– ಸಿರಾಜ್, ಪ್ರಸಿದ್ಧ್ ಕೃಷ್ಣ ಮಿಂಚು
ಮೆಲ್ಬರ್ನ್: ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸಿಸ್ 5ನೇ ಮತ್ತು ಅಂತಿಮ ಟೆಸ್ಟ್‌ನ 2ನೇ ದಿನದಾಟದಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತ ತಂಡ ಅಲ್ಪ ಮೊತ್ತದ ಮುನ್ನಡೆ ಕಾಯ್ದುಕೊಂಡಿದೆ.
Advertisement
ಭಾರತದ ವೇಗಿಗಳಾದ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟೀ ಸ್ಟ್ರೋಕ್‌ನಲ್ಲಿ ಭಾರತವು ಮೇಲುಗೈ ಸಾಧಿಸಲು ಸಹಾಯ ಮಾಡಿದರು. ಇದನ್ನೂ ಓದಿ: ಬುಮ್ರಾ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತ 19ರ ಯುವ ಬ್ಯಾಟರ್!
Advertisement
Advertisement
ಸಿಡ್ನಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನ 185 ರನ್ ಗಳಿಸಿ ಆಲೌಟ್ ಆಗಿತ್ತು. ನಂತರ ಬ್ಯಾಟ್ ಆರಂಭಿಸಿದ್ದ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿತ್ತು. ಎರಡನೇ ದಿನ ಭಾರತದ ವೇಗಿಗಳು ನಡೆಸಿದ ದಾಳಿಗೆ ಆಸಿಸ್ ಬ್ಯಾಟರ್‌ಗಳು ತತ್ತರಿಸಿದರು. 181 ರನ್‌ಗಳಿಗೆ ಆಲೌಟ್ ಆಗಿ ಮುಗ್ಗರಿಸಿದರು.
Advertisement
ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ತಲಾ 3 ವಿಕೆಟ್ ಕಿತ್ತು ಮಿಂಚಿದರು. ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಕಬಳಿಸಿದರು. ಇದನ್ನೂ ಓದಿ: ಮತ್ತೆ ಕೈಕೊಟ್ಟ ಟಾಪ್ ಬ್ಯಾಟರ್ಸ್ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್; ಆಸೀಸ್ 9ಕ್ಕೆ 1 ವಿಕೆಟ್
ಸದ್ಯ ಇನ್ನಿಂಗ್ಸ್ ಆರಂಭಿಸಿರುವ ಭಾರತ, 24 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 128 ರನ್‌ಗಳಿಸಿದೆ.