ಶ್ರೀನಗರ (ರಾಂಬನ್): ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಸಲಾಲ್ ಮತ್ತು ಬಾಗ್ಲಿಹಾರ್ ಡ್ಯಾಂಗಳಲ್ಲಿ (Salal And Baglihar Dam) ಜಲಾಶಯ ಸಾಮರ್ಥ್ಯವನ್ನು ಹೆಚ್ಚಿಸುವ ಕಾಮಗಾರಿಯನ್ನು ಭಾರತ ಆರಂಭಿಸಿದೆ. ಈ ಕಾಮಗಾರಿಯಿಂದ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಸಲಾಲ್ (690 ಮೆಗಾವ್ಯಾಟ್) ಮತ್ತು ಬಾಗ್ಲಿಹಾರ್ (900 ಮೆಗಾವ್ಯಾಟ್) ಜಲವಿದ್ಯುತ್ ಯೋಜನೆಗಳಲ್ಲಿ ಜಲಾಶಯದಲ್ಲಿ ಶೇಖರವಾದ ಹೂಳು ತೆಗೆದುಹಾಕಲು ʻಫ್ಲಶಿಂಗ್ʼ ಪ್ರಕ್ರಿಯೆಯನ್ನು ಮೇ 1 ರಿಂದ 3 ದಿನಗಳ ಕಾಲ ನಡೆಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!
ಈ ಕಾಮಗಾರಿಯನ್ನು ಭಾರತದ (India) ಅತಿದೊಡ್ಡ ಜಲವಿದ್ಯುತ್ ಕಂಪನಿಯಾದ ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಹಾಗೂ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಜಂಟಿಯಾಗಿ ನಿರ್ವಹಿಸಿದ್ದಾರೆ. ಈ ಪ್ರಕ್ರಿಯೆಯಿಂದ ಜಲಾಶಯದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಿ, ವಿದ್ಯುತ್ ಉತ್ಪಾದನೆಯ ದಕ್ಷತೆಯನ್ನು ಸುಧಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿದೇಶಿ ಕಂಪನಿಗಳಿಂದಲೂ ಶಾಕ್ – ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಕೈ ಸುಟ್ಟುಕೊಂಡ ಪಾಕ್!
ಸಿಂಧೂ ನದಿ ಜಲ ಒಪ್ಪಂದದ ಪ್ರಕಾರ, ಭಾರತವು ಚಿನಾಬ್, ಝೇಲಂ ಮತ್ತು ಸಿಂಧೂ ನದಿಗಳಲ್ಲಿ ಜಲಾಶಯಗಳನ್ನು ಸಂಗ್ರಹಿಸುವ ಡ್ಯಾಂಗಳನ್ನು ನಿರ್ಮಿಸದೆ ಕೇವಲ ʻರನ್-ಆಫ್-ದಿ-ರಿವರ್ʼ ಜಲವಿದ್ಯುತ್ ಯೋಜನೆಗಳನ್ನು (Hydroelectric Projects) ನಿರ್ಮಿಸಬಹುದಾಗಿತ್ತು. ಆದರೆ, ಈ ಒಪ್ಪಂದವನ್ನು ಏಪ್ರಿಲ್ 2025ರಲ್ಲಿ ಭಾರತವು ಸ್ಥಗಿತಗೊಳಿಸಿದ ಬಳಿಕ, ಈ ಯೋಜನೆಗಳಲ್ಲಿ ಫ್ಲಶಿಂಗ್ ಕಾಮಗಾರಿಯನ್ನು ಆರಂಭಿಸಿದೆ. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ
ಪಾಕಿಸ್ತಾನದ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗೆ ಭಾರತದ ಮೂಲಕ ಹರಿಯುವ ನದಿಗಳು ಅತಿ ಮುಖ್ಯವಾಗಿವೆ. ಒಪ್ಪಂದದ ಸ್ಥಗಿತಗೊಳಿಕೆಯಿಂದಾಗಿ ಪಾಕಿಸ್ತಾನದ 80% ಕೃಷಿ ಭೂಮಿಗೆ ನೀರಿನ ಪೂರೈಕೆ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಪಾಕಿಸ್ತಾನವು ಈ ಕ್ರಮವನ್ನು ಯುದ್ಧದ ಕೃತ್ಯ ಎಂದು ಕರೆದಿದ್ದು, ಅಂತಾರಾಷ್ಟ್ರೀಯ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ.
ಫ್ಲಶಿಂಗ್ ಪ್ರಕ್ರಿಯೆಯು ಜಲಾಶಯವನ್ನು ಬಹುತೇಕ ಖಾಲಿ ಮಾಡಿ, ಹೂಳು ತೆಗೆದುಹಾಕುವ ಕಾರ್ಯವಾಗಿದೆ. ಈ ಕೆಸರಿನ ಶೇಖರಣೆಯಿಂದಾಗಿ ಸಲಾಲ್ ಮತ್ತು ಬಾಗ್ಲಿಹಾರ್ ಯೋಜನೆಗಳ ವಿದ್ಯುತ್ ಉತ್ಪಾದನೆ ಸಾಮರ್ಥ್ಯವು ಗಣನೀಯವಾಗಿ ಕಡಿಮೆಯಾಗಿತ್ತು. ಈ ಪ್ರಕ್ರಿಯೆಯಿಂದ ವಿದ್ಯುತ್ ಉತ್ಪಾದನೆಯ ದಕ್ಷತೆ ಹೆಚ್ಚಾಗುತ್ತದೆ ಮತ್ತು ಟರ್ಬೈನ್‌ಗಳಿಗೆ ಹಾನಿಯಾಗದಂತೆ ರಕ್ಷಿಸಲಾಗುತ್ತದೆ ಎಂದು ಒಬ್ಬ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ