ಮುಂಬೈ: ಕನ್ನಡಿಗ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿರಾವೇಷದ ಅರ್ಧಶತಕದಿಂದ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 67 ರನ್‍ಗಳಿಂದ ಗೆದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಟಿ20 ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 67 ರನ್‍ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತವು 2-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿದೆ. ವೆಸ್ಟ್ ಇಂಡೀಸ್ ಶಿಮ್ರೊನ್ ಹೆಟ್ಮೆಯರ್ 41 ರನ್, ಕೀರನ್ ಪೋಲಾರ್ಡ್ 68 ರನ್ ಸಹಾಯದಿಂದ 173 ರನ್ ಗಳಿಸಲು ಶಕ್ತವಾಯಿತು.
Advertisement
Advertisement
ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ವಿಂಡೀಸ್ ಪಡೆ ಇನ್ನಿಂಗ್ಸ್ ನ 2ನೇ ಓವರ್ ನಲ್ಲಿ ಬ್ರೆಂಡನ್ ಕಿಂಗ್ (5 ರನ್) ವಿಕೆಟ್ ಕಳೆದುಕೊಂಡಿತು. ಮೊದಲ ವಿಕೆಟ್ ಪಡೆಯುವ ಮೂಲಕ ಭುವನೇಶ್ವರ್ ಕುಮಾರ್ ತಂಡಕ್ಕೆ ಆಸರೆಯಾದರು. ಈ ಬೆನ್ನಲ್ಲೇ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹಾರ್ ಕ್ರಮವಾಗಿ ಲೆಂಡ್ಲೆ ಸಿಮನ್ಸ್ (7 ರನ್) ಹಾಗೂ ನಿಕೋಲಸ್ ಪೂರನ್ (ಶೂನ್ಯಕ್ಕೆ) ವಿಕೆಟ್ ಪಡೆದರು. ಈ ವೇಳೆ ಮೂರು ವಿಕೆಟ್ ನಷ್ಟಕ್ಕೆ ವಿಂಡೀಸ್ 17 ರನ್ ಪೇರಿಸಿತು.
Advertisement
ಶಿಮ್ರೊನ್ ಹೆಟ್ಮೆಯರ್ ಜೊತೆಗೂಡಿದ ನಾಯಕ ಪೋಲಾರ್ಡ್ ವಿಕೆಟ್ ಕಾಯ್ದುಕೊಂಡು ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಈ ಜೋಡಿಯು 4ನೇ ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿತು. ಈ ಬೌಲಿಂಗ್ ಕಮಾಲ್ ತೋರಿದ ಕುಲದೀಪ್ ಯಾದವ್ ಹೆಟ್ಮೆಯರ್ ವಿಕೆಟ್ ಕಿತ್ತರು. 24 ಎಸೆತಗಳಲ್ಲಿ ಹೆಟ್ಮೆಯರ್ (5 ಸಿಕ್ಸರ್, ಬೌಂಡರಿ) 41 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಜೇಸನ್ ಹೋಲ್ಡರ್ (8 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.
Advertisement
ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದ ಪೋಲಾರ್ಡ್ ಕೂಡ ಇನ್ನಿಂಗ್ಸ್ ನ 15ನೇ ಓವರ್ ನಲ್ಲಿ ವಿಕೆಟ್ ನೀಡಿದರು. ಪೋಲಾರ್ಡ್ 39 ಎಸೆತಗಳಲ್ಲಿ (5 ಬೌಂಡರಿ, 6 ಸಿಕ್ಸರ್) 68 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು. ಈ ಮೂಲಕ ವೆಸ್ಟ್ ಇಂಡೀಸ್ 8 ವಿಕೆಟ್‍ಗಳ ನಷ್ಟಕ್ಕೆ 173 ರನ್ ಗಳಿಸಲು ಶಕ್ತವಾಯಿತು.
ಟೀಂ ಇಂಡಿಯಾ ಬೌಲರ್ ಗಳಾದ ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹಾರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ಗಳು 19 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದರೆ, ವೆಸ್ಟ್ ಇಂಡೀಸ್ ತಂಡವು 12 ಬೌಂಡರಿ ಹಾಗೂ 12 ಸಿಕ್ಸರ್ ಸಿಡಿಸಿದೆ.
It's all over! #TeamIndia beat West Indies in the 3rd T20I to win the series 2-1???? #INDvWI @Paytm pic.twitter.com/REXorDu5KP
— BCCI (@BCCI) December 11, 2019
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ರೋಹಿತ್ ಶರ್ಮಾ 71 ರನ್, ಕೆ.ಎಲ್.ರಾಹುಲ್ 91 ರನ್, ವಿರಾಟ್ ಕೊಹ್ಲಿ 70 ರನ್‍ಗಳಿಂದ 3 ವಿಕೆಟ್ ನಷ್ಟಕ್ಕೆ 240 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.
ಯುವಿ ಸರಿಗಟ್ಟಿದ ರಾಹುಲ್:
ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಯುವಿ 51 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರೆ ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದಾರೆ.
ಹಿಟ್‍ಮ್ಯಾನ್ ಸಿಕ್ಸರ್ ದಾಖಲೆ:
ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದಾರೆ. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು. 360 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಈ ಸಾಧನೆ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ-20ಯಲ್ಲಿ 120 ಸಿಕ್ಸರ್ ಸೇರಿ ಒಟ್ಟು 404 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.
ಕೊಹ್ಲಿ-ರೋಹಿತ್ ಸಮಬಲ:
ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಈ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದರು. ರೋಹಿತ್ ಶರ್ಮಾ ಹಾಗೂ ಕೊಹ್ಲಿ ತಲಾ 2,633 ರನ್ ಗಳಿಸಿದ್ದಾರೆ.
WATCH: Catch marvel from Shivam Dube
BEAUTY! Shivam Dube takes an outstanding catch in the deep to dismiss Nicholas Pooran
????https://t.co/z7voG4L2rG #INDvWI pic.twitter.com/rb49NwvqJp
— BCCI (@BCCI) December 11, 2019