ಭಾರತವು 2047ರ ವೇಳೆಗೆ 40 ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶವಾಗುತ್ತೆ – ಮುಕೇಶ್‌ ಅಂಬಾನಿ

Public TV
1 Min Read
Mukesh Ambani

ಗಾಂಧೀನಗರ: ಭಾರತವು (India) 2047ರ ವೇಳೆಗೆ 40 ಟ್ರಿಲಿಯನ್ ಡಾಲರ್ ಆರ್ಥಿಕತೆ ದೇಶವಾಗಲಿದೆ. ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಹೇಳಿದ್ದಾರೆ.

ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ, ಭಾರತವು ಶತಮಾನೋತ್ಸವವನ್ನು ಆಚರಿಸುವ 25 ವರ್ಷಗಳ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳಲ್ಲಿ ಅಭೂತಪೂರ್ವ ಸಾಧನೆಗೆ ಸಜ್ಜಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಆಕಸ್ಮಿಕ, ಇದರಲ್ಲಿ ಹೊಸದೇನಿಲ್ಲ- ಅಶೋಕ್ ಗೆಹ್ಲೋಟ್ ವಿವಾದಿತ ಹೇಳಿಕೆಗೆ ಬಿಜೆಪಿ ಕಿಡಿ

indian flag economy e1658827415328

ಭಾರತವು ನವೀಕರಿಸಬಹುದಾದ ಇಂಧನ ಶಕ್ತಿ ಕೇಂದ್ರವಾಗಬೇಕಾದರೆ, ರಾಷ್ಟ್ರೀಯ ಒಕ್ಕೂಟದ ನೀತಿಯೊಂದಿಗೆ ಕೆಲಸ ಮಾಡುವ ಅನೇಕ ಪ್ರಮುಖ ವ್ಯಾಪಾರ ಗುಂಪುಗಳ ಸಂಯೋಜಿತ ಇಚ್ಛೆ ಮತ್ತು ಉಪಕ್ರಮಗಳ ಮೂಲಕ ಅದು ಸಾಧ್ಯ ಎಂದಿದ್ದಾರೆ.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೊಡ್ಡದಾಗಿ ಯೋಚಿಸಿ. ಧೈರ್ಯಶಾಲಿ ಕನಸುಗಾರರಾಗಿರಿ. ಈ ಜಗತ್ತಿನಲ್ಲಿ ಇದುವರೆಗೆ ಆಗಿರುವ ಸಾಧನೆಗಳು ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಲಾಗಿತ್ತು. ಕನಸು ಕಾಣಬೇಕು. ಅದನ್ನು ದೃಢವಿಶ್ವಾಸದಿಂದ ಪೋಷಿಸಬೇಕು. ದಿಟ್ಟ ಮತ್ತು ಶಿಸ್ತಿನ ಕಾರ್ಯದೊಂದಿಗೆ ಅದನ್ನು ನನಸಾಗಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಗೂಗಲ್‌ನ 10 ಸಾವಿರ ಉದ್ಯೋಗಿಗಳು ಮನೆಗೆ

ಡಿಜಿಟಲ್ ಥಿಂಕ್. ಕೃತಕ ಬುದ್ದಿಮತ್ತೆ, ರೊಬೊಟಿಕ್ಸ್ ಮತ್ತು IoT ಯಂತಹ ತಂತ್ರಜ್ಞಾನಗಳು ಬದಲಾವಣೆಗೆ ಪೂರಕ ಸಾಧನವಾಗಿವೆ. ನಿಮ್ಮ ಅನುಕೂಲಕ್ಕಾಗಿ ಅವುಗಳನ್ನು ಬಳಸಿ. ಭಾರತವನ್ನು ಜಾಗತಿಕ ಶುದ್ಧ ಇಂಧನ ನಾಯಕ ದೇಶವನ್ನಾಗಿಸುವ ನಿಮ್ಮ ಧ್ಯೇಯದಲ್ಲಿ ಈ ಅಸ್ತ್ರಗಳನ್ನು ಬಳಸಿ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *