– 17 ವರ್ಷಗಳ ದಾಖಲೆ ಬ್ರೇಕ್ ಮಾಡುತ್ತಾ ವಿಂಡೀಸ್?
ಆ್ಯಂಟಿಗುವಾ: ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಿಂದ ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಇನ್ನಿಂಗ್ಸ್ ನ 24 ಓವರ್ ವೇಳೆಗೆ ಭಾರತವು 3 ವಿಕೆಟ್ ನಷ್ಟಕ್ಕೆ 68 ರನ್ ದಾಖಲಿಸಿದೆ. ಮಯಾಂಕ್ ಅಗರ್ವಾಲ್ 5 ರನ್ ಹಾಗೂ ಚೇತೇಶ್ವರ್ ಪೂಜಾರ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾನಕ್ಕೆ ಇಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 9 ರನ್ ದಾಖಲಿಸಿ ಪೆವಿಲಿಯನ್ ಸೇರಿಕೊಂಡರು.
Advertisement
Advertisement
ಆಗಸ್ಟ್ 1 ರಂದು ಪ್ರಾರಂಭವಾದ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಇದು ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಭಾರತ ತಂಡವು 17 ವರ್ಷಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿಲ್ಲ. ಜಮೈಕಾದಲ್ಲಿ ನಡೆದ ಪಂದ್ಯದಲ್ಲಿ ಭಾರತವು ಕೊನೆಯದಾಗಿ 2002ರಲ್ಲಿ ಸೋತಿತ್ತು. ಅಂದಿನಿಂದ ಉಭಯ ತಂಡಗಳ ನಡುವೆ 21 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ ತಂಡವು 12 ಪಂದ್ಯಗಳನ್ನು ಗೆದ್ದಿದ್ದು, 9 ಪಂದ್ಯಗಳು ಡ್ರಾ ಆಗಿವೆ. ಹಿಂದಿನ ಸರಣಿಯಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು 2-0ರಿಂದ ಸೋಲಿಸಿತ್ತು.
Advertisement
ಆರ್.ಅಶ್ವಿನ್, 2016ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಸರ್ ವಿವ್ ರಿಚರ್ಡ್ಸ್ ಮೈದಾನದಲ್ಲಿ ಒಂದೇ ಇನಿಂಗ್ಸ್ ನಲ್ಲಿ 7 ವಿಕೆಟ್ ಉರುಳಿಸಿದ್ದರು. ಅಷ್ಟೇ ಅಲ್ಲದೆ ಶತಕವನ್ನೂ ಬಾರಿಸಿದ್ದರು. ಇಂತಹ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಗತಕಾಲದ ವೈಭವಕ್ಕೆ ಮರಳಲು ಹಾತೊರೆಯುತ್ತಿದ್ದರು. ಆದರೆ ಏಕೈಕ ಸ್ಪಿನ್ನರ್ ತಂತ್ರಗಾರಿಕೆಗೆ ಮುಂದಾದ ನಾಯಕ ಕೊಹ್ಲಿ ರವೀಂದ್ರ ಜಡೇಜಾ ಅವರಿಗೆ ಮಣೆ ಹಾಕಿದ್ದಾರೆ. ಇದರಿಂದಾಗಿ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್‍ದೀಪ್ ಯಾದವ್ ಅವಕಾಶ ವಂಚಿತವಾಗಿದ್ದಾರೆ.
Advertisement
ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಆರಂಭಿಕವಾಗಿ ಕಣಕ್ಕೆ ಇಳಿಸುವಂತೆ ಈ ಹಿಂದೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಸಲಹೆ ನೀಡಿದ್ದರು. ಆದರೆ ರೋಹಿತ್ ಶರ್ಮಾರನ್ನು ಈ ಪಂದ್ಯದಲ್ಲಿ ಕೈಬಿಟ್ಟಿರುವು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರು ಆರಂಭಿಕರಾಗಿ ಕಣಕ್ಕೆ ಇಳಿದರು.
ಜಸ್‍ಪ್ರಿತ್ ಬುಮ್ರಾ:
ವಿಶ್ರಾಂತಿಯಲ್ಲಿದ್ದ ಬೌಲರ್ ಜಸ್‍ಪ್ರಿತ್ ಬುಮ್ರಾ ಇದೀಗ ತಂಡಕ್ಕೆ ಮರಳಿದ್ದಾರೆ. ಈ ಮೂಲಕ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ಬಂದಿದ್ದು, ದೊರಕಿದಂತಾಗಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ತಲಾ 3 ವಿಕೆಟ್ ಉರುಳಿಸಿರುವ ಉಮೇಶ್ ಯಾದವ್ ಮತ್ತು ಕುಲ್ದೀಪ್ ಯಾದವ್ ಟೀಂನ 11ರ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ದಾಖಲೆ:
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 47ನೇ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಅವಧಿಯಲ್ಲಿ ಟೀಂ ಇಂಡಿಯಾ 46 ಪಂದ್ಯಗಳ ಪೈಕಿ 26ರಲ್ಲಿ ಗೆಲುವು ಸಾಧಿಸಿದೆ. ವಿಶೇಷವೆಂದರೆ ಈ 27 ಟೆಸ್ಟ್ ಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 21 ಪಂದ್ಯಗಳನ್ನು ಗೆದ್ದಿದ್ದು, ಕೇವಲ 1 ಪಂದ್ಯದಲ್ಲಿ ಸೋಲು ಕಂಡಿದೆ. ಉಳಿದಂತೆ 4 ಪಂದ್ಯಗಳು ಡ್ರಾ ಆಗಿವೆ. ಗುರುವಾರ ಆರಂಭವಾಗಿರುವ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂಡ್ಯದಲ್ಲಿ ಭಾರತ ಗೆದ್ದರೆ, ಧೋನಿಯೊಂದಿಗೆ ಜಂಟಿಯಾಗಿ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಆಗಲಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡವು 60 ಟೆಸ್ಟ್ ಪಂದ್ಯಗಳ ಪೈಕಿ 26ರಲ್ಲಿ ಜಯಗಳಿಸಿತ್ತು.
ಎರಡೂ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್‍ವೈಟ್, ಡ್ಯಾರೆನ್ ಬ್ರಾವೋ, ಶಾಮರ್ ಬ್ರೂಕ್ಸ್, ಜಾನ್ ಕ್ಯಾಂಪ್‍ಬೆಲ್, ರೋಸ್ಟನ್ ಚೇಸ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮಿಯರ್, ಶೈ ಹೋಪ್, ಕೆಮರ್ ರೋಚ್.