ನವದೆಹಲಿ: ಬಿಜೆಪಿ (BJP) ನೇತೃತ್ವದ ಎನ್‌ಡಿಎ ಸರ್ಕಾರದ 3ನೇ ಅವಧಿಯಲ್ಲಿ ದೇಶವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 2014-15ರ ಮಧ್ಯಂತರ ಬಜೆಟ್ ಮಂಡಿಸಿದ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಳೆಯ ಪಕ್ಷ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರು 11ನೇ ಸ್ಥಾನಕ್ಕೆ ಹೆಮ್ಮ ಪಡುತ್ತಿದ್ದಾರೆ. ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ನೀವು ಹನ್ನೊಂದು ಸ್ಥಾನಕ್ಕೆ ಬಂದಾಗ ಖುಷಿಪಡುತ್ತಿದ್ರಿ. ಈಗ ಐದನೇ ಸ್ಥಾನಕ್ಕೆ ಬಂದಾಗಲೂ ಖುಷಿಪಡಬೇಕು ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಮೋದಿ ಭರವಸೆ
Advertisement
Advertisement
ಇಂದು ಭಾರತವು 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ ಅವರು (ಕಾಂಗ್ರೆಸ್) ಮೌನವಾಗಿದ್ದಾರೆ. 30 ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂಬ ದೃಷ್ಟಿಯನ್ನು ಅವರು ಕಂಡಿದ್ದಾರೆ. ರಾಷ್ಟ್ರವನ್ನು ಇಷ್ಟು ದಿನ ಕಾಯಲು ನಾವು ಬಿಡುವುದಿಲ್ಲ. ನಮ್ಮ ಮೂರನೇ ಅವಧಿಯಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಇದು ಮೋದಿ ಗ್ಯಾರಂಟಿ ಎಂದು ತಿಳಿಸಿದ್ದಾರೆ.
Advertisement
Advertisement
ಬಡವರಿಗೆ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ನಗರದ ಬಡವರಿಗೆ 80 ಲಕ್ಷ ಪಕ್ಕಾ ಮನೆಗಳನ್ನು ನಿರ್ಮಿಸಿದ್ದೇವೆ. ಕಾಂಗ್ರೆಸ್‌ನ ವೇಗಕ್ಕೆ ಹೋಲಿಸಿದರೆ, ಈ ಕೆಲಸ ಮಾಡಲು 100 ವರ್ಷ ಬೇಕಾಗುತ್ತಿತ್ತು. ಆಗ ಐದು ತಲೆಮಾರುಗಳು ಕಳೆದು ಹೋಗುತ್ತಿದ್ದವು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: 10 ವರ್ಷಗಳಲ್ಲಿ ಬಿಜೆಪಿಯಿಂದಾದ ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್‌ಗೆ 100 ವರ್ಷ ಬೇಕಾಗುತ್ತೆ: ಮೋದಿ ವ್ಯಂಗ್ಯ