ಮ್ಯಾಂಚೆಸ್ಟರ್: ವಿಶ್ವಕಪ್ ಮಹಾಯುದ್ಧದಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರುವ ಬ್ಲೂ ಬಾಯ್ಸ್ ಗೆ ಇಂದು ವೆಸ್ಟ್ ಇಂಡೀಸ್ ಎದುರಾಗಲಿದೆ. ಮ್ಯಾಂಚೇಸ್ಟರ್ ನಲ್ಲಿ ಪಂದ್ಯ ನಡೆಯಲಿದ್ದು ಭಾರೀ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ.
ವಿಶ್ವಕಪ್ ಕದನದಲ್ಲಿ 1992 ರ ಬಳಿಕ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಗೆಲುವನ್ನೇ ಸಾಧಿಸಿಲ್ಲ. 1996, 2011, 2015 ರಲ್ಲಿ ಸೆಣಸಾಟವಾಡಿದರೂ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಯಲಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದ್ದು, ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.
Advertisement
#TeamIndia openers having a go at in the nets ahead of the game against West Indies.#CWC19 pic.twitter.com/Z19Nvt1Ux7
— BCCI (@BCCI) June 26, 2019
Advertisement
ಉಭಯ ತಂಡಗಳು ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ವೇಗಿ ಭುವನೇಶ್ವರ್ ಇನ್ನು ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲೂ ಮೊಹಮದ್ ಶಮಿ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲೂ ಶಮಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ವಿಂಡೀಸ್ ಬೌಲಿಂಗ್ ಬಲಿಷ್ಠವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್‍ಮನ್‍ಗಳು ರಣತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳಲ್ಲಿ 4 ರಲ್ಲಿ ಸೋಲುಂಡಿರುವ ವಿಂಡೀಸ್ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಇತ್ತ ಸೆಮಿಫೈನಲ್ ಹೊಸ್ತಿಲಲ್ಲಿರುವ ಕೊಹ್ಲಿ ಸೈನ್ಯ, ಇಂದಿನ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನಗಟ್ಟಿಮಾಡಿಕೊಳ್ಳಲು ತಂತ್ರ ರೂಪಿಸಿದೆ.
Advertisement
All set for the game tomorrow ????????#TeamIndia pic.twitter.com/86tRlhbWUj
— BCCI (@BCCI) June 26, 2019
Advertisement
ಭಾರತದ ವಿರುದ್ಧ ಪಂದ್ಯ ಗೆದ್ದು ಮುಂದಿನ ಮೂರು ಮ್ಯಾಚ್ ಫಲಿತಾಂಶ ತಮ್ಮತ್ತ ಮಾಡಿಕೊಳ್ಳುವ ಮೂಲಕ ಸೆಮಿಫೈನಲ್ ಜೀವಂತವಾಗಿರಿಸಿಕೊಳ್ಳಲು ವಿಂಡೀಸ್ ಪ್ಲಾನ್ ಮಾಡಿಕೊಂಡಿದೆ. ವಿಂಡೀಸ್ ಇಂದಿನ ಪಂದ್ಯವನ್ನ ಗೆಲ್ಲಲೇಬೇಕೆಂಬ ಒತ್ತಡದಲ್ಲಿದೆ. ಇತ್ತ ಸತತ ಗೆಲುವು ದಾಖಲಿಸುತ್ತಾ ಬಂದಿರೋ ಟೀಂ ಇಂಡಿಯ ಜಯದ ಪತಾಕೆ ಹಾರಿಸಲು ಬುಧವಾರ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದೆ.
What is the reason behind @MdShami11's version 2.0? Bowling coach B Arun has the answers ????️????️ #TeamIndia #INDvWI #CWC19 pic.twitter.com/JO7XvychwU
— BCCI (@BCCI) June 26, 2019
ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಹೀಗಾಗಿ ಅಭಿಮಾನಿಗಳಿಗೆ ಪಂದ್ಯದ ರಸದೂಟ ಸವಿಯಬಹುದಾಗಿದೆ. ಇಂದಿನ ಪಂದ್ಯದಲ್ಲಿ ಬ್ಯಾಟ್‍ನದ್ದೇ ಸದ್ದು ಜೋರಾಗಲಿದೆ. ಬಿಗ್‍ಫೈಟ್‍ಗೆ ಪಂದ್ಯ ಸಾಕ್ಷಿಯಾಗಲಿದೆ.