ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಭರ್ಜರಿ ಶತಕದ ನೆರವಿನಿಂದ ಭಾರತ 155 ರನ್‍ಗಳ ಜಯ ಸಾಧಿಸಿದೆ.
Advertisement
ಟೀಂ ಇಂಡಿಯಾ ನೀಡಿದ 317 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ಬ್ಯಾಟರ್‌ಗಳು 162 ರನ್‌ಗಳಿಗೆ ಸರ್ವಪನತ ಕಂಡು ಸೋಲೊಪ್ಪಿಕೊಂಡರು. ಭಾರತ 155 ರನ್‌ಗಳ ಜಯದೊಂದಿಗೆ ಕೂಟದ ಎರಡನೇ ಬೃಹತ್ ಮೊತ್ತದ ಜಯ ದಾಖಲಿಸಿದೆ. ಇದನ್ನೂ ಓದಿ: ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ
Advertisement
Advertisement
ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ, ಡಿಯಾಂಡ್ರಾ ಡಾಟಿನ್ 62 ರನ್ (46 ಎಸೆತ, 10 ಬೌಂಡರಿ, 1 ಸಿಕ್ಸ್) ಮತ್ತು ಹೇಲಿ ಮ್ಯಾಥ್ಯೂಸ್ ಜೋಡಿ 43 ರನ್ (36 ಎಸೆತ, 6 ಬೌಂಡರಿ) ಬಾರಿಸಿ ಮೊದಲ ವಿಕೆಟ್‍ಗೆ 100 ರನ್‍ಗಳ ಜೊತೆಯಾಟವಾಡಿತು. ಈ ಇಬ್ಬರು ಬ್ಯಾಟರ್‌ಗಳು ಔಟ್ ಆದ ಬಳಿಕ ಕುಸಿತ ಕಂಡ ವಿಂಡೀಸ್, ಭಾರತಕ್ಕೆ ಸವಾಲು ಅನಿಸಲೇ ಇಲ್ಲ. ಭಾರತದ ಬೌಲರ್‌ಗಳು ವಿಂಡೀಸ್ ಬ್ಯಾಟರ್‌ಗಳ ವಿಕೆಟ್ ಬೇಟೆಯನ್ನು ಸರಾಗವಾಗಿ ಮುಂದುವರಿಸಿ 162 ರನ್‌ಗಳಿಗೆ ಕಟ್ಟಿಹಾಕಿ ಗೆಲ್ಲುವಂತೆ ಮಾಡಿದರು. ಇದನ್ನೂ ಓದಿ: ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್
Advertisement
ಭಾರತದ ಪರ ಸ್ನೇಹ ರಾಣಾ 3 ವಿಕೆಟ್ ಕಿತ್ತು ಮಿಂಚಿದರೆ, ಮೇಘನಾ ಸಿಂಗ್ 2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್, ಜೂಲನ್ ಗೋಸ್ವಾಮಿ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.
ಸ್ಮೃತಿ ಮಂದಾನ, ಕೌರ್ ಬ್ಯಾಟಿಂಗ್ ವೈಭವ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟರ್‌ಗಳು ವಿಂಡೀಸ್ ಬೌಲರ್‌ಗಳ ಬೆವರಿಳಿಸಿದರು. ಅದರಲ್ಲೂ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಮನಸೋ ಇಚ್ಛೆ ಬ್ಯಾಟ್ ಬೀಸಿದರು. ಈ ಜೋಡಿ 4 ವಿಕೆಟ್‍ಗೆ 184 ರನ್ (174 ಎಸೆತ) ಜೊತೆಯಾಟವಾಡಿ ಮಿಂಚಿತು. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ನೇಮಕ
ಸ್ಮೃತಿ ಮಂದಾನ 123 ರನ್ (119 ಎಸೆತ, 13 ಬೌಂಡರಿ, 2 ಸಿಕ್ಸ್) ಚಚ್ಚಿದರೆ, ಹರ್ಮನ್‍ಪ್ರೀತ್ ಕೌರ್ 109 ರನ್ (107 ಎಸೆತ, 10 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಂಡೀಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇವರಿಬ್ಬರನ್ನು ಹೊರತುಪಡಿಸಿ ಯಾಸ್ತಿಕಾ ಭಾಟಿಯಾ 31 ರನ್ (21 ರನ್, 21 ಎಸೆತ, 6 ಬೌಂಡರಿ) ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 317 ರನ್ ಗಳಿಸಿತು.
ರನ್ ಏರಿದ್ದು ಹೇಗೆ?
50 ರನ್ 42 ಎಸೆತ
100 ರನ್ 121 ಎಸೆತ
150 ರನ್ 169 ಎಸೆತ
200 ರನ್ 217 ಎಸೆತ
250 ರನ್ 251 ಎಸೆತ
300 ರನ್ 287 ಎಸೆತ