‌ ಆಗಲಿದೆ: ಯೋಗಿ ಆದಿತ್ಯನಾಥ್‌

Public TV
1 Min Read
yogi adityanath

ಲಕ್ನೋ: 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೇಶದ ಜನರು 5 ಸಂಕಲ್ಪಗಳನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಿದರೆ, ಭಾರತ ಸೂಪರ್‌ ಪವರ್‌ ಆಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು, ಗುಲಾಮಗಿರಿ ಸಂಕೇತವನ್ನು ಅಳಿಸಿ ಹಾಕುವುದು, ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಪಡುವುದು, ಏಕತೆ ಮತ್ತು ಸಮಗ್ರತೆ, 2047 ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ಐದು ಪ್ರತಿಜ್ಞೆಗಳನ್ನು ಮಾಡುವಂತೆ ಜನರಿಗೆ ಕರೆ ನೀಡಿದ್ದರು. ಇದನ್ನೂ ಓದಿ: ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್‌

NARENDRA MODI 2 1

ಬಲ್ಲಿಯಾ ಬಲಿದಾನ ದಿವಸ ನಿಮಿತ್ತ ಬಲ್ಲಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್. ಪ್ರಧಾನಿ ಮೋದಿ ಅವರು ಆಗಸ್ಟ್ 15 ರಂದು ಐದು ಸಂಕಲ್ಪಗಳನ್ನು ಮಾಡುವಂತೆ ಜನತೆಗೆ ಕರೆ ನೀಡಿದ್ದಾರೆ. ಪ್ರತಿಯೊಬ್ಬರು ಐದು ಸಂಕಲ್ಪಗಳನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯದ ಹಾದಿಯಲ್ಲಿ ಸಾಗಿದರೆ, ಭಾರತ ಖಂಡಿತವಾಗಿಯೂ ಸೂಪರ್ ಪವರ್ ಆಗುತ್ತದೆ. ಮುಂದಿನ ದಿನಗಳಲ್ಲಿ ಭಾರತ ಜಗತ್ತನ್ನು ಮುನ್ನಡೆಸಲಿದೆ ಎಂದು ತಿಳಿಸಿದ್ದಾರೆ.

ಮಂಗಲ್ ಪಾಂಡೆ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದರು. ಈ ಹೋರಾಟ ಮುಂದುವರಿಯಿತು. ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಘೋಷಣೆಯನ್ನು ನೀಡಿದಾಗ, ಚಿಟ್ಟು ಪಾಂಡೆ ಅವರು ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರು ಎಂದು ಯೋಗಿ ಸ್ಮರಿಸಿದ್ದಾರೆ. ಇದನ್ನೂ ಓದಿ: Liquor Policy Scam – ಸಿಸೋಡಿಯಾ ಮೇಲೆ ಸಿಬಿಐ ದಾಳಿ ಮಾಡಿದ್ದು ಯಾಕೆ?

ಸಮಾರಂಭ ಕುರಿತು ಮಾತನಾಡಿ, ಬಲ್ಲಿಯಾ ಶಿಸ್ತಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿಗೆ ಬೇಕಾದ ಶಿಸ್ತನ್ನು ಬಲ್ಲಿಯಾ ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *