ಹರಾರೆ: ಟೀಂ ಇಂಡಿಯಾದ ತ್ರಿವಳಿ ಬೌಲರ್‌ಗಳ ಘಾತಕ ದಾಳಿ ಮತ್ತು ಶಿಖರ್ ಧವನ್, ಶುಭಮನ್ ಗಿಲ್ ಜೋಡಿಯ ಬೊಂಬಾಟ್ ಬ್ಯಾಟಿಂಗ್‌ಗೆ ಜಿಂಬಾಬ್ವೆ ಥಂಡಾ ಹೊಡೆದಿದೆ. ಇತ್ತ ಭಾರತ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.
Advertisement
ಜಿಂಬಾಬ್ವೆ ನೀಡಿದ 189 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ಧವನ್, ಗಿಲ್ ಮೊದಲ ವಿಕೆಟ್‌ಗೆ ಅಜೇಯ 192 ರನ್ ಬಾರಿಸಿ ಇನ್ನೂ 115 ಎಸೆತ ಬಾಕಿ ಇರುವಂತೆಯೇ 10 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?
Advertisement
Advertisement
ಧವನ್ ಅಜೇಯ 81 ರನ್ (113 ಎಸೆತ, 8 ಬೌಂಡರಿ) ಮತ್ತು ಗಿಲ್ 82 ರನ್ (72 ಎಸೆತ, 10 ಬೌಂಡರಿ, 1 ಸಿಕ್ಸ್) ಚಚ್ಚಿ ಜಿಂಬಾಬ್ವೆ ಬೌಲರ್‌ಗಳ ಬೆವರಿಳಿಸಿದರು. ಆರಂಭದಿಂದಲೇ ಸಣ್ಣ ಮೊತ್ತವನ್ನು ಚೇಸ್ ಮಾಡುವ ಬರದಲ್ಲಿ ಮುನ್ನಡೆದ ಈ ಜೋಡಿಗೆ ಈ ಗುರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಭಾಸವಾಯಿತು. ಅಂತಿಮವಾಗಿ 30.5 ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 192 ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟರು.
Advertisement
ಈ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ.ಎಲ್ ರಾಹುಲ್ ತವರಿನ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಜಿಂಬಾಬ್ವೆ ಬ್ಯಾಟ್ಸ್‌ಮ್ಯಾನ್‌ಗಳು ನಾ ಮುಂದು, ತಾ ಮುಂದು ಎಂಬಂತೆ ಪೆವಿಲಿಯನ್ ಪರೇಡ್ ಆರಂಭಿಸಿದರು. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? – ನಡೆಯುತ್ತಾ ಮಹಿಳಾ ವಿಶ್ವಕಪ್?
ಚಾಹರ್, ಅಕ್ಷರ್, ಕೃಷ್ಣ ವಿಕೆಟ್ ಬೇಟೆ:
ಆರಂಭದಲ್ಲೇ ಭಾರತದ ಬೌಲರ್‌ಗಳು ಜಿಂಬಾಬ್ವೆ ಬ್ಯಾಟ್ಸ್‌ಮ್ಯಾನ್‌ಗಳ ವಿರುದ್ಧ ಮೇಲುಗೈ ಸಾಧಿಸಿದರು. ಅದರಲ್ಲೂ ವಿಶ್ರಾಂತಿಯ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ದೀಪಕ್ ಚಹರ್ ಜಿಂಬಾಬ್ವೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳಿಗೆ ಡಗೌಟ್ ದಾರಿ ತೋರಿಸಿದರು. ಆ ಬಳಿಕ ಪ್ರಸಿದ್ಧ್ ಕೃಷ್ಣ ದಾಳಿ ಆರಂಭಿಸಿ ವಿಕೆಟ್ ಬೇಟೆ ಆರಂಭಿಸಿದರು. ಇತ್ತ ಜಿಂಬಾಬ್ವೆ 20 ಓವರ್‌ಗಳಲ್ಲಿ 83 ರನ್‍ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಬಳಿಕ ಜಿಂಬಾಬ್ವೆ ನಾಯಕ ರೆಗಿಸ್ ಚಕಬ್ವಾ 35 ರನ್ (51 ಎಸೆತ, 4 ಬೌಂಡರಿ), ರಿಚರ್ಡ್ ನಾಗರವ 34 ರನ್ (42 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಬ್ರಾಡ್ ಇವಾನ್ಸ್ ಅಜೇಯ 33 ರನ್ (29 ಎಸೆತ, 3 ಬೌಂಡರಿ, 1 ಸಿಕ್ಸ್) ನೆರವಿನಿಂದ 180ರ ಗಡಿದಾಟಿತು. ವೇಗಿಗಳ ದಾಳಿಯ ಬಳಿಕ ಅಕ್ಷರ್ ಪಟೇಲ್ ಜಿಂಬಾಬ್ವೆ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾದರು.
ಅಂತಿಮವಾಗಿ ಜಿಂಬಾಬ್ವೆ 40.3 ಓವರ್‌ಗಳ ಅಂತ್ಯಕ್ಕೆ 189 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಇನ್ನುಳಿದ ಒಂದು ವಿಕೆಟ್ ಸಿರಾಜ್ ತನ್ನದಾಗಿಸಿಕೊಂಡರು.